ನ್ಯೂಯಾರ್ಕ್/ವಾಷಿಂಗ್ಟನ್: ಇರಾನ್ನ ಪೆಟ್ರೋಲಿಯಂ ಹಾಗೂ ಅದರ ಉತ್ನನ್ನಗಳ ಮಾರಾಟದಲ್ಲಿ ತೊಡಗಿರುವ ಭಾರತದ ಕಂಪನಿಗಳು ಹಾಗೂ ವ್ಯಕ್ತಿಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ನಿರ್ಬಂಧ ಹೇರಿದೆ.

ಭಾರತೀಯ ಪ್ರಜೆಗಳಾದ ಝೈರ್ ಹುಸೇನ್ ಇಕ್ಬಾಲ್ ಹುಸೇನ್ ಸಯೇದ್, ಝುಲ್ಫೀಕರ್ ಹುಸೇನ್ ರಿಜ್ವಿ ಸಯೇದ್, ಕಂಪನಿಗಳಾದ ಮಹಾರಾಷ್ಟ್ರ ಮೂಲದ ಆರ್ಎನ್ ಶಿಪ್ ಮ್ಯಾನೇಜ್ಮೆಂಟ್ ಪ್ರೈವೆಟ್ ಲಿಮಿಟೆಡ್ ಹಾಗೂ ಪುಣೆ ಮೂಲದ ಟಿಆರ್6 ಪೆಟ್ರೊ ಇಂಡಿಯಾ ಎಲ್ಎಲ್ಪಿ ಮೇಲೆ ನಿರ್ಬಂಧ ಹೇರಲಾಗಿದೆ.

‘ಈ ಮಾರಾಟ ಪ್ರಕ್ರಿಯೆಯಿಂದ ಗಳಿಸುವ ಹಣವು, ಇರಾನ್ ಪರ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಗುಂಪುಗಳಿಗೆ ಹಾಗೂ ಅವುಗಳು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಕೆಯಾಗುತ್ತಿದೆ. ಇವು ಅಮೆರಿಕಕ್ಕೆ ಒಡ್ಡಲಾಗುತ್ತಿರುವ ನೇರ ಬೆದರಿಕೆಗಳಾಗಿವೆ’ ಎಂದು ಅಮೆರಿಕ ಹೇಳಿದೆ.

‘ಅಕ್ರಮವಾಗಿ ತೈಲ ಮಾರಾಟದಿಂದ ಸಿಗುವ ಹಣವನ್ನು ಕೆಲ ನೌಕಾಸಂಸ್ಥೆಗಳು ಇರಾನ್ ಸರ್ಕಾರ ನಡೆಸುತ್ತಿರುವ ಆಕ್ರಮಣಕಾರಿ ಚಟುವಟಿಕೆಗಳಿಗೆ ನೀಡುತ್ತಿವೆ. ಕೆಲ ವಿಮಾನಯಾನ ಸಂಸ್ಥೆಗಳು ಇರಾನ್ ಬೆಂಬಲಿತ ಭಯೋತ್ಪಾದಕ ಗುಂಪುಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿವೆ. ಇಂತಹ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಲಾಗಿದೆ’ ಎಂದು ಅಮೆರಿಕದ ವಿದೇಶಾಂಗ ಮತ್ತು ಖಜಾನೆ ಇಲಾಖೆಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.