ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಲೆವಿಸ್ಟನ್‌ ನಗರದಲ್ಲಿ ಗುಂಡಿನ ದಾಳಿ: 16 ಮಂದಿ ಸಾವು

Published 26 ಅಕ್ಟೋಬರ್ 2023, 2:38 IST
Last Updated 26 ಅಕ್ಟೋಬರ್ 2023, 7:04 IST
ಅಕ್ಷರ ಗಾತ್ರ

ಲೆವಿಸ್ಟನ್‌ (ಅಮೆರಿಕ): ಅಮೆರಿಕದ ಮೈನೆ ರಾಜ್ಯದಲ್ಲಿನ ಲೆವಿಸ್ಟನ್‌ ನಗರದ ರೆಸ್ಟೋರೆಂಟ್‌ ಮತ್ತು ‘ಬೌಲಿಂಗ್‌ ಅಲೈ’ ಕೇಂದ್ರದ ಮೇಲೆ  ದಾಳಿ ನಡೆಸಿದ ಬಂದೂಕುಧಾರಿಯೊಬ್ಬ ಮನ ಬಂದಂತೆ ಗುಂಡುಗಳನ್ನು ಹಾರಿಸಿ, 16 ಜನರನ್ನು ಕೊಂದಿದ್ದಾನೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ.

ಬಳಿಕ ಕತ್ತಲಿನಲ್ಲಿ ತಪ್ಪಿಸಿಕೊಂಡಿರುವ ಬಂದೂಕುಧಾರಿಯ ಪತ್ತೆಗೆ ನೂರಾರು ಪೊಲೀಸರು ಶೋಧ ಕೈಗೊಂಡಿದ್ದಾರೆ. ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು, ಮನೆಯಿಂದ ಹೊರಬರದಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಬಂದೂಕುಧಾರಿಯನ್ನು ರಾಬರ್ಟ್‌ ಕಾರ್ಡ್‌ (40) ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯು ಬುಧವಾರ ರಾತ್ರಿ 7 ಗಂಟೆ ಸುಮಾರಿನಲ್ಲಿ ಗುಂಡಿನ ದಾಳಿ ನಡೆಸಿದ್ದ.  ರಾಬರ್ಟ್‌ ಅನ್ನು ಸೇನಾ ಮೀಸಲು ಪಡೆಯಲ್ಲಿರುವ ಬಂದೂಕು ತರಬೇತುದಾರ ಎಂದು ಪೊಲೀಸ್‌ ಬುಲೆಟಿನ್‌ನಲ್ಲಿ ಹೇಳಲಾಗಿದೆ. ಈ ವ್ಯಕ್ತಿಯನ್ನು ಮೈನೆ ರಾಜ್ಯದ ಸಾಕೊದಲ್ಲಿ ತರಬೇತಿ ನೀಡಲು ನಿಯೋಜಿಸಲಾಗಿತ್ತು ಎಂದು ಅದು ಹೇಳಿದೆ.

ರಾಬರ್ಟ್‌ ಅವರು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ 2023ರ ಬೇಸಿಗೆಯಲ್ಲಿ ಎರಡು ವಾರಗಳವರೆಗೆ ಚಿಕಿತ್ಸೆ ಪಡೆದುಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘10 ಗುಂಡುಗಳು ಹಾರಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ. ಮೊದಲಿಗೆ ಇದನ್ನು ಬಲೂನ್‌ ಸಿಡಿತದಿಂದ ಬಂದ ಶಬ್ದ ಎಂದು ಕೊಂಡಿದ್ದೆ. ಆದರೆ, ವ್ಯಕ್ತಿಯೊಬ್ಬ ಆಯುಧ ಹಿಡಿದು ಈ ಕೃತ್ಯ ಎಸಗಿದ್ದನ್ನು ಗಮನಿಸಿದ್ದೇನೆ’ ಎಂದು ಪ್ರತ್ಯಕ್ಷದರ್ಶಿ ಬ್ರಾಂಡನ್‌ ಎಂಬುವರು ಸುದ್ದಿ ಸಂಸ್ಥೆಗೆ ತಿಳಿಸಿದರು. 

‘ಶಂಕಿತ ವ್ಯಕ್ತಿಯು ತನ್ನ ಭುಜದ ಮೇಲೆ ಆಯುಧ ಎತ್ತಿಕೊಂಡು ಬರುತ್ತಿರುವುದೂ ಸೇರಿದಂತೆ ಎರಡು ಚಿತ್ರಗಳನ್ನು ಆಂಡ್ರೊಸ್ಕೊಗಿನ್‌ ಕೌಂಟಿಯ ಶೆರಿಫ್‌ ಕಚೇರಿ ತನ್ನ ಫೇಸ್‌ಬುಕ್‌ ಪುಟದಲ್ಲಿ ಬಿಡುಗಡೆ ಮಾಡಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಗವರ್ನರ್‌ ಜಾನೆಟ್‌ ಮಿಲ್ಸ್‌ ಮತ್ತು ರಾಜ್ಯದ ಸೆನೆಟ್‌ ಸದಸ್ಯರೊಂದಿಗೆ ದೂರವಾಣಿ ಕರೆ ಮಾಡಿ ಘಟನೆಯ ವಿವರ ಪಡೆದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT