ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜನರೊಂದಿಗೆ ಅಮೆರಿಕ; 26/11 ದಾಳಿಯ ನೆನಪಲ್ಲಿ ಟ್ರಂಪ್‌ ಟ್ವೀಟ್‌

Last Updated 27 ನವೆಂಬರ್ 2018, 8:50 IST
ಅಕ್ಷರ ಗಾತ್ರ

ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ಮುಂಬೈನಲ್ಲಿ ಭಯೋತ್ಪಾದಕರು ನಡೆಸಿದ್ದ ಅಟ್ಟಹಾಸದಲ್ಲಿ 160 ಮಂದಿ ಸಾವಿಗೀಡಾಗಿದ್ದರು ಹಾಗೂ ನೂರಾರು ಮಂದಿ ಗಾಯಗೊಂಡಿದ್ದರು. ದಾಳಿಯಲ್ಲಿ ಹುತಾತ್ಮರಾದ ಯೋಧರು, ಪೊಲೀಸರನ್ನು ಸ್ಮರಿಸಿ ಸೋಮವಾರ ದೇಶದಾದ್ಯಂತ ಗೌರವ ಸಮರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಅಮೆರಿಕ 26/11 ದಾಳಿಯ ರುವಾರಿಯ ಸುಳಿವು ನೀಡಿದವರಿಗೆ ₹35 ಕೋಟಿ ಬಹುಮಾನ ನೀಡುವುದಾಗಿಯೂ ಘೋಷಿಸಿತು.

ಇದರ ಬೆನ್ನಲೇ ಡೊನಾಲ್ಡ್‌ ಟ್ರಂಪ್‌ ಟ್ವೀಟ್ ಮಾಡಿದ್ದು, ‘ಮುಂಬೈನಲ್ಲಿ ಉಗ್ರರ ದಾಳಿ ನಡೆದು 10 ವರ್ಷ ಕಳೆದಿರುವ ಸಮಯದಲ್ಲಿ ನ್ಯಾಯಕ್ಕಾಗಿ ಕಾತುರರಾಗಿರುವ ಭಾರತೀಯರ ಬೆಂಬಲಕ್ಕೆ ಅಮೆರಿಕ ನಿಲ್ಲುತ್ತದೆ. ದಾಳಿಯಲ್ಲಿ ಆರು ಮಂದಿ ಅಮೆರಿಕನ್ನರು ಸೇರಿ 166 ಮಂದಿ ಮುಗ್ದರ ಹತ್ಯೆಯಾಯಿತು. ಭಯೋತ್ಪಾದನೆ ಗೆಲುವಿನ ಅಟ್ಟಹಾಸ ಬೀರಲು ನಾವು ಎಂದಿಗೂ ಬಿಡುವುದಿಲ್ಲ ಅಥವಾ ಗೆಲುವಿನ ಸಮೀಪ ಬರಲೂ ಬಿಡೆವು’ ಎಂದಿದ್ದಾರೆ.

ಮುಂಬೈನಲ್ಲಿ 26/11ರ ದಾಳಿ ನಡೆಸಿದವರು ಯಾವುದೇ ದೇಶದಲ್ಲಿದ್ದರೂ ಅವರ ಬಗ್ಗೆ ಸುಳಿವು ನೀಡಿದವರಿಗೆ 5 ದಶಲಕ್ಷ ಅಮೆರಿಕನ್‌ ಡಾಲರ್‌ (₹35 ಕೋಟಿ) ಬಹುಮಾನ ನೀಡುವುದಾಗಿ ಅಮೆರಿಕ ಈಗಾಗಲೇ ಘೋಷಿಸಿದೆ. ಪಾಕಿಸ್ತಾನದಿಂದ ಸಮುದ್ರ ಮಾರ್ಗದಲ್ಲಿ ಭಾರತ ಪ್ರವೇಶಿಸಿದ ಉಗ್ರರು ವಾಣಿಜ್ಯ ಮತ್ತು ಮನರಂಜನೆಯ ಕೇಂದ್ರದಲ್ಲಿ ಅಶಾಂತಿಯ ಅಲೆ ಎಬ್ಬಿಸಿದರು.

ಭಯೋತ್ಪಾದನೆಗೆ ಸಂಬಂಧಿಸಿದವರ ಸುಳಿವಿಗಾಗಿ ಅಮೆರಿಕ ಮೂರನೇ ಬಾರಿ ಬಹುಮಾನ ಘೋಷಿಸಿದೆ. ಲಷ್ಕರ್‌ ಎ ತಯಬಾ(ಎಲ್‌ಇಟಿ) ಮುಖ್ಯಸ್ಥ ಹಫೀಜ್‌ ಮೊಹಮ್ಮದ್‌ ಸಯೀದ್‌ ಸುಳಿವಿಗಾಗಿ 1 ಕೋಟಿ ಅಮೆರಿಕನ್‌ ಡಾಲರ್‌ ಹಾಗೂ ಉಗ್ರ ಸಂಘಟನೆಯ ಮುಖಂಡ ಹಫೀಜ್‌ ಅಬ್ದುಲ್‌ ರಹಮಾನ್‌ ಮಕ್ಕಿ ಸುಳಿವಿಗೆ 20 ಲಕ್ಷ ಅಮೆರಿಕನ್‌ ಡಾಲರ್‌ ಬಹುಮಾನ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT