ವಾಷಿಂಗ್ಟನ್: ನೀಲಿ ಚಿತ್ರ ತಾರೆ ಸ್ಟಾರ್ಮಿ ಡೆನಿಯಲ್ಸ್ ಅವರಿಗೆ ಹಣ ನೀಡಿದ ಪ್ರಕರಣದಲ್ಲಿ ದೋಷಿಯಾಗಿರುವ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಿಕ್ಷೆ ವಿಳಂಬ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಈ ಬಗ್ಗೆ ಟ್ರಂಪ್ ಸಲ್ಲಿಸಿದ್ದ ತುರ್ತು ಅರ್ಜಿಯನ್ನು ಸುಪ್ರೀಂ ಕೋರ್ಟ್ ಪೀಠ 5–4ರ ಬಹುತಮದಿಂದ ತಿರಸ್ಕರಿಸಿದೆ.
.ವೀಸಾ ವಿವಾದ: ಎಲಾನ್ ಮಸ್ಕ್ ಪರ ನಿಂತ ಡೊನಾಲ್ಡ್ ಟ್ರಂಪ್.
ಈ ಪ್ರಕರಣದಲ್ಲಿ ನ್ಯೂಯಾರ್ಕ್ನ ಮ್ಯಾನ್ಹಟನ್ ಕೋರ್ಟ್ನಲ್ಲಿ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿತ್ತು. ಹೀಗಾಗಿ ಇದನ್ನು ಮುಂದೂಡಬೇಕು ಎಂದು ಟ್ರಂಪ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಸೇರಿ ಐವರು ನ್ಯಾಯಮೂರ್ತಿಗಳು ಶಿಕ್ಷೆ ವಿಳಂಬದ ಮನವಿಯನ್ನು ತಿರಸ್ಕರಿಸಿದರು.

ಸುಪ್ರೀಂ ಕೋರ್ಟ್ನ ಈ ತೀರ್ಪು, ಕೆಳನ್ಯಾಯಾಲಯಕ್ಕೆ ಶಿಕ್ಷೆಯ ಪ್ರಮಾಣ ವಿಧಿಸಲು ಅನುವು ಮಾಡಿಕೊಟ್ಟಿದೆ. ಕೆಳ ನ್ಯಾಯಾಲಯದ ನ್ಯಾಯಮೂರ್ತಿ ಜಾನ್ ಎಂ. ಮರ್ಚಂಟ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಟ್ರಂಪ್ ಅವರಿಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವುದಿಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಬೆಳಿಗ್ಗೆ 9.30ಕ್ಕೆ ಮರ್ಚಂಟ್ ಅವರು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
.ಜ.10ರಂದು ಟ್ರಂಪ್ ವಿರುದ್ಧ ಶಿಕ್ಷೆ ಪ್ರಕಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.