ವಾಷಿಂಗ್ಟನ್: ಭಾರತದಲ್ಲಿ ವ್ಯಾಪಿಸಿರುವ ಕೋವಿಡ್ ಪಿಡುಗನ್ನು ನಿಭಾಯಿಸುವುದಕ್ಕಾಗಿ ಅಮೆರಿಕವು ನೆರವನ್ನು ಮುಂದುವರಿಸಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

‘ಭಾರತಕ್ಕೆ ಅಮೆರಿಕ ಸರ್ಕಾರ 100 ದಶಲಕ್ಷ ಡಾಲರ್ ಮೊತ್ತದ ನೆರವು ನೀಡಿದೆ. ಅಮೆರಿಕದ ಖಾಸಗಿ ವಲಯಗಳಿಂದ 400 ದಶಲಕ್ಷ ಡಾಲರ್‌ಗಳಷ್ಟು ನೆರವು ನೀಡಲಾಗಿದೆ. ಬಿಕ್ಕಟ್ಟನ್ನು ನಿಭಾಯಿಸುವ ನಿಟ್ಟಿನಲ್ಲಿ ಯಾವ ರೀತಿಯ ನೆರವು ನೀಡಬಹುದು ಎಂಬ ವಿಚಾರದಲ್ಲಿ ಭಾರತದ ಅಧಿಕಾರಿಗಳು ಮತ್ತು ಆರೋಗ್ಯ ಪರಿಣಿತರರೊಂದಿಗೆ ನಿಕಟ ಸಂಪರ್ಕ ಸಾಧಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

78 ಸಾವಿರ ಡೋಸ್ ರೆಮ್‌ಡಸಿವಿರ್ ರವಾನೆ: ‘ಅಮೆರಿಕ ಗಿಲಾಡ್ ಸೈನ್ಸಸ್ ಸಂಸ್ಥೆಯಿಂದ 78 ಸಾವಿರ ಡೋಸ್ ರೆಮ್‌ಡೆಸಿವಿರ್‌ನ ಹೊತ್ತ ನಾಲ್ಕನೇ ಹಂತದ ಸರಕು ಭಾರತ ತಲುಪಿದೆ. ಹೀಗಾಗಿ ಇದುವರೆಗೆ 2.61 ಲಕ್ಷ ಡೋಸ್ ಭಾರತಕ್ಕೆ ಬಂದಂತಾಗಿದೆ. ಇನ್ನೂ 1.25 ಲಕ್ಷ ಡೋಸ್ ಕಳುಹಿಸಿಕೊಡಲು ಅಮೆರಿಕದ ಒಪ್ಪಿದೆ’ ಎಂದು ಭಾರತದ ರಾಯಭಾರ ಕಚೇರಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.