ವಾಷಿಂಗ್ಟನ್: ಅಮೆರಿಕಕ್ಕೆ ವಲಸೆ ಬರುತ್ತಿರುವ ಅಫ್ಗನ್ನರ ಸಂಖ್ಯೆ ಹೆಚ್ಚಾದಂತೆ, ವಲಸಿಗರಿಗೆ ನೈರ್ಮಲ್ಯ, ಆಹಾರ ಪೂರೈಕೆಯಂತಹ ಸವಾಲುಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ, ವಲಸಿಗರಿಗಾಗಿ ತನ್ನ ಸೇನಾ ನೆಲೆಗಳಲ್ಲಿ ಸಣ್ಣ ಸಣ್ಣ ನಗರಗಳನ್ನು ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.

ವಾಯುಪಡೆಯ ನಾರ್ದರ್ನ್ ಕಮಾಂಡ್ ಮುಖ್ಯಸ್ಥ, ಜನರಲ್ ಗ್ಲೆನ್ ವ್ಯಾನ್‌ಹೆರ್ಕ್, ‘ಶುಕ್ರವಾರದವರೆಗೆ ಅಮೆರಿಕದ ಏಳು ಸೇನಾ ನೆಲೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಅಫ್ಗಾನ್ ವಲಸಿಗರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹೇಳಿದ್ದಾರೆ.

‘ಭಾಷೆ, ಸಂಸ್ಕೃತಿ ಮತ್ತು ಇತರ ವಿಷಯಗಳ ಕಾರಣಕ್ಕಾಗಿ ವಲಸಿಗರಿಗೆ ನೆರವು ಒದಗಿಸುವ ಕಾರ್ಯಕ್ಕೆ ತೊಂದರೆಯಾಗುತ್ತಿದೆ’ ಎಂದೂ ಅವರು ಹೇಳಿದ್ದಾರೆ.

‘ಅಫ್ಗಾನಿಸ್ತಾನದ ವಲಸಿಗರಿಗೆ ಆಹಾರ, ವಸತಿ, ನೈರ್ಮಲ್ಯದಂತಹ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಎಂಟು ಸಣ್ಣ ನಗರಗಳನ್ನು ನಿರ್ಮಿಸಲಾಗುತ್ತಿದ್ದು, ಇದು ಸವಾಲಿನಿಂದ ಕೂಡಿದೆ’ ಎಂದರು.

‘ನಿರಾಶ್ರಿತರು ನೆಲೆಸಿರುವ ಸ್ಥಳದ ಉಸ್ತುವಾರಿಗಾಗಿ ಸೇನಾ ಅಧಿಕಾರಿಯೊಬ್ಬರನ್ನು ‘ಮೇಯರ್'ಆಗಿ ನಿಯೋಜಿಸಲಾಗಿದೆ. ಸಂವಹನ ಹಾಗೂ ಇತರ ಪರಿಹಾರ ಕಾರ್ಯಗಳಿಗೆ ಅಫ್ಗಾನ್‌ಮುಖಂಡರೊಬ್ಬರು ನಿಯೋಜಿತ ಮೇಯರ್‌ಗೆ ನೆರವಾಗುವರು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.