ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ತುರ್ತು ಪರಿಸ್ಥಿತಿ ರದ್ದಾಗುವ ಸಾಧ್ಯತೆ

Published 11 ಮೇ 2023, 19:36 IST
Last Updated 11 ಮೇ 2023, 19:36 IST
ಅಕ್ಷರ ಗಾತ್ರ

ಜಿನೀವಾ: ಕೋವಿಡ್ ಪ್ರಕರಣಗಳು, ಸಾವಿನ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಕೋವಿಡ್‌ ಸಂಬಂಧ ಜಾಗತಿಕವಾಗಿ ಘೋಷಿಸಿದ್ದ ತುರ್ತುಪರಿಸ್ಥಿತಿ ಹಿಂಪಡೆಯುವ ಕುರಿತು ಪರಿಣತರು ಚರ್ಚೆ ನಡೆಸಿದ್ದಾರೆ.

ಬಿಕ್ಕಟ್ಟು ಕುರಿತ ವಿಶ್ವ ಆರೋಗ್ಯ ಸಂಘಟನೆಯ ತುರ್ತು ಪರಿಸ್ಥಿತಿ ಸಮಿತಿಯ 15ನೇ ಸಭೆಯು, ಮೂರು ವರ್ಷಗಳ ತರುವಾಯ ಇಲ್ಲಿ ಸೇರಿದ್ದು, ಈ ಬಗ್ಗೆ ಚರ್ಚೆ ನಡೆಸಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ಸಭೆ ಈ ಹಿಂದೆ 2020ರ ಜನವರಿ 30ರಂದು ನಡೆದಿತ್ತು.

ಕೋವಿಡ್‌ ಪರಿಸ್ಥಿತಿಯ ನಿರ್ವಹಣೆಗೆ ರಚಿಸಲಾಗಿದ್ದ ಸಮಿತಿಯು ಸಭೆಯನ್ನು ನಡೆಸಿ ಡಬ್ಲ್ಯುಎಚ್‌ಒ ಮುಖ್ಯಸ್ಥರಿಗೆ ವರದಿಯನ್ನು  ಸಲ್ಲಿಸಲಿದೆ. ಇದನ್ನು ಆಧರಿಸಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ.

ತುರ್ತು ‍ಪರಿಸ್ಥಿತಿ ಸಮಿತಿಯ ಸಭೆಯು ಫ್ರಾನ್ಸ್‌ನ ವೈದ್ಯ ಡಿಡೀಯೆರ್ ಹೌಸಿನ್‌ ನೇತೃತ್ವದಲ್ಲಿ ಸಭೆ ಸೇರಿದ್ದು, ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT