ಬೀಜಿಂಗ್: ಕೋವಿಡ್ ಸಾಂಕ್ರಾಮಿಕದ ಬಳಿಕ ಇದೇ ಮೊದಲ ಬಾರಿಗೆ ವಿದೇಶಿ ಪ್ರವಾಸ ಕೈಗೊಂಡಿರುವ ಚೀನಾ ಅಧ್ಯಕ್ಷ ಷಿ–ಜಿನ್‌ಪಿಂಗ್ ಅವರ ಸುರಕ್ಷತೆ ವಿಷಯವಾಗಿ ಸಂಬಂಧಿತ ದೇಶಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಚೀನಾ ಮಂಗಳವಾರ ತಿಳಿಸಿದೆ.

ಷಿ ಜಿನ್‌ಪಿಂಗ್ ಬುಧವಾರ ಕಜಕಿಸ್ತಾನಕ್ಕೆ ತೆರಳಲಿದ್ದಾರೆ. ಬಳಿಕ ಸೆ.15ರಂದು ನಿಗದಿಯಾಗಿರುವ ಶಾಂಘೈ ಸಹಕಾರ ಶೃಂಗದಲ್ಲಿ (ಎಸ್‌ಸಿಒ) ಪಾಲ್ಗೊಳ್ಳಲು ಸಮರ್ಕಂಡ್‌ಗೆ ಭೇಟಿ ನೀಡಲಿದ್ದಾರೆ.

ಕೋವಿಡ್ ಬಗ್ಗೆ ಚೀನಾ ಶೂನ್ಯ ಸಹಿಷ್ಣುತೆ ಹೊಂದಿದ್ದು, ವಿದೇಶದಿಂದ ಮರಳಿ ಬಂದವರು ಕಡ್ಡಾಯವಾಗಿ ಏಳು ದಿನ ಕ್ವಾರಂಟೈನ್‌ಗೆ ಒಳಗಾಗಬೇಕು ಎಂಬ ನಿಯಮ ಇದೆ. ಆದರೆ ಅಧ್ಯಕ್ಷ ಷಿ–ಜಿನ್‌ಪಿಂಗ್ ಅವರೂ ಈ ನಿಯಮ ಪಾಲಿಸುತ್ತಾರೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.