ಬೀಜಿಂಗ್:ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದ ಚೀನಾದ ವುಹಾನ್ ನಗರದಲ್ಲಿ ಜನಜೀವನ ಮತ್ತೆ ಸಹಜ ಸ್ಥಿತಿಯತ್ತ ಬಂದಿದೆ. ಅದರಲ್ಲೂ, ಲಾಕ್‌ಡೌನ್‌ನಿಂದ ರೋಸಿ ಹೋಗಿದ್ದ ಜನರು ಮನರಂಜನೆ, ಮೋಜು– ಮಸ್ತಿಯಲ್ಲಿ ಮುಳುಗಿದ್ದಾರೆ.ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಭರ್ತಿಯಾಗಿವೆ.

1 ಕೋಟಿಗೂ ಅಧಿಕ ಜನಸಂಖ್ಯೆ ಇರುವ ವುಹಾನ್, ಲಾಕ್‌ಡೌನ್‌ನಿಂದಾಗಿ ಸ್ತಬ್ಧವಾಗಿತ್ತು. ನಗರದಿಂದ ಯಾರೂ ಹೊರ ಹೋಗುವಂತಿಲ್ಲ. ನಗರಕ್ಕೆ ಇತರ ಕಡೆಗಳಿಂದಲೂ ನಿರ್ಬಂಧ ಹೇರಿದ್ದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದರು.

ಈಗ, ಅಲ್ಲೊಂದು–ಇಲ್ಲೊಂದು ಸೋಂಕಿನ ಪ್ರಕರಣಗಳು ವರದಿಯಾಗುತ್ತಿರುವುದನ್ನು ಹೊರತುಪಡಿಸಿದರೆ, ಕೋವಿಡ್‌ನ ಪ್ರಸರಣ ಬಹುತೇಕ ತಗ್ಗಿದೆ. ಇದು, ಜನರು ಮನೆಯಿಂದ ಹೊರ ಬಂದು ಸಂತೋಷಕೂಟಗಳಲ್ಲಿ, ಲಘುಪ್ರವಾಸ ಕೈಗೊಂಡು ಮೈಮನ ಹಗುರ ಮಾಡಿಕೊಳ್ಳಲು ಉತ್ತೇಜನ ನೀಡುತ್ತಿದೆ.

ವುಹಾನ್ ಮಾಯಾ ಬೀಚ್ ವಾಟರ್ ಪಾರ್ಕ್‌ಜೂನ್‌ನಲ್ಲಿ ಪುನರಾರಂಭಗೊಂಡಿದ್ದರೂ, ಈಗ ಅದು ಜನರಿಂದ ತುಂಬಿ ತುಳುಕುತ್ತಿದೆ. ಶಾಂಘೈ ಮತ್ತು ಚಾಂಗ್‌ಕಿಂಗ್ ನಗರಗಳಲ್ಲಿರುವ ಪಾರ್ಕ್‌ನ ಶಾಖೆಗಳೂ ಈಗ ಭರ್ತಿ.

ಆನ್‌ಲೈನ್ ಮೂಲಕವೇ ಟಿಕೆಟ್ ಖರೀದಿ ಮಾಡಬೇಕು. ಪಾರ್ಕ್ ಪ್ರವೇಶಿಸುವ ಮುನ್ನ ಗುರುತಿನ ಚೀಟಿ ಜೊತೆ, ಗ್ರಾಹಕರ ಮೊಬೈಲ್ ಆ್ಯಪ್‌ವೊಂದರಲ್ಲಿ ‘ಗ್ರೀನ್ ಕೋಡ್’ ಕಾಣಿಸುತ್ತದೆ. ಇದು, ಆ ಗ್ರಾಹಕ ಕೊರೊನಾ ವೈರಸ್ ಸೋಂಕು ಹೊಂದಿದ್ದನೆ, ಕ್ವಾರಂಟೈನ್‌ಗೆ ಒಳಗಾಗಿದ್ದನೆ ಎಂಬ ಮಾಹಿತಿ ನೀಡುತ್ತದೆ. ಇದನ್ನು ಪರಿಶೀಲಿಸಿದ ನಂತರ ಪಾರ್ಕ್ ಒಳಗೆ ಪ್ರವೇಶ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.