ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸಿಫ್‌ ಅಲಿ ಜರ್ದಾರಿ ಪಾಕಿಸ್ತಾನದ ನೂತನ ಅಧ್ಯಕ್ಷ?

Published 15 ಫೆಬ್ರುವರಿ 2024, 16:10 IST
Last Updated 15 ಫೆಬ್ರುವರಿ 2024, 16:10 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ (ಪಿಪಿಪಿ) ನಾಯಕ ಆಸಿಫ್‌ ಅಲಿ ಜರ್ದಾರಿ ಅವರು ದೇಶದ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನ ಮುಸ್ಲಿಂ ಲೀಗ್‌ –ನವಾಜ್‌ (ಪಿಎಂಎಲ್‌–ಎನ್‌) ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಪಿಪಿಪಿ ಈಚೆಗೆ ಸಮ್ಮತಿಸಿತ್ತು.

‘ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ದೇಶವು ಪಿಎಂಎಲ್–ಎನ್‌ನ ಪ್ರಧಾನಿಯನ್ನು ಮತ್ತು ಪಿಪಿಪಿಯ ಅಧ್ಯಕ್ಷರನ್ನು ಹೊಂದಲಿದೆ’ ಎಂದು ‘ದಿ ನ್ಯೂಸ್‌ ಇಂಟರ್‌ನ್ಯಾಷನಲ್‌’ ಪತ್ರಿಕೆಯು ವರದಿಯಲ್ಲಿ ಹೇಳಿದೆ. ಎರಡೂ ಪಕ್ಷಗಳ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆಯು ಈ ವರದಿ ಮಾಡಿದೆ.

ಆಸಿಫ್‌ ಅಲಿ ಜರ್ದಾರಿ ಅವರು 2008 ರಿಂದ 2013ರ ವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು.

ಸದ್ಯದ ಅಧ್ಯಕ್ಷ ಡಾ.ಆರಿಫ್‌ ಅಲ್ವಿ ಅವರು ಈ ತಿಂಗಳ ಕೊನೆಗೆ ತಮ್ಮ ಸ್ಥಾನದಿಂದ  ಹೊರನಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫೆಬ್ರುವರಿ 8ರಂದು ನಡೆದಿದ್ದ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ಸ್ಪಷ್ಟ ಬಹುಮತ ಪಡೆಯದ ಕಾರಣ ಪಾಕಿಸ್ತಾನದಲ್ಲಿ ಯಾವುದೇ ಸರ್ಕಾರ ರಚನೆಯಾಗಿಲ್ಲ.

ಪಿಎಂಎಲ್–ಎನ್‌ ಮತ್ತು ಪಿಪಿಪಿಯ ನಡುವೆ ಮೈತ್ರಿಯಾದ ಬಳಿಕ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ತಮ್ಮ ಶೆಹಬಾಜ್‌ ಷರೀಫ್‌ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಗಿತ್ತು.

ಉಮರ್‌ ಅಯೂಬ್‌ ಪ್ರಧಾನಿ ಅಭ್ಯರ್ಥಿ:

ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಾಕಿಸ್ತಾನ ತೆಹ್ರೀಕ್‌–ಇ–ಇನ್ಸಾಫ್‌ (ಪಿಟಿಐ) ಪಕ್ಷವು, ಪ್ರಧಾನಿ ಅಭ್ಯರ್ಥಿಯಾಗಿ ಪಕ್ಷದ ಪ್ರಧಾನ ಕಾ‌ರ್ಯದರ್ಶಿ ಉಮರ್‌ ಅಯೂಬ್‌ ಖಾನ್‌ ಅವರನ್ನು ಗುರುವಾರ ನಾಮನಿರ್ದೇಶನ ಮಾಡಿದೆ.

ಸೇನಾ ಸರ್ವಾಧಿಕಾರಿಯಾಗಿದ್ದ ಅಯೂಬ್‌ ಖಾನ್ ಅವರ ಮೊಮ್ಮಗನಾದ ಉಮರ್‌ ಅಯೂಬ್‌ ಅವರು 2018ರ ಸಾರ್ವತ್ರಿಕ ಚುನಾವಣೆಗಿಂತ ಮೊದಲು ಪಿಟಿಐಗೆ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT