ಟೋಕಿಯೊ (ಡಿಪಿಎ): ಕಳೆದ ಕೆಲವು ದಿನಗಳಿಂದ ಫುಕುಶಿಮಾ ಅಣು ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ನಡೆಸುತ್ತಿದ್ದ ಶತಪ್ರಯತ್ನ ಮಂಗಳವಾರ ಕೊನೆಗೂ ಯಶಸ್ವಿಯಾದ ಹಿನ್ನೆಲೆಯಲ್ಲಿ ಪರಮಾಣು ವಿಕಿರಣದಿಂದ ತತ್ತರಿಸಿದ್ದ ಜಪಾನ್ನ ಜನತೆಯಲ್ಲಿ ಒಂದಷ್ಟು ನೆಮ್ಮದಿ ಮೂಡಿದೆ.

ವಿದ್ಯುತ್ ಸಂಪರ್ಕ ಕಲ್ಪಿಸಲು ಭಾನುವಾರದಿಂದ ನಿರಂತರ ಪ್ರಯತ್ನ ನಡೆಯುತ್ತಿದ್ದರೂ ಕೂಡ 3 ಮತ್ತು 4 ನೇ ರಿಯಾಕ್ಟರ್ಗಳಿಗೆ ಮಂಗಳವಾರವಷ್ಟೇ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಯಿತು ಎಂದು ಕೈಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟೋಕಿಯೊ ಇಲೆಕ್ಟ್ರಿಕ್ ಪವರ್ ಕಂಪನಿ (ಟೆಪ್ಕೊ) ಅಣುಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸತತ ಯತ್ನ ನಡೆಸುತ್ತಿದ್ದ ವೇಳೆ ಸೋಮವಾರದಂದು 3 ನೇ ರಿಯಾಕ್ಟರ್ನಿಂದ ಕಂದು ಬಣ್ಣದ ಹೊಗೆ ಕಂಡುಬಂದ ಹಿನ್ನೆಲೆಯಲ್ಲಿ ತನ್ನ ಕಾರ್ಯವನ್ನು ತತ್ಕಾಲಕ್ಕೆ ಸ್ಥಗಿತಗೊಳಿಸಿತ್ತು.

ಆದರೆ ದುರ್ಘಟನೆಯ ಅವಶೇಷಗಳಿಗೆ ಬೆಂಕಿ ತಾಗಿದ್ದರಿಂದ 3 ನೇ ರಿಯಾಕ್ಟರ್ನಿಂದ ಹೊಗೆ ಕಂಡುಬಂದಿತ್ತಲ್ಲದೆ 2 ನೇ ರಿಯಾಕ್ಟರ್ನಿಂದ ಹಬೆ ಹೊರಬಂದಿತ್ತು ಎಂದು ಜಪಾನ್ನ ರಕ್ಷಣಾ ಸಚಿವ ತೊಶಿಮಿ ಕಿಟಾಜಾವಾ ವರದಿಗಾರರಿಗೆ ತಿಳಿಸಿದರು.

ಅಗ್ನಿಶಾಮಕ ವಾಹನಗಳು ಟನ್ಗಟ್ಟಲೆ ನೀರನ್ನು ಸುರಿದ ಪರಿಣಾಮವಾಗಿ ಬೆಂಕಿಯಿಂದ ಕಾದ ರಿಯಾಕ್ಟರ್ಗಳ ಕಬ್ಬಿಣದ ಸರಳುಗಳು ತಂಪಾಗಿ ಹಬೆ ಹೊರಹೊಮ್ಮಿತ್ತು. ಪ್ರಸಕ್ತ ರಿಯಾಕ್ಟರ್ಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿರುವುದರಿಂದ ಅಲ್ಲಿ ರಿಯಾಕ್ಟರ್ಗಳ ಸರಳುಗಳನ್ನು ತಂಪುಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದ್ದು, ಅವಘಡದ ಭೀತಿ ದೂರವಾಗಿದೆ.

ನಲ್ಲಿ ನೀರಿನಲ್ಲಿ ವಿಕಿರಣ: ಪುಕುಶಿಮಾ ಸುತ್ತಮುತ್ತಲಿನ ಆಹಾರ ಉತ್ಪನ್ನಗಳಲ್ಲಿ ವಿಕಿರಣ ಅಂಶ ಸೇರಿಕೊಂಡಿರಬಹುದು ಎಂಬ ಆತಂಕದ ಬೆನ್ನ ಹಿಂದೆಯೇ ಇದೀಗ ನಲ್ಲಿ ನೀರಿನಲ್ಲಿ ವಿಕಿರಣ ಪತ್ತೆಹಚ್ಚಲಾಗಿದ್ದು ಮಕ್ಕಳಿಗೆ ನಲ್ಲಿ ನೀರನ್ನು ಕುಡಿಸದೇ ಇರಲು ಎಚ್ಚರಿಕೆ ನೀಡಲಾಗಿದೆ.

309 ದಶಲಕ್ಷ ಡಾಲರ್ ನಷ್ಟ: ಇದೇ ವೇಳೆ ಜಪಾನ್ನಲ್ಲಿ ಒಂದರ ಹಿಂದೆ ಸಂಭವಿಸಿದ ಭೂಕಂಪ, ಸುನಾಮಿ ಮುಂತಾದವುಗಳಿಂದ ಸುಮಾರು 3090 ಕೋಟಿ ಡಾಲರ್ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಮೂಲಭೂತ ಸೌಕರ್ಯಗಳಿಗಾದ ಹಾನಿಯಲ್ಲದೆ ಮನೆಗಳು, ವ್ಯಾಪಾರ ವಹಿವಾಟುಗಳಿಗೆ ಸಂಭವಿಸಿದ ಹಾನಿಯ ಒಟ್ಟು ಮೊತ್ತ 16 ರಿಂದ 25 ಟ್ರಿಲಿಯನ್ ಯೆನ್ (3090 ಕೋಟಿ ಅಮೆರಿಕನ್ ಡಾಲರ್) ಎಂದು ಕ್ಯಾಬಿನೆಟ್ ಕಚೇರಿ ಅಂದಾಜಿಸಿದೆ.

ಇದು ಹಾನಿಯ ಕುರಿತು ಇತರ ಸಂಸ್ಥೆಗಳು ನಡೆಸಿದ ಲೆಕ್ಕಾಚಾರಗಳಿಗಿಂತ ಹೆಚ್ಚಾಗಿದ್ದು ಹಾನಿಯ ಮೊತ್ತ 2350 ಕೋಟಿ ಅಮೆರಿಕನ್ ಡಾಲರ್ ಎಂದು ವಿಶ್ವಬ್ಯಾಂಕ್ ತಿಳಿಸಿತ್ತು. ಇದೇ ವೇಳೆ ಇನ್ವೆಸ್ಟ್ಮೆಂಟ್ ಬ್ಯಾಂಕ್ ಪ್ರಕಾರ ಹಾನಿಯ ಅಂದಾಜು 2000 ಕೋಟಿ ಡಾಲರ್ ಎನ್ನಲಾಗಿದೆ.

ವಿದ್ಯುತ್ ಕೊರತೆಯಿಂದ ಜಪಾನ್ನಲ್ಲಿ ಅನೇಕ ಕಾರ್ಖಾನೆಗಳು ಮುಚ್ಚಿದ್ದು ವಾಹನ ತಯಾರಿಕೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಟೊಯೊಟೊ ಮೋಟರ್ ಕಾರ್ಪೊರೇಷನ್ ವಾಹನ ತಯಾರಿಕೆಗೆ ಅಗತ್ಯವಾಗಿರುವ ಬಿಡಿಭಾಗಗಳ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಮಾರ್ಚ್ 14ರಿಂದ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ಅಳಿದುಳಿದ ಮನೆಯಲ್ಲಿಯೇ ವಾಸ: ಧುತ್ತನೆ ಎರಗಿದ ಸುನಾಮಿಗೆ ನಿಮಿಷ ಮಾತ್ರದಲ್ಲಿಯೇ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದರೂ ಕೂಡ ತಮ್ಮ ಅಳಿದುಳಿದ ಮನೆಯಲ್ಲಿಯೇ ವಾಸಿಸಲು ಕೆಲವು ಜಪಾನೀಯರು ನಿರ್ಧರಿಸಿದ್ದಾರೆ.
ಆದರೆ ಬದುಕುಳಿದ ಕೆಲವು ‘ಅದೃಷ್ಟ’ವಂತರು ಮಾತ್ರ ನಿರಾಶ್ರಿತರ ಶಿಬಿರಗಳಲ್ಲಿ ತಂಗಲು ನಿರ್ಧರಿಸಿದ್ದಾರೆ.

‘ನಾನು ನನ್ನ ಮನೆ ಬಿಟ್ಟು ತೆರಳುವ ಯೋಚನೆಯನ್ನೇ ಮಾಡಿಲ್ಲ. ಸಂಪೂರ್ಣವಾಗಿ ನಾಶ ಹೊಂದಿರುವ ಈ ಮನೆಯಲ್ಲಿ ಉಳಿದುಕೊಳ್ಳುವುದು ಸುಲಭದ ಮಾತಲ್ಲ, ಆದರೆ ಇದು ನನ್ನ ಮನೆ. ನಾನು ಇಲ್ಲಿಯೇ ಇರುತ್ತೇನೆ’ ಎನ್ನುತ್ತಾರೆ 52ರ ಹರೆಯದ ಮಯೂಮಿ ಒಝಾವಾ. ಸಾಕು ಪ್ರಾಣಿಗಳಿಗೆ ಶಿಬಿರದೊಳಕ್ಕೆ ಪ್ರವೇಶ ನಿಷೇಧಿಸಿದ್ದರ ಹಿನ್ನೆಲೆಯಲ್ಲಿ ತಮ್ಮ ತಮ್ಮ ಮನೆಗಳಲ್ಲಿಯೇ ಇರಲು ಇನ್ನು ಕೆಲವರು ನಿರ್ಧರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.