ಇಸ್ಲಾಮಾಬಾದ್(ಪಿಟಿಐ): ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಲು ಲಾಹೋರ್ ಹೈಕೋರ್ಟ್ ಉನ್ನತ ಪೀಠ ರಚಿಸಿದೆ.

ಮಹಮ್ಮದ್ ಅಜರ್ ಸಿದ್ದಿಕಿ ಎಂಬುವವರು ಜರ್ದಾರಿ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಲು ಲಾಹೋರ್ ಹೈಕೋರ್ಟ್ ಮುಖ್ಯನಾಯಮೂರ್ತಿ ಉಮರ್ ಬಂಡಿಯಲ್ ವಿಸ್ತೃತ ಪೀಠ ರಚಿಸಿದ್ದಾರೆ.

ದೇಶದ ಅಧ್ಯಕ್ಷರಾಗಿರುವ ಜರ್ದಾರಿ, ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ರಾಜಕೀಯ ಮುಖ್ಯಸ್ಥರ ಕಚೇರಿ ತೊರೆದಿಲ್ಲ ಎಂಬ ಆರೋಪ ಇತ್ತು. ಈ ಸಂಬಂಧ ಕಳೆದ ವರ್ಷವೇ ಲಾಹೋರ್ ಹೈಕೋರ್ಟ್ ಜರ್ದಾರಿ ಅವರಿಗೆ `ಪಿಪಿಪಿ~ ಮುಖ್ಯಸ್ಥರ ಸ್ಥಾನ ತ್ಯಜಿಸುವಂತೆ ಸೂಚನೆ ನೀಡಿತ್ತು.

ಜರ್ದಾರಿ ಅವರ ವಿರುದ್ಧ ಅರ್ಜಿ ಸಲ್ಲಿಸಿರುವ ಅಜರ್ ಸಿದ್ದಿಕಿ, ಜರ್ದಾರಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿಗೆ ಲಾಭ ಮಾಡಿಕೊಡಲು ತಮ್ಮ ಅಧ್ಯಕ್ಷರ ಹುದ್ದೆ ಬಳಸಿಕೊಳ್ಳುತ್ತಿದ್ದಾರೆ. ಕೋರ್ಟ್ ಆದೇಶ ಪಾಲಿಸದೇ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜರ್ದಾರಿ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಲಾಹೋರ್ ಹೈಕೋರ್ಟ್ ಬುಧವಾರ ಕೈಗೆತ್ತಿಕೊಳ್ಳಲಿದೆ.

ಇದಕ್ಕೂ ಮುನ್ನ ಮುಖ್ಯನಾಯಮೂರ್ತಿ ಬಂಡಿಯಲ್ ಜರ್ದಾರಿ ಅವರ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಕಳುಹಿಸಿದ್ದರು. ಅವರು ಈ ನೋಟಿಸ್ಗೆ ಉತ್ತರಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ಅರ್ಜಿದಾರರ ಪರ ವಕೀಲರಾದ ಎ.ಕೆ. ಡೊಗರ್, ಹೈಕೋರ್ಟ್ ಅಧ್ಯಕ್ಷರಿಗೆ ಸಮನ್ಸ್ ಕಳುಹಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಮಧ್ಯೆ ಮಹಮ್ಮದ್ ಅಖ್ತರ್ ನಕ್ವಿ ಎಂಬ ವಕೀಲರೊಬ್ಬರು ಅಧ್ಯಕ್ಷರಿಗೆ ರಾಜತಾಂತ್ರಿಕ ರಕ್ಷಣೆ ನೀಡಿರುವುದನ್ನು ಹಾಗೂ ಅವರು ಎರಡು ಸ್ಥಾನಗಳನ್ನು ಅಲಂಕರಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸಂವಿಧಾನದ 43ನೇ ವಿಧಿಯನ್ನು ಉಲ್ಲೇಖಿಸಿ ಅಧ್ಯಕ್ಷರು ಎರಡು ಹುದ್ದೆ ಹೊಂದುವಂತಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.