ವಾಷಿಂಗ್ಟನ್ (ಪಿಟಿಐ): ಪ್ರತಿಷ್ಠಿತ ಸ್ಕ್ರಿಪ್ಪ್ಸ್ ನ್ಯಾಷನಲ್ ಸ್ಪೆಲಿಂಗ್ ಬೀ ಸ್ಪರ್ಧೆಯಲ್ಲಿ ಜಂಟಿ ವಿಜೇತರಾಗುವ ಮೂಲಕ ಭಾರತ ಮೂಲದ ಶ್ರೀರಾಮ್ ಜೆ. ಹತ್ವಾರ್ ಮತ್ತು ಅನ್‌ಸುನ್ ಸುಜಾಯ್ ಅವರು ಇತಿಹಾಸ ನಿರ್ಮಿಸಿದ್ದಾರೆ.

ಎಂಟನೇ ತರಗತಿಯ ವಿದ್ಯಾರ್ಥಿ ಶ್ರೀರಾಮ್(14) ನ್ಯೂಯಾರ್ಕ್ನವರಾದರೆ, ಏಳನೇ ತರಗತಿಯ ಅನ್‌ಸುನ್(13) ಟೆಕ್ಸಾಸ್ ನವರು.
ಸತತ ಏಳನೇ ವರ್ಷ ಭಾರತ ಮೂಲದವರು ಸ್ಪೆಲಿಂಗ್ ಬೀ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಗುರುವಾರ ರಾತ್ರಿ ಪ್ರಸಾರವಾದ ಈ ಕಾರ್ಯಕ್ರಮವನ್ನು ಅಮೆರಿಕದಾದ್ಯಂತ ಲಕ್ಷಾಂತರ ಜನ ವೀಕ್ಷಿಸಿದರು.

ಅನ್‌ಸುನ್ ಅವರು 22ನೇ ಸುತ್ತಿನಲ್ಲಿ ‘ಫೊಯೆಟನ್’ ಎಂಬ ಪದವನ್ನು ಸ್ಪಷ್ಟವಾಗಿ ಉಚ್ಛಾರಣೆ ಮಾಡಿದರು. ‘ನನ್ನ ಕನಸು ನಿಜ ವಾಗಿದೆ’ ಎಂದು ಜಂಟಿ ವಿಜೇತ ಎಂದು ಘೋಷಣೆ ಯಾದ ಬಳಿಕ ಅನ್‌ಸುನ್ ಪ್ರತಿಕ್ರಿಯಿಸಿದರು.

‘ನಾನು ಅಂತಿಮ ಸುತ್ತಿಗೆ ಆಯ್ಕೆಯಾದ ವಿಷಯ ಕೇಳಿ ಖುಷಿಯಾ ಗಿತ್ತು. ಸಹ ವಿಜೇತನಾದ ಬಳಿಕವಂತೂ ನನ್ನ ಸಂತಸ ಇಮ್ಮಡಿಯಾಗಿದೆ’ ಎಂದರು.

21ನೇ ಸುತ್ತಿನಲ್ಲಿ ಶ್ರೀರಾಮ್ ಅವರು ‘ಸ್ಟೈಕೊಮಥಿಯಾ’ ಪದವನ್ನು ಸ್ಪಷ್ಟವಾಗಿ ಉಚ್ಛರಿಸಿದರು. ಶ್ರೀರಾಮ್ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡಿರು ವುದು ಇದು ಐದನೇ ಬಾರಿ.

ಕಳೆದ ವರ್ಷ ನಡೆದ ಸ್ಪರ್ಧೆಯಲ್ಲಿ ಶ್ರೀರಾಮ್, ಅನ್‌ಸುನ್ ಮತ್ತು ಗೋಕುಲ್ ವೆಂಕಟಾಚಲಂ ಅಂತಿಮ ಸುತ್ತಿನಲ್ಲಿದ್ದ ಭಾರತೀಯರು.
1962ರಲ್ಲಿ ನಡೆದ ಸ್ಪರ್ಧೆ ಯಲ್ಲಿಯೂ ಭಾರತ ಮೂಲದ ಇಬ್ಬರು ಜಂಟಿ ವಿಜೇತರಾಗಿ ಹೊರ ಹೊಮ್ಮಿದ್ದರು. ಆ ಬಳಿಕ ಈ ಸಾಧನೆ ಮಾಡಿದ ಕೀರ್ತಿಗೆ ಶ್ರೀರಾಮ್ ಮತ್ತು ಅನ್‌ಸುನ್ ಪಾತ್ರ ರಾಗಿದ್ದಾರೆ. 2008ರಲ್ಲಿ ಕಾವ್ಯ ಶಿವಶಂಕರ್ ಗೆದ್ದ ಬಳಿಕ ಈ ಸ್ಪರ್ಧೆಯಲ್ಲಿ ಭಾರತೀಯರ ಪಾರಮ್ಯವನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ.

ಜನಾಂಗೀಯ ನಿಂದನೆ: ಆದರೆ ಈ ಬಾರಿ ಗೆದ್ದ ಬಾಲಕರ ಬಗ್ಗೆ ಟ್ವಿಟರ್‌ನಲ್ಲಿ ಜನಾಂಗೀಯ ನಿಂದನೆಯ ಟ್ವೀಟ್‌ಗಳು ಹರಿದಾಡಿವೆ ಎಂದು ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.