ಟೆಹರಾನ್ (ಎಎಫ್‌ಪಿ): ಇಸ್ಲಾಮಿಕ್ ಸ್ಟೇಟ್ಸ್ (ಐ.ಎಸ್) ಉಗ್ರರ ಹಿಂಸಾಕೃತ್ಯಗಳನ್ನು ವಿರೋಧಿಸಿ ಇರಾನ್‌ನಲ್ಲಿ ನಡೆದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಅರಬ್ ಮತ್ತು ಪಾಶ್ಚಿಮಾತ್ಯ ಮುಖಂಡರ ಚಿತ್ರಗಳೂ ಕಂಡುಬಂದವು.

‘ಅಪರಾಧಗಳೆಡೆಗೆ ಯಾವಮನುಷ್ಯನೂ ತನ್ನ ಕಣ್ಣನ್ನು ಕುರುಡಾಗಿಸಿಕೊಳ್ಳುವುದಿಲ್ಲ’ ಎಂಬ ತತ್ವದಲ್ಲಿ ಐ.ಎಸ್ ಉಗ್ರರ ನೈಜ ಗುಣವನ್ನು ವ್ಯಂಗ್ಯಚಿತ್ರದ ಮೂಲಕ ಚಿತ್ರಿಸಲು ಈ ಸ್ಪರ್ಧೆ ಆಯೋಜಿಸಲಾಗಿತ್ತು.

ಕಳೆದ ವಾರ ಪ್ರಾರಂಭವಾದ ಈ ‘ದಾಯೆಶ್ ವ್ಯಂಗ್ಯಚಿತ್ರ ಮತ್ತು ಕ್ಯಾರಿಕೇಚರ್ ಸ್ಪರ್ಧೆ’ಗೆ ಜಗತ್ತಿನ 40ಕ್ಕೂ ಅಧಿಕ ದೇಶಗಳ ಸುಮಾರು 300 ಪ್ರವೇಶಗಳು ಬಂದಿದ್ದವು. ‘ಐ.ಎಸ್ ಉಗ್ರರ ಹೇಯ ಕ್ರೌರ್ಯದ ಗುಣವನ್ನು ತೋರಿಸುವುದು ನಮ್ಮ ಉದ್ದೇಶ’ ಎಂದು ಸಂಘಟನಾ ಸಮಿತಿಯ ಅಧ್ಯಕ್ಷ ಮಸೌದ್ ಶೋಜಲ್ ತಿಳಿಸಿದರು.

ಐ.ಎಸ್ ಉಗ್ರರನ್ನು ಖಂಡಿಸುವ, ವಿಡಂಬಿಸುವ ವ್ಯಂಗ್ಯಚಿತ್ರಗಳ ಜೊತೆ, ಪಾಶ್ಚಿಮಾತ್ಯ ದೇಶಗಳ, ಟರ್ಕಿ, ಇಸ್ರೇಲ್ ಮತ್ತು ಕೆಲ ಅರಬ್ ದೇಶಗಳ ನಾಯಕರ ಚಿತ್ರಗಳೂ ಕಂಡುಬಂದವು. ಬಳೆಗಡಕ ಹಾವಿನ (ರ್‍ಯಾಟಲ್ ಸ್ನೇಕ್) ದೇಹ ಹೊಂದಿರುವ ಸೌದಿ ಅರೇಬಿಯಾದ ರಾಜ ಸಲ್ಮಾನ್‌ನ ವ್ಯಂಗ್ಯಚಿತ್ರಕ್ಕೆ ಮೊದಲ ಬಹುಮಾನ ದಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.