ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಚೀನಾ ಸಮುದ್ರದ ಮೇಲೆ ಕಣ್ಣು

ವಿದೇಶ ವಿದ್ಯಮಾನ
Last Updated 26 ಜುಲೈ 2015, 19:30 IST
ಅಕ್ಷರ ಗಾತ್ರ

ವಿಶ್ವದ ಗಮನ ತನ್ನತ್ತ ಸೆಳೆದಿರುವ ದಕ್ಷಿಣ ಚೀನಾ ಸಮುದ್ರದ ಆಳದಲ್ಲಿ ಅಗಾಧ ನೈಸರ್ಗಿಕ ಅನಿಲ ಮತ್ತು ತೈಲ ಸಂಪತ್ತು ಇದೆ. ಈ ಸಂಪದ್ಭರಿತ ಸಮು ದ್ರದ ಮೇಲೆ ಒಡೆತನ ಸಾಧಿಸಲು ಪೂರ್ವ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರ
ಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಇಲ್ಲಿ ಪಕ್ಷಿಗಳು ಹಾರಾಟ ನಡೆಸಿದರೂ ಪೂರ್ವ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರ
ಗಳು ಅವುಗಳನ್ನು ಸಂಶಯದಿಂದ ನೋಡುವಂತಾಗಿದೆ. 

ದಕ್ಷಿಣ ಚೀನಾ ಸಮುದ್ರದಲ್ಲಿ 250 ಕ್ಕೂ ದ್ವೀಪಗಳಿವೆ. ಈ ನಡುಗಡ್ಡೆಗಳನ್ನು ಸ್ಪ್ರಾಟ್ಲಿ, ಪ್ಯಾರಾಸೆಲ್‌ ಮತ್ತು ಪ್ರತಾಸ್‌ ದ್ವೀಪಸಮೂಹಗಳಾಗಿ ವಿಂಗಡಿಸಲಾಗಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಸಾಧಿಸಲು ಚೀನಾ, ಜಪಾನ್‌, ತೈವಾನ್‌, ವಿಯೆಟ್ನಾಂ, ಮಲೇಷ್ಯಾ, ಬ್ರೂನಿ ಮತ್ತು ಫಿಲಿಪ್ಪೀನ್ಸ್‌ ದೇಶಗಳು  ತೊಡೆತಟ್ಟಿ ನಿಂತಿವೆ. 

ದಕ್ಷಿಣ ಏಷ್ಯಾ ಸಮುದ್ರದಲ್ಲಿರುವ ನೈಸರ್ಗಿಕ ಅನಿಲ ಮತ್ತು ತೈಲ ಸಂಪತ್ತಿನ ಮೇಲೆ ಭಾರತ ಮತ್ತು ಅಮೆರಿಕವೂ ಕಣ್ಣಿಟ್ಟಿರುವುದು, ಸೇನಾ ಶಕ್ತಿ ಬಳಸಿ ಸಣ್ಣ ದೇಶಗಳನ್ನು ತನ್ನ ಹದ್ದುಬಸ್ತಿನಲ್ಲಿಡಬೇಕು ಎನ್ನುವ ಚೀನಾದ ಬಯಕೆಗೆ ಅಡ್ಡಗಾಲಾಗಿದೆ.

ದಕ್ಷಿಣ ಚೀನಾ ಸಮುದ್ರದ ಒಡೆತನಕ್ಕೆ ಸಂಬಂಧಿಸಿದಂತೆ ಪೂರ್ವ, ದಕ್ಷಿಣ ಏಷ್ಯಾ ರಾಷ್ಟ್ರಗಳ ಮಧ್ಯೆ ಹಲವು ವರ್ಷಗಳಿಂದ ಸಂಘರ್ಷವಿದ್ದರೂ ಈ ವಲಯದಲ್ಲಿ ನಡೆಯುತ್ತಿರುವ ತೈಲ ನಿಕ್ಷೇಪ ಶೋಧ, ಬಲಾಢ್ಯ ದೇಶಗಳ ಸಮರಾಭ್ಯಾಸದಿಂದಾಗಿ ವಿವಾದ ಭುಗಿಲೆದ್ದಿದೆ.

ಇಡೀ ದಕ್ಷಿಣ ಚೀನಾ ಸಮುದ್ರ ಮತ್ತು ಈ ಭಾಗದಲ್ಲಿನ ದ್ವೀಪಗಳು ತನ್ನದೇ ಎಂದು ವಾದಿಸುತ್ತಿರುವ ಚೀನಾ, ಸ್ಟ್ರಾಟ್ಲಿ ದ್ವೀಪ ಸಮೂಹದಲ್ಲಿ ಸದ್ದಿಲ್ಲದೆ ವಾಯುನೆಲೆ ಸ್ಥಾಪಿಸಲು ಹೊರಟಿದೆ. ಈ ಕುರಿತ ಉಪಗ್ರಹ ಆಧಾರಿತ ಚಿತ್ರವನ್ನು ಅಮೆರಿಕ ಇತ್ತೀ
ಚೆಗೆ ಬಿಡುಗಡೆ ಮಾಡಿದ್ದು, ದಕ್ಷಿಣ ಸಮುದ್ರದಲ್ಲಿ ಚೀನಾ ತನ್ನ ಬಲ ಹೆಚ್ಚಿಸಿ ಕೊಳ್ಳುತ್ತಿದೆ ಎನ್ನುವುದಕ್ಕೆ ಪುರಾವೆ
ಗಳು ಸಿಕ್ಕಂತಾಗಿವೆ.

ಇಲ್ಲಿ ಸೇನಾ ಬಳಕೆಗೆ ಪೂರಕವಾದ ರನ್​ವೇ ನಿರ್ಮಾಣ ಮಾಡುತ್ತಿರುವುದು ಭಾರತ ಸೇರಿದಂತೆ ಏಷ್ಯಾ ದೇಶಗಳ ಆತಂಕಕ್ಕೆ ಕಾರಣವಾಗಿದೆ. ತನ್ನ ಸೇನಾ ಶಕ್ತಿಯಿಂದ ಸಣ್ಣ ದೇಶಗಳನ್ನು ಹದ್ದುಬಸ್ತಿನಲ್ಲಿಡುವ ಚೀನಾದ ಹುನ್ನಾರವೂ ಇದಾಗಿದೆ ಎನ್ನಲಾಗುತ್ತಿದೆ. ಇದೇ ಸಮುದ್ರದಲ್ಲಿರುವ ಪ್ಯಾರಾಸೆಲ್ ದ್ವೀಪಸಮೂಹದಲ್ಲಿ ಚೀನಾ ರನ್‌ವೇ ನಿರ್ಮಾಣ ಮಾಡುತ್ತಿರುವುದೂ ಬೆಳಕಿಗೆ ಬಂದಿದ್ದು  ವಿವಾದದ ಕಿಡಿಹೊತ್ತಿಸಿದೆ. 

ಸಮರಾಭ್ಯಾಸ: ವಿವಾದಿತ ಸಮುದ್ರದಲ್ಲಿ ಚೀನಾ ನೌಕಾಪಡೆ ಈಚೆಗೆ ಸಮರಾಭ್ಯಾಸ ಆರಂಭಿಸಿದೆ. ಈ ಅಭ್ಯಾಸ ಸೇನೆ  ನಡೆಸುವ ನಿಯಮಿತ ಅಭ್ಯಾಸದ ಭಾಗವಾಗಿದೆ ಎಂದು ಚೀನಾ ಹೇಳಿದ್ದರೂ ಈ ಭಾಗದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೇ ಸಮುದ್ರದಲ್ಲಿ ಜೂನ್‌ನಲ್ಲಿ ಅಮೆರಿಕ ಮತ್ತು ಜಪಾನ್‌ ದೇಶಗಳು ಫಿಲಿಪ್ಪೀನ್ಸ್‌ ಜೊತೆಗೆ ಪ್ರತ್ಯೇಕ ಸಮರಾ
ಭ್ಯಾಸ ನಡೆಸಿದ್ದವು. ಹೀಗೆ ಮುಯ್ಯಿಗೆ ಮುಯ್ಯಿ ಎನ್ನುವಂತಹ ಘಟನೆಗಳು ಇಲ್ಲಿ ಮರುಕಳಿಸಿ ವಿವಾದದ ಸ್ವರೂಪ ಪಡೆದು ಆಮೇಲೆ ತಣ್ಣಗಾಗುತ್ತಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿರುವ ನನ್‌ಷಾ ದ್ವೀಪ ಮತ್ತು ತನ್ನ ಭೂಪ್ರದೇಶಗಳ ಮೇಲೆ ಕಳೆದ ಮೇನಲ್ಲಿ ಅಮೆರಿಕದ ಕಣ್ಗಾವಲು ವಿಮಾನ ಹಾರಾಡುತ್ತಿತ್ತು ಎಂದು ಹೇಳಿರುವ ಚೀನಾ, ಕೆಲವು ಶಕ್ತಿಶಾಲಿ ರಾಷ್ಟ್ರಗಳು ಈ ವಿವಾ
ದದಲ್ಲಿ ಇತರ ರಾಷ್ಟ್ರಗಳನ್ನೂ ಎಳೆದುಕೊಂಡು ಬರುತ್ತಿದೆ ಎಂದು ದೂರಿದೆ. ತೈಲ ವಿವಾದ: 11 ಶತಕೋಟಿ ಬ್ಯಾರೆಲ್‌ ತೈಲ ಮತ್ತು 190 ಲಕ್ಷ ಕೋಟಿ ಘನ  ಅಡಿಗಳಷ್ಟು ನೈಸರ್ಗಿಕ ಅನಿಲ ದಕ್ಷಿಣ ಚೀನಾ ಸಮುದ್ರದ ಒಡಲಲ್ಲಿ ಇದೆ ಎಂದು ಹೇಳಲಾಗುತ್ತಿದೆ.  ಈ ಸಮುದ್ರದಲ್ಲಿ ತೈಲ ಬಾವಿಗಳನ್ನು ಕೊರೆಸುವ ಸಂಬಂಧ ಭಾರತ– ವಿಯೆಟ್ನಾಂ ನಡುವೆ ಒಪ್ಪಂದ ನಡೆದಿದ್ದು, ಇದನ್ನು  ಚೀನಾ ವಿರೋಧಿಸಿದೆ.

ವಿಯೆಟ್ನಾಂ ಹಾಗೂ ಯಾವುದೇ  ಮೂರನೇ ದೇಶದ ನಡುವಣ ನ್ಯಾಯಸಮ್ಮತ ಒಪ್ಪಂದಕ್ಕೆ ನಾವು ವಿರೋಧ 

ವ್ಯಕ್ತಪಡಿಸುವುದಿಲ್ಲ. ಆದರೆ, ನನ್‌ಷಾ ದ್ವೀಪ ಹಾಗೂ ಅದರ ಸುತ್ತಲಿನ ಸಮುದ್ರದ ಮೇಲೆ ಚೀನಾಕ್ಕೆ ಸಂಪೂರ್ಣ ಅಧಿಕಾರವಿದೆ. ಭಾರತ ಮಾತ್ರವಲ್ಲ, ವಿಯೆಟ್ನಾಂ ಜತೆ ಯಾವುದೇ ದೇಶ ತೈಲ ಅನ್ವೇಷಣೆ ಒಪ್ಪಂದ ಮಾಡಿಕೊಂ
ಡರೂ ಅದನ್ನು ನಾವು ವಿರೋಧಿಸುತ್ತೇವೆ ಎಂದಿದೆ.

ಹಡಗು ಸಂಚಾರ ಮಾರ್ಗ: ದಕ್ಷಿಣ ಚೀನಾ ಸಮುದ್ರವು ಏಷ್ಯಾ ದೇಶಗಳಿಗೆ ಸರಕು ಸಾಗಣೆಯ ಪ್ರಮುಖ ಮಾರ್ಗ
ವಾಗಿದ್ದು, ಜಗತ್ತಿನ ಮೂರನೇ ಒಂದರಷ್ಟು ಸರಕು ಸಾಗಣೆ ಈ ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ.  ಮೂಲಗಳ ಪ್ರಕಾರ ಭಾರತದಿಂದ ಸರಕು ಸಾಗಿಸುವ ಶೇ 50ರಷ್ಟು ಹಡಗು ಗಳು ಈ ಮಾರ್ಗದಲ್ಲೇ ಸಾಗಲಿವೆ.   ಈ ಜಲ ಪ್ರದೇಶದಲ್ಲಿ ಮುಕ್ತ ಹಡಗು ಸಂಚಾರದ ವಿಷಯ ಚೀನಾ, ಅಮೆರಿಕ ಮಧ್ಯೆ ವಿವಾದಕ್ಕೆ ಕಾರಣವಾಗಿದೆ.

ವಿಶ್ವಸಂಸ್ಥೆ ಮನವಿ: ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದ ವಿವಾದಗಳನ್ನು ಸಂಧಾನದ ಮೂಲಕ ಬಗೆಹರಿಸಿ
ಕೊಳ್ಳಬೇಕು. ಈ ಪ್ರದೇಶದಲ್ಲಿ ಉದ್ವಿಗ್ನತೆಗೆ ಪ್ರಚೋದನಕಾರಿಯಾಗಬಹುದಾದ ಯಾವುದೇ ಕ್ರಮಗಳನ್ನು ಅನುಸರಿಸಬಾರದು ಎಂದು ವಿಶ್ವಸಂಸ್ಥೆ ಮನವಿ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT