ಕ್ವಾಲಾಲಂಪುರ (ಪಿಟಿಐ): ಒಸಾಮಾ ಬಿನ್ ಲಾಡೆನ್ ಎಲ್ಲಿದ್ದಾನೆಂದು ತನಗೇನೂ ತಿಳಿದಿಲ್ಲ ಎನ್ನುತ್ತಿದ್ದ ಪಾಕಿಸ್ತಾನ, ತನ್ನ ನೆಲದಲ್ಲೇ ಆತ ಹತ್ಯೆಯಾಗಿರುವ ಬಗ್ಗೆ ಸಾಕಷ್ಟು ವಿವರಣೆ ನೀಡಬೇಕಿದೆ ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಆಗ್ರಹಿಸಿದರು.

ಮಲೇಷ್ಯಾಗೆ ಮೂರು ದಿನಗಳ ಭೇಟಿ ನೀಡಿರುವ ಸಚಿವರು ಮಂಗಳವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಲಾಡೆನ್ ಇರುವಿಕೆಯ ಕುರಿತು ಇಡೀ ವಿಶ್ವದ ಅನುಮಾನಕ್ಕೆ ಪಾಕ್ ಉತ್ತರಿಸಬೇಕಿದೆ ಎಂದರು.

ಸಚಿವರು ತಮ್ಮ ಮಲೇಷ್ಯಾ ಸಹವರ್ತಿ ಅನಿಫಾ ಅಮಾನ್ ಅವರೊಡನೆ 5ನೇ ಜಂಟಿ ಆಯೋಗದ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ ಮತ್ತು ಲಾಡೆನ್ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಕೇವಲ ಮೇಲಿನ ಒಂದು ವಾಕ್ಯದಲ್ಲಷ್ಟೇ ಪ್ರತಿಕ್ರಿಯಿಸಿದರು. ಇಬ್ಬರೂ ನಾಯಕರು ಆ ಬಗ್ಗೆ ಹೆಚ್ಚು ಮಾತನಾಡಲು ನಿರಾಕರಿಸಿದರು.

ಭಯೋತ್ಪಾದಕ ದೇಶವೆಂದು ಘೋಷಿಸಲು ಸಕಾಲ
ವಾಷಿಂಗ್ಟನ್ (ಪಿಟಿಐ): ‘ತನಗೇನೂ ಗೊತ್ತಿಲ್ಲ ಎಂದು ಅಮಾಯಕತನದ ಹೇಳಿಕೆ ನೀಡುವ ಪಾಕಿಸ್ತಾನದ ಕಪಟತೆ ಇನ್ನುಮುಂದೆ ನಡೆಯುವುದಿಲ್ಲ ಎಂದು ಹೇಳಿರುವ ಖ್ಯಾತ ಕಾದಂಬರಿಕಾರ ಭಾರತೀಯ ಮೂಲದ ಸಲ್ಮಾನ್ ರಷ್ಧಿ ಪಾಕ್ ಅನ್ನು ಭಯೋತ್ಪಾದಕ ದೇಶ ಎಂದು ಘೋಷಿಸುವ ಸಮಯ ಬಂದಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.