ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ನೆಲದಲ್ಲಿ ಮನಸೋ ಇಚ್ಛೆ ದಾಳಿ ಮಾಡುವ ಸಂಚನ್ನು ಅಲ್ ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಹತ್ಯೆಗೆ ಮುನ್ನ ರೂಪಿಸಿದ್ದ ಎಂಬ ವಿಷಯ ಬಹಿರಂಗವಾಗಿದೆ.
ಅಬೊಟಾಬಾದ್ನಲ್ಲಿ ಅಮೆರಿಕ ಸೈನಿಕರಿಂದ ಹತ್ಯೆಯಾದ ನಂತರ ಆತನ ಮನೆಯಲ್ಲಿ ವಶಪಡಿಸಿಕೊಂಡ ದಾಖಲೆಗಳಿಂದ ಈ ವಿಷಯ ಬೆಳಕಿಗೆ ಬಂದಿದೆ.

ಲಾಡೆನ್ ಹತ್ಯೆ ನಂತರ ವಶಪಡಿಸಿಕೊಂಡಿರುವ ದಾಖಲೆಯಲ್ಲಿರುವ ಅಂಶಗಳನ್ನು ದ್ವಿಪಕ್ಷೀಯ ಒಪ್ಪಂದ ಅನ್ವಯ ಸಿಐಎ ಪಾಕಿಸ್ತಾನದ ಜತೆ ಹಂಚಿ ಕೊಂಡಿದ್ದು, ಬಹುಶಃ ಇಲ್ಲಿನ ಭೂ ಪ್ರದೇಶದಲ್ಲಿ ಅಲ್ ಖೈದಾ ದಾಳಿ ನಡೆಸುವ ಸಂಚು ರೂಪಿಸಿದ್ದ ಎಂದು `ಡಾನ್~ ಪತ್ರಿಕೆ ವರದಿ ಮಾಡಿದೆ.

ಇದೇ ಮೊದಲ ಬಾರಿಗೆ ಪಾಕಿಸ್ತಾನದ ಜತೆ ಅಮೆರಿಕದ ಸಿಐಎ ಮಾಹಿತಿಗಳನ್ನು ಹಂಚಿಕೊಂಡಿದೆ ಎಂದು `ಡಾನ್~ ಪತ್ರಿಕೆ ತಿಳಿಸಿದೆ.

ಅಮೆರಿಕ ಎಚ್ಚರಿಕೆ: ಮೇ 2ಕ್ಕೆ ಲಾಡೆನ್ನನ್ನು ಅಬೋಟಾಬಾದ್ನಲ್ಲಿ ಅಮೆರಿಕ ಯೋಧರು ಹತ್ಯೆ ಮಾಡಿ ಒಂದು ವರ್ಷವಾಗಲಿದ್ದು ಪಾಕಿಸ್ತಾನದಲ್ಲಿರುವ ತಮ್ಮ ದೇಶದ ರಾಜ ತಾಂತ್ರಿಕರು ಮತ್ತು ಪ್ರಜೆಗಳು ಎಚ್ಚರಿಕೆಯಿಂದ ಇರುವಂತೆ ಅಮೆರಿಕ ಸಂದೇಶ ರವಾನಿಸಿದೆ.

ಲಾಡೆನ್ ಕುಟುಂಬ ಗಡೀಪಾರು: ಪಾಕಿಸ್ತಾನವು ಲಾಡೆನ್ನ ಮೂವರು ವಿಧವಾ ಪತ್ನಿಯರು ಮತ್ತು ಮಕ್ಕಳು ಸೇರಿದಂತೆ ಆತನ ಕುಟುಂಬದ 14 ಸದಸ್ಯರನ್ನು ಶುಕ್ರವಾರ ಸೌದಿ ಅರೆಬಿಯಾಗೆ ಗಡೀಪಾರು ಮಾಡಿದೆ.
ಮೇ 2ಕ್ಕೆ ಅಮೆರಿಕದ ಪಡೆಗಳಿಂದ ಲಾಡೆನ್ ಹತ್ಯೆಯಾಗಿ ಒಂದು ವರ್ಷ ಪೂರೈಸುವುದರಿಂದ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಬಿಗಿ ಭದ್ರತೆಯ ನಡುವೆ ಶುಕ್ರವಾರ ನಸುಕಿನಲ್ಲಿ ಛಕ್ಲಾಲ ಸೇನಾ ವಾಯು ನೆಲೆಯಿಂದ ಸೌದಿ ವಿಮಾನದಲ್ಲಿ ಅವರನ್ನು ಕರೆದೊಯ್ಯಲಾಯಿತು. ಇಸ್ಲಾಮಾಬಾದ್ನ ನಿವಾಸದಿಂದ ಅವರನ್ನು ಮಿನಿ ಬಸ್ನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.