ನ್ಯೂಯಾರ್ಕ್ (ಪಿಟಿಐ): ಭಾರತದ ವಿಭಜನೆ ಮತ್ತು ಅದರ ದುಷ್ಪರಿಣಾಮಗಳನ್ನು ಕುರಿತ ‘ಮಿಡ್ನೈಟ್ಸ್ ಫ್ಯೂರೀಸ್: ದಿ ಡೆಡ್ಲಿ ಲೆಗಸಿ ಆಫ್ ಇಂಡಿಯಾಸ್ ಪಾರ್ಟಿಷಿಯನ್’ ಕೃತಿ 2016ನೇ ಸಾಲಿನ ಪ್ರತಿಷ್ಠಿತ ‘ವಿಲಿಯಂ ಇ ಕಾಲ್ಬಿ’ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.

ವಾಷಿಂಗ್ಟನ್ ಮೂಲದ, ಸಿಂಗಪುರ ನಿವಾಸಿ ಲೇಖಕ, ಪತ್ರಕರ್ತ ನಿಸಿದ್ ಹಜಾರಿ ಅವರ ಮೊದಲ ಕೃತಿ ಇದು. ‘ಮಿಡ್ನೈಟ್ಸ್ ಫ್ಯೂರೀಸ್...’ 1947ರ ಭಾರತದ ವಿಭಜನೆ ಮತ್ತು ಆ ಸಂದರ್ಭದಲ್ಲುಂಟಾದ ಹಿಂಸಾಚಾರದ ಕಥಾ ವಸ್ತುವನ್ನೊಳಗೊಂಡಿದೆ.

ಪ್ರಶಸ್ತಿಯು ಸುಮಾರು ₹ 3.40 ಲಕ್ಷ (5 ಸಾವಿರ ಡಾಲರ್) ಮೊತ್ತವನ್ನೊಳಗೊಂಡಿದೆ. ಪ್ರಶಸ್ತಿಯ ಮೊತ್ತವನ್ನು ಚಿಕಾಗೊ ಮೂಲದ ತೈವಾನ್ ಫೌಂಡೇಷನ್ ಪ್ರಾಯೋಜಿಸುತ್ತದೆ.

‘ಬ್ಲೂಮ್ ಬರ್ಗ್ ನ್ಯೂಸ್’ ಪತ್ರಿಕೆಯ ಏಷ್ಯಾ ಆವೃತ್ತಿಯ ಸಂಪಾದಕರಾಗಿರುವ ನಿಸಿದ್, ತಮ್ಮ ಅಂಕಣದಲ್ಲಿ ಏಷ್ಯಾದ ರಾಜಕೀಯ, ಆರ್ಥಿಕ ವಿಶ್ಲೇಷಣೆಗಳನ್ನು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.