ದುಬೈ:  ಮೆಕ್ಸಿಕೊ ಪತ್ರಕರ್ತೆ ಅನಾಬೆಲ್ ಹೆರ್ನಾಂಡೆಜ್ ಅವರು ವಿಶ್ವ ದಿನಪತ್ರಿಕೆಗಳ ಒಕ್ಕೂಟ ಮತ್ತು ಸುದ್ದಿ ಮುದ್ರಣ ಸಂಸ್ಥೆ (ವ್ಯಾನ್- ಇಫ್ರಾ)ಯ ಪ್ರಸಕ್ತ ಸಾಲಿನ `ಗೋಲ್ಡನ್ ಪೆನ್ ಆಫ್ ಫ್ರೀಡಂ~ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭ್ರಷ್ಟಾಚಾರ, ರಾಜಕೀಯ ಅಧಿಕಾರ ದುರುಪಯೋಗಕ್ಕೆ ಸಂಬಂಧಿಸಿದ ತನಿಖಾ ವರದಿಗಳಿಂದ ಖ್ಯಾತರಾಗಿರುವ ಹೆರ್ನಾಂಡೆಜ್, `ರಿಫಾರ್ಮಾ~, `ಮಿಲೆನಿಯಿ~, ಇಐ ಯುನಿವರ್ಸಲ್ ಹಾಗೂ ಇದರ ತನಿಖಾ ಪುರವಣಿ ಲಾ ರೆವಿಸ್ತಾ ಸೇರಿ ಹಲವಾರು ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಆನ್ಲೈನ್ ಸುದ್ದಿ ತಾಣ `ರಿಪೋರ್ಟ್ ಇಂಡಿಗೊ~ದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಗತ್ತಿನಲ್ಲಿಯೇ ಮೆಕ್ಸಿಕೊ ದೇಶವು ಪತ್ರಕರ್ತರಿಗೆ ಅತ್ಯಂತ ಅಪಾಯದ ಸ್ಥಳ. ಪತ್ರಕರ್ತರ ಹತ್ಯೆ ಹಾಗೂ ಹಿಂಸಾಚಾರದಂಥ ಘಟನೆಗಳು ಇಲ್ಲಿ ಸಾಮಾನ್ಯ. ಇಂಥ ಸವಾಲುಗಳನ್ನು ಎದುರಿಸಿ ಮಾದಕ ದ್ರವ್ಯ ಸಾಗಾಟ, ಸಂಘಟಿತ ಅಪರಾಧ, ಸರ್ಕಾರದ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಬಗ್ಗೆ ತನಿಖಾ ವರದಿಗಾರಿಕೆ ಮಾಡಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಹೆರ್ನಾಂಡೆಜ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವ್ಯಾನ್-ಇಫ್ರಾ ಮಂಡಳಿ ತಿಳಿಸಿದೆ.

ಮೆಕ್ಸಿಕೊದ ಅಪರಾಧ ಜಗತ್ತಿನ ಕುರಿತ `ಲಾಸ್ ಸೆನೊರ್ಸ್ ಡೆಲ್ ನಾರ್ಕೊ~/ `ದಿ ಡ್ರಗ್ ಟ್ರಾಫಿಕರ್ಸ್ (2010)~ ಪುಸ್ತಕಕ್ಕೆ ಹೆರ್ನಾಂಡೆಜ್ ಅವರಿಗೆ ಅನೇಕ ಪ್ರಾಣ ಬೆದರಿಕೆ ಕರೆಗಳು ಬಂದಿವೆ. ಹೆರ್ನಾಂಡೆಜ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿ,ಪ್ರತಿಯೊಬ್ಬ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವುದು ಸರ್ಕಾರದ ಕೆಲಸ ಎಂಬುದನ್ನು ಮೆಕ್ಸಿಕೊ ಆಡಳಿತಕ್ಕೆ ಮನದಟ್ಟು ಮಾಡಲು ಪ್ರಯತ್ನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.