ಇಸ್ಲಾಮಾಬಾದ್ (ಪಿಟಿಐ): ಭಾರತದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಸಿಯಾಚಿನ್ ಪ್ರದೇಶದ ಸೇನಾ ಶಿಬಿರದ ಬಳಿ ಶನಿವಾರ ಸಂಭವಿಸಿದ ಹಿಮಕುಸಿತದಲ್ಲಿ ಮೃತಪಟ್ಟ 139 ಪಾಕ್ ಸೈನಿಕರ ಶೋಧಕಾರ್ಯ ಸೋಮವಾರವೂ ಮುಂದುವರಿದಿದ್ದು, ಇದುವರೆಗೂ ಯಾರ ಸುಳಿವೂ ಸಿಕ್ಕಿಲ್ಲ.

`ಇಂತಹ ಭಾರಿ ಹಿಮಕುಸಿತದಲ್ಲಿ ಯಾರಾದರೂ ಬದುಕುಳಿದ್ದಿದ್ದರೆ, ಅದೊಂದು ರೀತಿಯ ಪವಾಡವೇ ಸರಿ~ ಎಂದು ಸೇನಾ ವಕ್ತಾರ ಮೇಜರ್ ಜನರಲ್ ಅತ್ತರ್ ಅಬ್ಬಾಸ್ ತಿಳಿಸಿದ್ದಾರೆ.

`ರಕ್ಷಣಾ ಕಾರ್ಯಕ್ಕೆ ತಾಂತ್ರಿಕ ನೆರವು ನೀಡಲು ಅಮೆರಿಕದಿಂದ ಎಂಟು ಜನರನ್ನೊಳಗೊಂಡ ಪರಿಣತರ ತಂಡ ಈಗಾಗಲೇ ಆಗಮಿಸಿದ್ದು, ಈ ತಂಡದೊಂದಿಗೆ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ~ ಎಂದು ಸೇನೆ ತಿಳಿಸಿದೆ.

ರಕ್ಷಣಾ ಕಾರ್ಯವು ಜಟಿಲವಾಗುತ್ತಿರುವುದರಿಂದ ಪಾಕ್, ಇದಕ್ಕಾಗಿ ಇನ್ನಷ್ಟು ದೇಶಗಳಿಂದ ತಾಂತ್ರಿಕ ನೆರವು ಪಡೆಯಲು ಚಿಂತನೆ ನಡೆಸಿದೆ ಎಂದೂ ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.