ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರೆಕ್ಕೆ-ಬೇರು

ADVERTISEMENT

ಶುಭ ವಿದಾಯ

ಅವರ ಮನೆ ಮಗಳು ಗೌರಿ, ಹಸೆಮಣೆ ಏರಿ ವಧುವಾಗಿ ಕುಳಿತಿದ್ದಾಳೆ. ಅಪ್ಪ ಅವ್ವನ ಪ್ರೀತಿ ಬೆಟ್ಟದಷ್ಟಿದ್ದರೂ, ಗಂಡನ ಬೆಚ್ಚನೆ ಪ್ರೀತಿಯ ಆಸೆ ಹೇಗಿರುತ್ತದೋ ಎಂಬ ಕೌತುಕ ಅವಳಿಗೆ. ರಾಮನಗರದ ಕರಿಯಪ್ಪ ಮಾಸ್ತರಿಗೆ ರಾಣೆಬೆನ್ನೂರಿಗೆ ವರ್ಗವಾಗಿದೆ.
Last Updated 7 ಮಾರ್ಚ್ 2015, 19:30 IST
ಶುಭ ವಿದಾಯ

ಉತ್ಕೃಷ್ಟತೆಯ ವ್ಯಾಖ್ಯಾನ

ಉತ್ಕೃಷ್ಟತೆ ಎಂದರೇನು? ಇದನ್ನು ಸಾಧಿಸುವುದು ಹೇಗೆ? ಉತ್ಕೃಷ್ಟತೆಗೂ ಸ್ಪಷ್ಟತೆಗೂ; ಉತ್ಕೃಷ್ಟತೆಗೂ ಶುಚಿತ್ವಕ್ಕೂ ಏನು ಸಂಬಂಧ? ಉತ್ಕೃಷ್ಟತೆಗೂ ಸತ್ಯಕ್ಕೂ ಸಂಬಂಧ ಉಂಟೋ? ನಾವು ಒಪ್ಪಿಕೊಂಡ ಕೆಲಸವನ್ನು ಚೆನ್ನಾಗಿ ಮಾಡಿ ಮುಗಿಸುವುದನ್ನು ಉತ್ಕೃಷ್ಟತೆ ಎನ್ನುತ್ತೇವೆ. ಚೆನ್ನಾಗಿ ಎಂದರೆ ಏನು? ಎಷ್ಟು ಚೆನ್ನಾಗಿ? ಯಾರಿಗೆ ಚೆನ್ನಾಗಿ? Perfection ಎಂಬುದು ಪಾರವಿಲ್ಲದ್ದು. ಯಾವ ಕೆಲಸವನ್ನು ಎಷ್ಟೇ ಅದ್ಭುತವಾಗಿ ಮಾಡಿ ಮುಗಿಸಿದ ಮೇಲೂ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎನಿಸುತ್ತದೆ.
Last Updated 28 ಫೆಬ್ರುವರಿ 2015, 19:30 IST
fallback

ಅಮೃತೋತ್ಸವದಲ್ಲಿ ಆತ್ಮಾವಲೋಕನವಿರಲಿ

ಅತ್ತ ನಾನು ಓದಿದ ಮೈಸೂರು ವಿಶ್ವವಿದ್ಯಾನಿಲಯವು, ಇತ್ತ ಬೆಂಗಳೂರಿನ ಕೇಂದ್ರ ಗ್ರಂಥಾಲಯದ ಪಾರಂಪರಿಕ ಕಟ್ಟಡವು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನೂರರ ಸಂಭ್ರಮದಲ್ಲಿ ಮುಳುಗಿರುವಾಗ ನಡುವಿನ ಮಂಡ್ಯವು ಅಮೃತೋತ್ಸವದ ಸವಿ ಉಣ್ಣುತ್ತಿದೆ. ಮೈಸೂರಿನಿಂದ ಮಂಡ್ಯ ಜಿಲ್ಲೆಯು ಸ್ವತಂತ್ರಪೂರ್ವದಲ್ಲೇ ಬೇರ್ಪಟ್ಟಿತು.
Last Updated 21 ಫೆಬ್ರುವರಿ 2015, 19:30 IST
ಅಮೃತೋತ್ಸವದಲ್ಲಿ ಆತ್ಮಾವಲೋಕನವಿರಲಿ

ಗಟ್ಟಿ ಕಥೆಗಾರ ಪ್ರೊ.ಸುಧಾಕರ

ಅರವತ್ತರ ದಶಕದಲ್ಲಿ ಪ್ರೊ. ಸುಧಾಕರ, ಕೆಸರು ಗದ್ದೆಯಲ್ಲಿ ನಳನಳಿಸುವ, ಚಿನ್ನದ ಹೊಳಪಿನ, ನಾಟಿ ಪೈರಿನಂಥ ಕತೆಗಳನ್ನು ಬರೆದರು. ಅವರ ಕತೆಗಳಲ್ಲಿ ಕಣ್ಣಿ ಕಿತ್ತ ಹಸುಗಳಿದ್ದುವು. ಹೊರಲಾರದ ಹೊರೆ ಹೊತ್ತ ಹಳ್ಳಿಗರಿದ್ದರು. ಏಕನಾದ ಮಿಡಿಯುವ ಗೋಸಾಯಿಗಳಿದ್ದರು. ಯಾರಿಗೇನು ಕಮ್ಮಿ ಎಂದು ಬಂಡೆದ್ದ ತಳವರ್ಗದ ಪಾತ್ರಗಳಿದ್ದುವು. ಕೋಡಿಬೀಳುವ ಕೆರೆಗಳಿದ್ದುವು.
Last Updated 14 ಫೆಬ್ರುವರಿ 2015, 19:30 IST
ಗಟ್ಟಿ ಕಥೆಗಾರ ಪ್ರೊ.ಸುಧಾಕರ

ಆದರ್ಶ ಮತ್ತು ವಾಸ್ತವ

ದಾರಿ ಸವೆದಷ್ಟೂ ದೂರ ಸರಿಯುವಂತೆ ಭಾಸವಾಗುವ ಊರಿನ ಹೆಸರು ಆದರ್ಶ. ಅದು ಮುಟ್ಟಲಾಗದ ಗುರಿ; ತಲುಪಲಾಗದ ಊರು. ಕೆಲವರು ಆದರ್ಶದ ಹಟಕ್ಕೆ ಬಿದ್ದು ದುರ್ಗಮ ಹಾದಿಯಲ್ಲಿ ಪ್ರಯಾಣಿಸಲು ಹೊರಡುತ್ತಾರೆ. ಈ ಕಲ್ಲುಮುಳ್ಳಿನ ಹಾದಿಯಲ್ಲಿ ಬೆಂದು ಬಸವಳಿಯುತ್ತಾರೆ. ಅದಕ್ಕಾಗಿ ವರ್ತಮಾನದ ಕ್ಷೇಮದ ನೆಲೆಯನ್ನು ಕೂಡಾ ತ್ಯಜಿಸುತ್ತಾರೆ. ಆದರ್ಶವಾದಿಯೊಬ್ಬ ತನ್ನ ಗುರಿ ಹುಡುಕಿ ಎಷ್ಟು ದೂರ ಪಯಣಿಸಿದ ಎಂದು ಚರ್ಚಿಸಬಹುದೇ ಹೊರತು ಅವನು ತಲುಪಿದ ಬಗ್ಗೆ ಖಾತರಿ ಇಲ್ಲ. ಆದರ್ಶವೆಂಬ ಸತ್ಯಕ್ಕೆ ಎಷ್ಟು ಹತ್ತಿರವಿದ್ದ ಎಂಬುದಷ್ಟೇ ಲೆಕ್ಕಾಚಾರ.
Last Updated 7 ಫೆಬ್ರುವರಿ 2015, 19:30 IST
fallback

ನಮ್ಮ ನೋವುಗಳು ತೀರಲಿಲ್ಲ

ದೇವನೂರು ಒಲ್ಲೆ ಎಂದ ಸಮ್ಮೇಳನ. ಸಿದ್ಧಲಿಂಗಯ್ಯ ಒಪ್ಪಿಕೊಂಡ ಸಮ್ಮೇಳನ. ಕಸಾಪದ ಶತಾಯುಷ್ಯ ಸಮ್ಮೇಳನ. ಎಂದಿನ ಮೆರವಣಿಗೆ, ಉದ್ಘಾಟನೆ, ಗೋಷ್ಠಿ, ಸನ್ಮಾನ, ಸಂವಾದ, ಮನರಂಜನೆ ಮತ್ತು ಸಮಾರೋಪಗಳ ಸರಪಳಿಯ ಅಖಿಲ ಭಾರತ ಎಂಬತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನ. ಮೈದಾನದಲ್ಲಿ ಆಟವಾಡುವ ತನ್ನ ಮಕ್ಕಳ ಸಂಭ್ರಮ, ಸಂತೋಷ, ಹಾರಾಟ, ನೂಕಾಟ, ಜಗಳ, ವಾಗ್ವಾದಗಳನ್ನು ತಾಯ ಮಂದಸ್ಮಿತ ನೋಟದಿಂದ ಸುಮ್ಮನೆ ನೋಡುತ್ತಾ ನಿಂತ ಬಾಹುಬಲಿಯ ದೈವಾಧ್ಯಕ್ಷತೆಯ ಶ್ರವಣಬೆಳಗೊಳದ ಸಮ್ಮೇಳನ.
Last Updated 31 ಜನವರಿ 2015, 19:30 IST
ನಮ್ಮ ನೋವುಗಳು ತೀರಲಿಲ್ಲ

ಮೂರು ಲಕ್ಷ ರೂಪಾಯಿಗಳ ಹೊಸ ಹೀರೋಗಳು!

ಹೊಸದಾಗಿ ಬೆಳ್ಳಿತೆರೆಗೆ ಪರಿಚಯಿಸಲಾದ ಇಬ್ಬರು ಹೀರೋಗಳಂತೆ ಮೇಕಪ್ ಮಾಡಿಕೊಂಡು ಫಸ್ಟ್‌ಶಾಟ್ ಎದುರಿಸುತ್ತಿರುವ ಈ ಹೋರಿಗಳು ಎಷ್ಟು ಆಕರ್ಷಕವಾಗಿವೆ! ಇವುಗಳ ವಯಸ್ಸು ಒಂದು ವರ್ಷ ಎರಡು ತಿಂಗಳು. ಇನ್ನೂ ಹಲ್ಲಾಗಿಲ್ಲ.
Last Updated 24 ಜನವರಿ 2015, 19:30 IST
ಮೂರು ಲಕ್ಷ ರೂಪಾಯಿಗಳ ಹೊಸ ಹೀರೋಗಳು!
ADVERTISEMENT

ನಮ್ಮ ನೆಲದ ನೂರಾರು ತಾಯಂದಿರು

ಮೊನ್ನೆ ಅರುನಿಮಾ ಸಿನ್ಹಾ ಎಂಬ ದಿಟ್ಟ ಆಟಗಾರ್ತಿಯ ಬಗ್ಗೆ ಓದುತ್ತಿದ್ದೆ. ಈಕೆಯನ್ನು ದುಷ್ಟರು ನಾಲ್ಕು ವರ್ಷಗಳ ಹಿಂದೆ ಚಲಿಸುತ್ತಿದ್ದ ರೈಲಿನಿಂದ ತಳ್ಳಿದಾಗ ಕಾಲೊಂದು ಕತ್ತರಿಸಿಹೋಯಿತು. ಅರಿವಳಿಕೆ ಕೂಡಾ ಇಲ್ಲದ ಸಣ್ಣ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮುಂದೆ ಕೃತಕ ಕಾಲು ಜೋಡಿಸಿಕೊಂಡು ಎವರೆಸ್ಟ್ ಏರಿದ ಸಾಹಸಿ. ದಾರುಣತೆಯನ್ನು ದಾಟಿ ಸಾಧನೆಯ ಶಿಖರವನ್ನೇರಿದವರ ಬಗ್ಗೆಯೇ ಯೋಚಿಸುತ್ತಿದ್ದಾಗ ಮಿತ್ರರಾದ ಶಂಕರೇಗೌಡರು ಒಂದು ದೈತ್ಯ ಇಂಗ್ಲಿಷ್ ಪುಸ್ತಕ ಹಿಡಿದು ಬಂದರು.
Last Updated 17 ಜನವರಿ 2015, 19:30 IST
ನಮ್ಮ ನೆಲದ ನೂರಾರು ತಾಯಂದಿರು

ಸಿಜಿಕೆ ಎಂಬ ಬೆಳದಿಂಗಳು

ಹಗಲುಗಳನ್ನು ಹೇಗಾದರೂ ಮರೆಯಬಹುದು. ಆದರೆ ಆಪ್ತರ ಹುಟ್ಟಿನ ಮತ್ತು ಸಾವಿನ ನಟ್ಟಿರುಳುಗಳನ್ನು ಮರೆಯುವುದು ಕಷ್ಟ. ಒಂದರಲ್ಲಿ ಸ್ವಾಗತ ಭಾಷಣದ ಉತ್ಸಾಹ, ಇನ್ನೊಂದರಲ್ಲಿ ವಂದನಾರ್ಪಣೆಯ ನಿಟ್ಟುಸಿರುಗಳು ಇರುತ್ತವೆ. ಗೆಳೆಯ ಸಿಜಿಕೆ ತೀರಿಕೊಂಡು ಒಂಬತ್ತು ವರ್ಷಗಳಾಯಿತು ಎಂದರೆ ನಂಬುವುದು ಕಷ್ಟ.
Last Updated 10 ಜನವರಿ 2015, 19:30 IST
fallback

ಹೊಸಗನ್ನಡ ಕವಿತೆಯ ಮೊದಲ ಹೆಜ್ಜೆ- ಬಿಎಂಶ್ರೀ

ನಮ್ಮೂರಿನ ಪಕ್ಕದ ಬೆಳ್ಳೂರಿನಲ್ಲಿ ಜನವರಿ ೩, ೧೮೮೪ ರಲ್ಲಿ ಹುಟ್ಟಿದ ಬಿಎಂಶ್ರೀ ಕನ್ನಡ, ಇಂಗ್ಲಿಷ್, ತಮಿಳು ಮತ್ತು ಸಂಸ್ಕೃತ ಬಲ್ಲವರಾಗಿದ್ದರು. ಆಗ ಪುಸ್ತಕಗಳಂತೆಯೇ ಭಾಷಣಗಳೂ, ವಿಶೇಷ ಉಪನ್ಯಾಸಗಳೂ ಚಿರಸ್ಥಾಯಿಯಾಗಿ ಉಳಿದುಬಿಡುತ್ತಿದ್ದವು.
Last Updated 3 ಜನವರಿ 2015, 19:30 IST
ಹೊಸಗನ್ನಡ ಕವಿತೆಯ ಮೊದಲ ಹೆಜ್ಜೆ- ಬಿಎಂಶ್ರೀ
ADVERTISEMENT