ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕಾಡನೂರು ಗ್ರಾಮದ ಮಹಿಳೆಯೊಬ್ಬರು ಇಲ್ಲಿನ ‘ಹಿಮ್ಸ್’ ಆಸ್ಪತ್ರೆಯಲ್ಲಿ ಗುರುವಾರ ಒಂದು ಗಂಡು ಹಾಗೂ ಎರಡು ಹೆಣ್ಣು ಸೇರಿದಂತೆ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

‘ಹಿಮ್ಸ್’ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಿದ್ದ ಅವರಿಗೆ, ಅಲ್ಲಿನ ಸ್ತ್ರೀರೋಗ ತಜ್ಞೆ ಡಾ.ನ್ಯಾನ್ಸಿ ಪಾಲ್ ಮಾರ್ಗದರ್ಶನದಲ್ಲಿ ವೈದ್ಯರು, ಸಿಬ್ಬಂದಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿದ್ದಾರೆ.

ಮೊದಲು ಜನಿಸಿದ ಗಂಡು ಮಗು 2.1 ಕೆ.ಜಿ ತೂಕವಿದ್ದು, ಎರಡನೇ ಹೆಣ್ಣು ಮಗು 1.9 ಕೆ.ಜಿ, ಮತ್ತೊಂದು ಹೆಣ್ಣು ಮಗು 1.8 ಕೆ.ಜಿ ತೂಕವಿದೆ. ಮೂರು ಶಿಶುಗಳಿಗೆ ಯಾವುದೇ ತೊಂದರೆ ಇಲ್ಲ ಎನ್ನುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.