ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲುದಾರಿಯ 'ಕನಸಲೂ ನೀನೆ' ಹಾಡಿನಿಂದ ಸ್ಫೂರ್ತಿ ಪಡೆದ 'ದೀವಾನ' ಚಿತ್ರದ ಹಾಡು

Last Updated 8 ಮೇ 2017, 12:03 IST
ಅಕ್ಷರ ಗಾತ್ರ

ಅನಂತನಾಗ್ - ಕಲ್ಪನಾ ಅಭಿನಯದ 'ಬಯಲುದಾರಿ' ಚಿತ್ರದ 'ಕನಸಲೂ ನೀನೆ ಮನಸಲೂ ನೀನೆ' ಹಾಡು ಯಾರಿಗೆ ನೆನಪಿಲ್ಲ ಹೇಳಿ? ಕನ್ನಡ ಚಿತ್ರರಂಗದಲ್ಲಿ ಎವರ್‍‍ಗ್ರೀನ್ ಸಾಂಗ್ ಎಂದೆನಿಸಿಕೊಂಡಿರುವ ಈ ಹಾಡನ್ನು ಹಾಡಿದ್ದು ಎಸ್‍.ಬಿ.ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಮ್. ಸಂಗೀತ ರಾಜನ್- ನಾಗೇಂದ್ರ ಅವರದ್ದು. 1976ರಲ್ಲಿ ತೆರೆಕಂಡ 'ಬಯಲುದಾರಿ' ಚಿತ್ರ ಸೂಪರ್ ಹಿಟ್ ಆಗಿತ್ತು.

ಚಿತ್ರ: ಬಯಲುದಾರಿ
ಹಾಡು: ಕನಸಲೂ ನೀನೆ
ಗಾಯಕರು: ಎಸ್.ಪಿ ಬಾಲಸುಬ್ರಮಣ್ಯಂ, ವಾಣಿ ಜಯರಾಮ್
ಸಂಗೀತ ನಿರ್ದೇಶನ: ರಾಜನ್- ನಾಗೇಂದ್ರ

ಚಿತ್ರ: ದೀವಾನ
ಹಾಡು: ಯೇಸಿ ದಿವಾನಗೀ
ಗಾಯಕರು: ವಿನೋದ್ ರಾಥೋಡ್, ಅಲ್ಕಾ ಯಾಗ್ನಿಕ್
ಸಂಗೀತ ನಿರ್ದೇಶನ: ನದೀಮ್- ಶ್ರವಣ್

1992ರಲ್ಲಿ ತೆರೆಕಂಡ ಬಾಲಿವುಡ್ ರೊಮ್ಯಾಂಟಿಕ್ ಸಿನಿಮಾ ದೀವಾನ. ಶಾರುಖ್ ಖಾನ್, ದಿವ್ಯಾಭಾರತಿ ಮತ್ತು ರಿಷಿ ಕಪೂರ್ ನಟಿಸಿದ ಈ ಚಿತ್ರವೂ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ 'ಯೇಸಿ ದಿವಾನಗಿ' ಎಂದು ಆರಂಭವಾಗುವ ಹಾಡೊಂದಿದೆ. ಶಾರುಖ್ ಖಾನ್ ಮತ್ತು ದಿವ್ಯಾ ಭಾರತಿ ನಡುವಿನ ಪ್ರಣಯಗೀತೆ ಅದು. ವಿಷಯ ಏನಪ್ಪಾ ಅಂದರೆ, ಈ ಹಾಡಿಗೆ ಸ್ಫೂರ್ತಿ ಬಯಲುದಾರಿ ಸಿನಿಮಾದ ಕನಸಲೂ ನೀನೆ ಹಾಡು.

ದೀವಾನ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದು ನದೀಮ್-ಶ್ರವಣ್ ಜೋಡಿ. 90ರ ದಶಕದಲ್ಲಿ ಹಿಟ್ ಆಗಿದ್ದ ದೀವಾನ ಬಾಕ್ಸ್ ಆಫೀಸಿನಲ್ಲಿಯೂ ದಾಖಲೆ ನಿರ್ಮಿಸಿತ್ತು. ಶಾರುಖ್ ಖಾನ್ ಅವರ ಚೊಚ್ಚಲ ಚಿತ್ರ ಇದು. ಈ ಚಿತ್ರದ ಸಂಗೀತಕ್ಕಾಗಿ ನದೀಮ್- ಶ್ರವಣ್‍ಗೆ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತ್ತು.

[related]

ಪರಭಾಷಾ ಚಿತ್ರಗಳಿಂದ ಕನ್ನಡ ಚಿತ್ರರಂಗದವರು ಸ್ಫೂರ್ತಿ ಪಡೆಯುವಂತೆಯೇ, ಕನ್ನಡದ ಹಾಡುಗಳೂ ಇತರ ಭಾಷೆಯ ಚಿತ್ರಗಳಿಗೆ ಸ್ಫೂರ್ತಿ ನೀಡಿವೆ ಎಂಬುದಕ್ಕೆ ಈ ಹಾಡು ಉದಾಹರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT