ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಂಡತಿಗೆ ಹೆದರಿದ ಎಂಎಲ್‌ಸಿ!

Last Updated 17 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರಿ ನೌಕರರ ಹಾಗೂ ಜನಪ್ರತಿನಿಧಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಣ ಪಡೆಯಬೇಕು ಎಂಬುದನ್ನು ಕಡ್ಡಾಯಗೊಳಿಸುವಂತೆ ಒತ್ತಡ ಹೇರುತ್ತಿರುವ ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ಅವರು, ತಾವು ಪತ್ನಿಗೆ ಹೆದರಿದ ಪ್ರಸಂಗವೊಂದನ್ನು ಈಚೆಗೆ ಸ್ವಾರಸ್ಯಕರವಾಗಿ ಹಂಚಿಕೊಂಡರು.

‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂಬುದು ನನ್ನ ಮಹದಾಸೆ. ನನ್ನ ಅಮ್ಮನನ್ನೂ ಮಕ್ಕಳನ್ನೂ ಒಪ್ಪಿಸಿದೆ. ಆದರೆ, ಹೆಂಡತಿಯನ್ನು ಒಪ್ಪಿಸಲು ಸಾಧ್ಯವಾಗಲಿಲ್ಲ. ಸರ್ಕಾರಿ ಶಾಲೆಯ ಮಾತೆತ್ತಿದರೆ ಡೈವೋರ್ಸ್‌ ಕೊಡುತ್ತೇನೆಂದು ಕಡ್ಡಿಮುರಿದಂತೆ ಹೇಳಿದಳು. ಇದರಿಂದ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ’ ಎಂದಾಗ ಪತ್ರಿಕಾಗೋಷ್ಠಿಯಲ್ಲಿ ನಗೆಯ ಬುಗ್ಗೆ ಉಕ್ಕಿತು.

‘ನಾನು ಜೀವನದಲ್ಲಿ ಫೇಲ್‌ ಆಗಿದ್ದು ಕೂಡ ಇಲ್ಲಿಯೇ. ಚುನಾವಣಾ ರಾಜಕೀಯದಿಂದಲೇ ಹಿಂದೆ ಸರಿಯಬೇಕು ಎನ್ನುವಷ್ಟು ನಿರಾಸೆಯಾಗಿದೆ. ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಕರೆಸಿ ಹೆಂಡತಿಯ ಮನವೊಲಿಸುವ ಆಲೋಚನೆ ಮಾಡಿದೆ. ಆದರೆ, ಪತ್ನಿ ಒಪ್ಪುವುದು ಅನುಮಾನ’ ಎಂದು ಕೌಟುಂಬಿಕ ದುಃಖ ತೋಡಿಕೊಂಡಾಗ ಅವರ ಹಿಂಬಾಲಕರು ಮುಸಿಮುಸಿ ನಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT