ರೋರಿಕ್ ದಂಪತಿಗಳ ಅಪಾರ ಆಭರಣ, ಆಯುಧ ವಶ

ಬೆಂಗಳೂರು, ಮೇ 29– ದೇವಿಕಾರಾಣಿ ಅವರ ಆಪ್ತ ಸಹಾಯಕಿ ಮೇರಿ ಜಾಯ್ಸ್ ಪೂಣಚ್ಚ ಅವರ ಪತಿ ಎಂ.ಎ. ಪೂಣಚ್ಚ ಹಾಗೂ ಆಕೆಯ ಸ್ನೇಹಿತ ನಂದಕುಮಾರ್ ಅವರನ್ನು ಇಂದು ಬಂಧಿಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಅಪಾರವಾದ ಒಡವೆ–ವಸ್ತು, ವಜ್ರ–ವೈಢೂರ್ಯ, ಆಯುಧಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಒಂದು ವಾರದಿಂದ ಸತತವಾಗಿ ಮೇರಿ ಜಾಯ್ಸ್ಳ ಬ್ಯಾಂಕ್ ಲಾಕರುಗಳನ್ನು ಒಡೆದು ಹಲವು ವಿಧದ ಒಡವೆಗಳನ್ನು ವಶಪಡಿಸಿಕೊಂಡಿದ್ದ ನಗರ ಅಪರಾಧ ತನಿಖಾ ದಳದ ಎಸಿಪಿಗಳಾದ ನಿಂಗೇಗೌಡ, ಆಫ್ಜತ್ ಉಲ್ಲಾ ಹಾಗೂ ನಾಗರಾಜಯ್ಯ ಅವರು ನಿನ್ನೆ ನಗರದಲ್ಲಿರುವ ಮೇರಿ ಜಾಯ್ಸ್ ಹಾಗೂ ಆಕೆಯ ಪರಿಚಿತರ ಮನೆಗಳ ಮೇಲೆ ದಾಳಿ ನಡೆಸಿದ್ದರು.

ಶೇಷನ್ ಅಧಿಕಾರ ಮೊಟಕು: ಉದ್ದೇಶ

ಬೆಂಗಳೂರು, ಮೇ 29– ‘ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡನೆಯಾಗಲಿರುವ ಚುನಾವಣೆ ಸುಧಾರಣೆಗೆ ಸಂಬಂಧಿಸಿದ ಉದ್ದೇಶಿತ ವಿಧೇಯಕವು ಮುಖ್ಯ ಚುನಾವಣಾ ಆಯುಕ್ತರ ಅಧಿಕಾರ ಹಾಗೂ ಬಿಜೆಪಿ ಬೆಳವಣಿಗೆಯನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿದೆ’ ಎಂದು ಪಕ್ಷದ ರಾಷ್ಟ್ರೀಯ ನಾಯಕ ಲಾಲ್ಕೃಷ್ಣ ಅಡ್ವಾಣಿ ವ್ಯಾಖ್ಯಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.