ಭಾನುವಾರ, ಜನವರಿ 26, 2020
27 °C

ಬುಧವಾರ, 4–1–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವೃಥಾ ಖರ್ಚು ಉಳಿಸಲು’ ಸಂಪುಟ ತೀರ್ಮಾನ: ಮಾರ್ಚ್ ಅಂತ್ಯದೊಳಗೆ ಪಂಚಾಯಿತಿ ಚುನಾವಣೆ
ಬೆಂಗಳೂರು, ಜ. 3– ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಮಾರ್ಚ್ ಅಂತ್ಯದೊಳಗೆ ಚುನಾವಣೆ ನಡೆಸಲು ರಾಜ್ಯ ಸಚಿವ ಸಂಪುಟ ಇಂದು ನಿರ್ಧರಿಸಿದೆ. ಜನಪ್ರತಿನಿಧಿಗಳಿಗೆ ಹೆಚ್ಚಿನ ಅಧಿಕಾರ ನೀಡಲು ಪಂಚಾಯತ್ ರಾಜ್‌ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ಅಗತ್ಯ ತಿದ್ದುಪಡಿ ತರಲೂ ಅದು ತೀರ್ಮಾನಿಸಿದೆ.

ಪರಿಶಿಷ್ಟ ಜಾತಿ, ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳಿಗೆ ಜನಸಂಖ್ಯೆ ಆಧಾರದ ಮೇಲೆ ಶೇಕಡ 56ರಷ್ಟು ಮೀಸಲು ನೀಡಲೂ ನಿರ್ಧರಿಸಲಾಗಿದೆ. ಸಂಪುಟ ಸಭೆಯ ತೀರ್ಮಾನಗಳನ್ನು ಆ ನಂತರ ವಾರ್ತಾ ಸಚಿವ ಎಂ.ಸಿ. ನಾಣಯ್ಯ ಅವರು ಪತ್ರಕರ್ತರಿಗೆ ವಿವರಿಸಿದರು.

ದಾಖಲೆ ಭಕ್ತರು
ಜಮ್ಮು, ಜ. 3 (ಯುಎನ್‌ಐ)– ಇಲ್ಲಿಗೆ ಸಮೀಪದ ವೈಷ್ಣೋದೇವಿ ದೇವಾಲಯಕ್ಕೆ 1994ರಲ್ಲಿ 37 ಲಕ್ಷ ಭಕ್ತರು ಭೇಟಿ ನೀಡಿದ್ದು ಇದೊಂದು ದಾಖಲೆಯಾಗಿದೆ.

1992ರಲ್ಲಿ ಒಟ್ಟು 35 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದರು. ಜೂನ್ ತಿಂಗಳೊಂದರಲ್ಲಿಯೇ 5.19 ಲಕ್ಷ ಭಕ್ತರು ಬಂದಿದ್ದರೂ ನಂತರ ಹಿಮಪಾತದ ನಡುವೆಯೂ ಭಕ್ತರ ಸಂಖ್ಯೆ ಏರುತ್ತಲೇ ಇತ್ತು.

ಪ್ರತಿಕ್ರಿಯಿಸಿ (+)