ಜಲಗಾಂವ್ ಲೈಂಗಿಕ ಹಗರಣ ಆರೋಪಿಗಳಿಗೆ ಶಿಕ್ಷೆ

ಪುಣೆ, ಏ. 6 (ಪಿಟಿಐ)– ಜಲಗಾಂವ್ ಲೈಂಗಿಕ ಹಗರಣದ ಮುಖ್ಯ ಆರೋಪಿ ಪಂಡಿತ್ ಸಪ್ಕಾಲೆ ಮತ್ತು ಆತನ ಸಹಚರ ಸಂಜಯ್ ಪವಾರ್‌ಗೆ ಇಲ್ಲಿನ ವಿಶೇಷ ನ್ಯಾಯಾಲಯ ಕ್ರಮವಾಗಿ ಹತ್ತು ಮತ್ತು ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ಮುಗ್ಧ ಬಾಲಕಿಯರಿಗೆ ಆಮಿಷ ತೋರಿ ನಂತರ ಬಲವಂತವಾಗಿ ನಗ್ನ ಚಿತ್ರಗಳನ್ನು ತೆಗೆದು ಬೆದರಿಸಿ ಅತ್ಯಾಚಾರ ನಡೆಸಿದ ಆರೋಪ ಇವರ ಮೇಲಿದೆ. ರಾಷ್ಟ್ರದಾದ್ಯಂತ ಕೋಲಾಹಲ ಎಬ್ಬಿಸಿದ್ದ ಈ ಹೇಯ ಘಟನೆ ಸಂಬಂಧ 18 ಮೊಕದ್ದಮೆಗಳನ್ನು ದಾಖಲು ಮಾಡಲಾಗಿದ್ದು, ಈಗ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದೆ.

ಹೇಮಾವತಿ ನಾಲಾ ಕಾಮಗಾರಿ ಸ್ಥಗಿತಕ್ಕೆ ಪ್ರತಿಭಟನೆ: ಬಸ್ ಭಸ್ಮ

ತುಮಕೂರು, ಏ. 6– ಹೇಮಾವತಿ ನಾಲಾ ಕೆಲಸಗಳನ್ನು ಜನತಾದಳ ನೇತೃತ್ವದ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿ ಕಾಂಗೈ ನೀಡಿದ್ದ ಹೆದ್ದಾರಿ ಬಂದ್ ಕರೆಗೆ ಓಗೊಟ್ಟ ಜನ ಇಂದು ರಸ್ತೆಗಿಳಿದು ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ಎರಡು ಸಾರಿಗೆ ಸಂಸ್ಥೆ ಬಸ್‌ಗಳನ್ನು ಸುಟ್ಟರು. ತುಮಕೂರಿನಲ್ಲಿ ನಿಷೇಧಾಜ್ಞೆಯನ್ನೂ ಉಲ್ಲಂಘಿಸಿ ನೂರಾರು ಜನ
ಬಂಧನಕ್ಕೊಳಗಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.