ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಸೋಮವಾರ, 1–5–1995

Last Updated 30 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಬಡ ರಾಷ್ಟ್ರಗಳಿಗೆ ಪ್ರತಿಕೂಲ ವಾಣಿಜ್ಯ– ಸಾರ್ಕ್‌ ಆತಂಕ
ನವದೆಹಲಿ, ಏ. 30 (ಪಿಟಿಐ, ಯುಎನ್‌ಐ)– ಅಭಿವೃದ್ಧಿಪರ ರಾಷ್ಟ್ರಗಳ ವಾಣಿಜ್ಯಸ್ಥಿತಿ ಕಷ್ಟಕರವಾಗಿಯೇ ಮುಂದುವರಿಯುತ್ತಿರುವುದಕ್ಕೆ ದಕ್ಷಿಣ ಏಷ್ಯಾ ಸಹಕಾರ ಸಂಘಟನೆಯ (ಸಾರ್ಕ್‌) ವಿದೇಶಾಂಗ ಸಚಿವರು ಇಂದು ಇಲ್ಲಿ ಕಳವಳ ವ್ಯಕ್ತಪಡಿಸಿದರು. ‘ಮಹತ್ವಾಕಾಂಕ್ಷೆ’ಯ ಪ್ರಾದೇಶಿಕ ಸಹಕಾರ ಹೊಂದಬೇಕೆಂದು ಅವರು ಏಳು ಸಾರ್ಕ್‌ ರಾಷ್ಟ್ರಗಳಿಗೆ ಕರೆ ಕೊಟ್ಟರು.

ಎಂಟನೆಯ ಸಾರ್ಕ್‌ ವಿದೇಶಾಂಗ ಸಚಿವರ ಶೃಂಗಸಭೆಗೆ ಪೂರ್ವಭಾವಿಯಾದ ಸಾರ್ಕ್‌ ವಿದೇಶಾಂಗ ಸಚಿವರ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಇಂದು ಮಾತನಾಡಿದ ಭಾರತದ ವಿದೇಶಾಂಗ ಸಚಿವ ಪ್ರಣವ್‌ ಮುಖರ್ಜಿ ಅವರು, ಹೊಸ ಶತಮಾನದ ಉದಯದ ಸಂದರ್ಭದಲ್ಲಿ ದಕ್ಷಿಣ ಏಷ್ಯಾ ಪ್ರದೇಶ ಹಿಂದುಳಿಯಲಾಗದು ಎಂದರು.

‘ಬೌದ್ಧಿಕ ಆಸ್ತಿ’ ರಕ್ಷಣೆ‌: ಅಮೆರಿಕದ ನಿಗಾ ಪಟ್ಟಿಗೆ ಭಾರತ
ವಾಷಿಂಗ್ಟನ್‌, ಏ. 30 (ಯುಎನ್‌ಐ)– ಬೌದ್ಧಿಕ ಆಸ್ತಿ ರಕ್ಷಣೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅಮೆರಿಕವು ಭಾರತವನ್ನು ‘ನಿಗಾ ಇಡಬೇಕಾದ ಆದ್ಯತೆ ಪಟ್ಟಿ’ಯಲ್ಲಿ ಸೇರಿಸಿದೆ. ಆದರೆ ‘ವಿಶೇಷ ವ್ಯಾಪಾರ ಶಾಸನ’ದ 301ನೇ ಕಲಮಿನ ಅನ್ವಯ ಸದ್ಯಕ್ಕೆ ಯಾವುದೇ ದಂಡನೆಯ ಕ್ರಮವನ್ನು ಕೈಗೊಳ್ಳದೇ ಇರಲು ತೀರ್ಮಾನಿಸಿದೆ.

ಈ ಪಟ್ಟಿಯಲ್ಲಿ ಭಾರತವಲ್ಲದೆ ಇತರ 7 ದೇಶಗಳಿದ್ದು ಪಟ್ಟಿಯನ್ನು ನಿನ್ನೆ ರಾತ್ರಿ ಬಹಿರಂಗಗೊಳಿಸಲಾಯಿತು. ಅಮೆರಿಕದ ಪೇಟೆಂಟ್‌ಗಳ ರಕ್ಷಣೆಗೆ ಭಾರತ ವಿಫಲವಾಗಿದೆ ಎಂಬುದೇ ಈ ದೇಶದ ಮೇಲಿನ ಮುಖ್ಯ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT