ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಮಂಗಳವಾರ, 2–5–1995

Last Updated 1 ಮೇ 2020, 19:45 IST
ಅಕ್ಷರ ಗಾತ್ರ

ಕ್ಯಾಪಿಟೇಷನ್‌ ವಿದ್ಯಾಸಂಸ್ಥೆಗೆ ಸವಾಲು
ಬೆಂಗಳೂರು, ಮೇ 1– ಕ್ಯಾಪಿಟೇಷನ್‌ ಹಣದಿಂದ ವಿದ್ಯಾಸಂಸ್ಥೆ, ಹಾಸ್ಟೆಲ್‌ಗಳನ್ನು ನಡೆಸುತ್ತಿರುವವರಿಗೆ ಸಮಾಜ ಸೇವೆಯ ಹಂಬಲವಿದ್ದರೆ ಬಾಲಕಾರ್ಮಿಕರಿಗಾಗಿ ಶಾಲೆಗಳನ್ನು ತೆರೆಯಲಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಸವಾಲೆಸೆದರು.

ಮಠಾಧಿಪತಿಗಳನ್ನು ಒಳಗೊಂಡಂತೆ ಬಹಳಷ್ಟು ಕ್ಯಾಪಿಟೇಷನ್‌ ಕಾಲೇಜಿನ ಆಡಳಿತ ವರ್ಗದವರು ಸಮಾಜಸೇವೆ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ಅವರು ತಮ್ಮ ಕೋಮಿನವರ ಉದ್ಧಾರಕ್ಕಾಗಿ ಮಾತ್ರ ಮಾಡುತ್ತಾರೆ. ಅವರು ಸಮಾಜಸೇವೆ ಮಾಡುತ್ತಿರುವುದೇ ನಿಜವಾದಲ್ಲಿ ಬಾಲಕಾರ್ಮಿಕರ ಸಮಸ್ಯೆಯ ಪರಿಹಾರಕ್ಕೆ ಸಾಧ್ಯವಾದದ್ದನ್ನು ಮಾಡಲಿ ಎಂದು ಅವರು ಹೇಳಿದರು.

ಮುಕ್ತ ವಾಣಿಜ್ಯ ವ್ಯವಸ್ಥೆಯಾಗಿ ದಕ್ಷಿಣ ಏಷ್ಯಾ– ತಾತ್ವಿಕ ಒಪ್ಪಿಗೆ
ನವದೆಹಲಿ, ಮೇ 1 (ಪಿಟಿಐ)– ದಕ್ಷಿಣ ಏಷ್ಯಾದಲ್ಲಿ ಆರ್ಥಿಕ ಬಾಂಧವ್ಯ ಬಲಪಡಿಸುವ ಮಹತ್ವದ ಮೈಲುಗಲ್ಲಾಗಿ ಮುಕ್ಯ
ವಾಣಿಜ್ಯ ಪ್ರದೇಶ (ಸಫ್ಟ) ಎಂಬ ಹೊಸ ವ್ಯವಸ್ಥೆ ನಿರ್ಮಿಸಲು, ಪ್ರದೇಶದ ಆರ್ಥಿಕ ಹಾಗೂ ತಾಂತ್ರಿಕ ಅಭಿವೃದ್ಧಿಗಾಗಿ ದಕ್ಷಿಣ ಏಷ್ಯಾ ಅಭಿವೃದ್ಧಿ ನಿಧಿಯೊಂದನ್ನು ಸ್ಥಾಪಿಸಲು ಭಾರತ ಹಾಗೂ ಅದರ 6 ನೆರೆಹೊರೆಯ ದೇಶಗಳು ಇಂದು ತಾತ್ವಿಕವಾಗಿ ನಿರ್ಧರಿಸಿದವು. ಇನ್ನೂ ಹೆಚ್ಚು ಜನರಿಗೆ ವೀಸಾ ಇಲ್ಲದೆ ಪ್ರಯಾಣ ಬೆಳೆಸುವುದಕ್ಕೆ ಅವಕಾಶ ನೀಡಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT