ಭಾನುವಾರ, ಜೂನ್ 7, 2020
28 °C

25 ವರ್ಷಗಳ ಹಿಂದೆ | ಗುರುವಾರ, 4 ಮೇ 1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಟಿಲ ಸಂದರ್ಭದಲ್ಲಿ ‘ಜನಮುಖಿ’ ಕಾವ್ಯ: ಕಂಬಾರ

ಬೆಂಗಳೂರು, ಮೇ 3– ಕಾವ್ಯ ಪ್ರಯೋಜನದ ಬಗೆಗಿನ ಸಮಸ್ಯೆಗಳು ಜಟಿಲವಾಗತೊಡಗಿರುವ ಈ ಸಂದರ್ಭದಲ್ಲಿ ಕಾವ್ಯ ‘ಜನಮುಖಿ’ಯಾಗದೆ ಬೇರೆ ದಾರಿಯಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹಾಗೂ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಇಂದು ಇಲ್ಲಿ ಅಭಿಪ್ರಾಯಪಟ್ಟರು.

ಕಾವ್ಯ ಪ್ರಯೋಜನವಾಗಬೇಕಾದದ್ದು ಜನರಿಗೆ. ಕವಿ ತನ್ನ ಆತ್ಮಚರಿತ್ರೆಯನ್ನೇ ಮೂಡಿಸಲಿ, ಲೋಕದ ಚರಿತ್ರೆಯನ್ನೇ ಕುರಿತು ಬರೆಯಲಿ, ಜನರಿಗೆ ಅದರಲ್ಲಿ ಆಸಕ್ತಿ ಮೂಡುವುದು ಅಗತ್ಯವಾಗಿದೆ. ಕವಿಯ ಪ್ರತಿಭೆಗೆ ಇದೊಂದು ದೊಡ್ಡ ಸವಾಲಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ 80 ವರ್ಷ ತುಂಬುತ್ತಿರುವುದರ ಸ್ಮರಣಾರ್ಥ ಹಮ್ಮಿಕೊಂಡಿರುವ ‘ಇಪ್ಪತ್ತನೆಯ ಶತಮಾನದ ಕನ್ನಡ ಕಾವ್ಯ: ಒಂದು ಸಮೀಕ್ಷೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ನಿಶ್ಶಸ್ತ್ರೀಕರಣ: ದೆಹಲಿ ಘೋಷಣೆ ಕರೆ ಸಂಭವ

ನವದೆಹಲಿ, ಮೇ 3 (ಪಿಟಿಐ, ಯುಎನ್‌ಐ)– ಎಂಟನೇ ಸಾರ್ಕ್‌ ಶೃಂಗಮೇಳ ನಾಳೆ ಮುಕ್ತಾಯಗೊಳ್ಳಲಿದ್ದು,
ಅಂತರರಾಷ್ಟ್ರೀಯ ಒಡಂಬಡಿಕೆಯ ಅಡಿಯಲ್ಲಿ ಸಂಪೂರ್ಣ ನಿಶ್ಶಸ್ತ್ರೀಕರಣ ಏರ್ಪಡಬೇಕು ಎಂಬ ಘೋಷಣೆಯನ್ನು ಅದು ಅಂಗೀಕರಿಸಲಿದೆ. ವಾಣಿಜ್ಯೇತರ ವಿಷಯಗಳಿಗೆ ಸಂಬಂಧಿಸಿ ಹೊಸ ಆರ್ಥಿಕ ಷರತ್ತುಗಳನ್ನು ಹೇರಬಾರದು ಎಂದೂ ಅದು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗೆ ಕರೆ ನೀಡಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.