ಮಂಗಳವಾರ, ಆಗಸ್ಟ್ 3, 2021
28 °C

25 ವರ್ಷಗಳ ಹಿಂದೆ | ಬುಧವಾರ, ಜುಲೈ 12–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಶ್ಮೀರದಲ್ಲಿ ನಾರ್ವೆ ಪ್ರವಾಸಿ ಅಪಹರಣ

ಶ್ರೀನಗರ, ಜುಲೈ 11 (ಪಿಟಿಐ, ಯುಎನ್‌ಐ)– ಕಾಶ್ಮೀರ ಕಣಿವೆಯಲ್ಲಿ ಮತ್ತೊಬ್ಬ ವಿದೇಶಿ ಪ್ರವಾಸಿಯನ್ನು ಉಗ್ರಗಾಮಿಗಳು ಇಂದು ಅಪಹರಿಸಿದ್ದಾರೆ. ಇದರಿಂದ ಕಳೆದ ಒಂದು ವಾರದಿಂದ ಆರು ಮಂದಿ ವಿದೇಶಿಯರನ್ನು ಉಗ್ರಗಾಮಿಗಳು ಅಪಹರಿಸಿದಂತೆ ಆಗಿದೆ. ಇವರಲ್ಲಿ ಒಬ್ಬರು ತಪ್ಪಿಸಿಕೊಂಡು ಬಂದಿದ್ದಾರೆ.

ಕಳೆದ ಶನಿವಾರ ಜರ್ಮನಿಯ ಡರ್ಕ್‌ ಹಸರ್ಟ್‌ ಅವರು ಅಪಹರಣಕ್ಕೆ ಒಳಗಾದ ಸ್ಥಳದಿಂದಲೇ (ಪಹಲ್ಗಾಮ್‌– ಅಮರನಾಥ್‌ ಮಾರ್ಗ) ಇಂದು ನಾರ್ವೆಯ ಲೋರೇಕ್ರಿಫ್ಟಾಫೆನ್‌ ಅವರನ್ನು ಶಸ್ತ್ರಸಜ್ಜಿತ ಉಗ್ರಗಾಮಿಗಳು ಅಪಹರಿಸಿದ್ದಾರೆಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. 

ಬಸ್ ಪಾಸ್: ಹೊಸ ಆದೇಶ

ಬೆಂಗಳೂರು, ಜುಲೈ 11– ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುವ ರಿಯಾಯಿತಿ ಬಸ್‌ ಪಾಸ್‌ ದರವನ್ನು ಸರ್ಕಾರ ಆದೇಶ ಹೊರಡಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು