ಸೋಮವಾರ, ಜೂನ್ 21, 2021
21 °C

25 ವರ್ಷಗಳ ಹಿಂದೆ | ಶುಕ್ರವಾರ, 18–8–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಣ್ಣಾ ಡಿಎಂಕೆ ಸದಸ್ಯರ ವರ್ತನೆಗೆ ಸ್ಪೀಕರ್‌ ತರಾಟೆ
ನವದೆಹಲಿ, ಆ. 17–
ಕಾವೇರಿ ನ್ಯಾಯಮಂಡಲಿಯ ಮಧ್ಯಂತರ ತೀರ್ಪನ್ನು ಜಾರಿಗೊಳಿಸುವ ಸಂಬಂಧ ಸರ್ಕಾರ ಖಚಿತ ಹೇಳಿಕೆ ನೀಡಬೇಕೆಂದು ಒತ್ತಾಯಪಡಿಸಿದ ಎಐಎಡಿಎಂಕೆ ಸದಸ್ಯರು ಲೋಕಸಭೆಯಲ್ಲಿ ಇಂದು ಸಭಾಧ್ಯಕ್ಷರ ಪೀಠದ ಮುಂದೆ ಗದ್ದಲ ಎಬ್ಬಿಸಿದರು. ತಮಿಳುನಾಡಿನ ಸದಸ್ಯರ ಈ ವರ್ತನೆಯನ್ನು ಸಭಾಧ್ಯಕ್ಷ ಶಿವರಾಜ ಪಾಟೀಲ್‌ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ಸಿನ ಎರಾ ಅನ್ಬರಸು ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಈ ಘಟನೆ ನಡೆಯಿತು. ಕರ್ನಾಟಕ ಸರ್ಕಾರವು ನ್ಯಾಯಮಂಡಲಿಯ ಮಧ್ಯಂತರ ವರದಿಯನ್ನು ಜಾರಿಗೆ ತರದೆ ಇರುವುದರಿಂದ ತಂಜಾವೂರು ಜಿಲ್ಲೆಯಲ್ಲಿ ಕುರುವೈ ಬೆಳೆ ಒಣಗುತ್ತಿದ್ದು ರೈತರು ಕಷ್ಟದಲ್ಲಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರವು ಈ ಕೂಡಲೇ ಮಧ್ಯೆ ಪ್ರವೇಶಿಸಿ ಸಂವಿಧಾನದ ಕಾಯ್ದೆ 266ರ ಪ್ರಕಾರ ನ್ಯಾಯಮಂಡಲಿಯ ತೀರ್ಪನ್ನು ಜಾರಿಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.

ರಾಜಕೀಯ: ರಾಹುಲ್‌ ಗಾಂಧಿಗೆ ಕಾಂಗೈ ಸ್ವಾಗತ
ನವದೆಹಲಿ, ಆ. 17 (ಯುಎನ್‌ಐ)–
ರಾಹುಲ್‌ ಗಾಂಧಿ ಅವರು ರಾಜಕೀಯ ಸೇರಿದರೆ ಕಾಂಗೈ ಪಕ್ಷವು ಸ್ವಾಗತಿಸುತ್ತದೆ ಎಂದು ಪಕ್ಷದ ವಕ್ತಾರ ವಿ.ಎನ್‌.ಗಾಡ್ಗೀಳ್‌ ಹೇಳಿದ್ದಾರೆ.

ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅವರಿಗೆ ಬಿಟ್ಟದ್ದು, ರಾಹುಲ್‌ ಗಾಂಧಿ ಅವರು ರಾಜಕೀಯ ಸೇರಿದರೆ ಪಕ್ಷದ ಯುವ ಪೀಳಿಗೆಯ ವರ್ಚಸ್ಸು ವೃದ್ಧಿಯಾಗುತ್ತದೆ ಎಂದು ಗಾಡ್ಗೀಳ್‌ ಪಕ್ಷದ ನಿಲುವು ಪ್ರಕಟಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು