ಬುಧವಾರ, ನವೆಂಬರ್ 20, 2019
26 °C
ಮಂಗಳವಾರ

ಚೌಡರೆಡ್ಡಿ ರಾಜೀನಾಮೆಗೆ ದಳ ಒತ್ತಾಯ: ಸಭಾತ್ಯಾಗ

Published:
Updated:

ಚೌಡರೆಡ್ಡಿ ರಾಜೀನಾಮೆಗೆ ದಳ ಒತ್ತಾಯ: ಸಭಾತ್ಯಾಗ

ಬೆಂಗಳೂರು, ಸೆ. 5– ಕೊಲೆ ಮೊಕದ್ದಮೆ ಒಂದರಲ್ಲಿ ಆರೋಪಿಗಳ ಜತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಗೃಹ ಸಚಿವ ಚೌಡರೆಡ್ಡಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಅವರನ್ನು ಮುಖ್ಯಮಂತ್ರಿ ಅವರು ವಜಾ ಮಾಡಬೇಕು ಎಂದು ಆಗ್ರಹಪಡಿಸಿದ ಜನತಾದಳದ ಸದಸ್ಯರು ವಿಧಾನ ಸಭೆಯಲ್ಲಿ ಇಂದು ಸಭಾತ್ಯಾಗ ಮಾಡಿದರು.

ಮುಖ್ಯಮಂತ್ರಿ ಅವರು ಗೃಹ ಸಚಿವರನ್ನು ರಕ್ಷಿಸುತ್ತಿದ್ದಾರೆ. ನೈತಿಕ ಮೌಲ್ಯ, ನೀತಿ–ನಿಯಮಗಳ ಬಗ್ಗೆ ಸಾರ್ವಜನಿಕ
ವಾಗಿ ಮಾತನಾಡುವ ಮುಖ್ಯಮಂತ್ರಿ ಅವರದು ಬರೇ ಮಾತು ಅಷ್ಟೇ ಎಂದು ಆರೋಪಿಸಿ ವಿರೋಧ ಪಕ್ಷದ ಮುಖಂಡ ಆರ್.ವಿ. ದೇಶಪಾಂಡೆ ಅವರು ತಮ್ಮ ಸದಸ್ಯರೊಂದಿಗೆ ಸದನದಿಂದ ಹೊರನಡೆದರು.

ಶರಣಾಗತಿ ಆಮಿಷ ಒಡ್ಡುತ್ತಲೇ ಇರುವ ವೀರಪ್ಪನ್

ಮೈಸೂರು, ಸೆ. 5– ಜೀವರಕ್ಷಣೆಯ ಭರವಸೆ ನೀಡಿದರೆ ತಾನು ಸಹಚರರ ಜತೆ ಶರಣಾಗುವುದಾಗಿ ಧ್ವನಿಮುದ್ರಿತ ಸಂದೇಶವನ್ನು ವೀರಪ್ಪನ್ ಕಳುಹಿಸಿದ್ದ ಎಂದು ಕರ್ನಾಟಕ ವಿಶೇಷ ಕಾರ್ಯಾಚರಣೆ ಪಡೆಯ ಮುಖ್ಯಸ್ಥ ಶಂಕರ ಬಿದರಿ ಅವರು ಖಚಿತಪಡಿಸಿದ್ದಾರೆ.

‘ವೀರಪ್ಪನ್‌ ಶರಣಾಗತಿಗಾಗಿ ಆ.2ರಿಂದ 10ರವರೆಗೆ ಕಾದ ವಿಶೇಷ ಕಾರ್ಯಾಚರಣೆ ಪಡೆಯು ಆತನಿಗಾಗಿ ಹುಡುಕಾಟವನ್ನು ಸ್ಥಗಿತಗೊಳಿಸಿತ್ತು, ಕಾರ್ಯಾಚರಣೆ ಪಡೆ ನೀಡಿದ ಗಡುವಿನಲ್ಲಿ ಶರಣಾಗಲು ಹಿಂದೆ ಸರಿದ ಕಾರಣ ಆತನ ಬೇಟೆಗೆ ಪ್ರಯತ್ನ ಮುಂದುವರೆದಿದೆ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)