ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ ; ಶುಕ್ರವಾರ, 9–12–1994

Last Updated 8 ಡಿಸೆಂಬರ್ 2019, 18:11 IST
ಅಕ್ಷರ ಗಾತ್ರ

ಐದು ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

ನವದೆಹಲಿ, ಡಿ. 8 (ಪಿಟಿಐ, ಯುಎನ್‌ಐ)– ಮಹಾರಾಷ್ಟ್ರ, ಗುಜರಾತ್, ಬಿಹಾರ, ಒರಿಸ್ಸಾ ಮತ್ತು ಅರುಣಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ದಿನಾಂಕಗಳನ್ನು ಇಂದು ಪ್ರಕಟಿಸಲಾಗಿದೆ. ಮುಂದಿನ ಫೆಬ್ರುವರಿ ನಾಲ್ಕರಿಂದ 28ರವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯುವುದು ಎಂದು ಚುನಾವಣೆ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಜೇಲ್‌ ಸಿಂಗ್ ಆರೋಗ್ಯ: ಯಥಾಸ್ಥಿತಿ ಮುಂದುವರಿಕೆ

ಚಂಡೀಗಡ, ಡಿ. 8 (ಪಿಟಿಐ)– ಇಲ್ಲಿನ ಪಿಜಿಐ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್‌ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಒಂದೇ ರೀತಿಯಲ್ಲಿ ಮುಂದುವರಿದಿದೆ.

ಏತನ್ಮಧ್ಯೆ ಸಂಜೆ ಇಲ್ಲಿಗೆ ಧಾವಿಸಿ ಬಂದ ಗೃಹ ಸಚಿವ ಎಸ್.ಬಿ. ಚವಾಣ್ ಅವರು ಸಿಂಗ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಆಸ್ಪತ್ರೆಯ ಮುಖ್ಯಸ್ಥ ಡಾ. ವಿ.ಕೆ. ಕಾಕ್ ಅವರು ಸಚಿವರಿಗೆ ಮಾಜಿ ರಾಷ್ಟ್ರಪತಿ ಅವರ ಆರೋಗ್ಯ ಸ್ಥಿತಿ ಬಗ್ಗೆ ವಿವರಿಸಿದರು.

ಕೆ.ಕೆ. ಹೆಬ್ಬಾರ್‌ಗೆ ವೆಂಕಟಪ್ಪ ಪ್ರಶಸ್ತಿ

‌ಬೆಂಗಳೂರು, ಡಿ. 8– ಪ್ರಖ್ಯಾತ ಚಿತ್ರ ಕಲಾವಿದ ಕೆ.ಕೆ. ಹೆಬ್ಬಾರ್ ಅವರಿಗೆ 1994ನೇ ಸಾಲಿನ ‘ವರ್ಣಶಿಲ್ಪಿ ವೆಂಕಟ‍ಪ್ಪ’ ಪ್ರಶಸ್ತಿ ದೊರೆತಿದೆ. ಹೆಬ್ಬಾರ್ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಂಸಾ ಫಲಕ ನೀಡಲಾಗುವುದು.

ಸಾಹಿತ್ಯ, ಸಂಗೀತ ಮತ್ತು ರಂಗಭೂಮಿ ಕಲಾವಿದರಿಗೆ ವಿಶೇಷ ಪ್ರಶಸ್ತಿಗಳನ್ನು ಕೊಡುತ್ತಿರುವ ರಾಜ್ಯ ಸರ್ಕಾರ, ಚಿತ್ರಕಲೆಗೆ ಗಮನಾರ್ಹ ಕೊಡುಗೆ ನೀಡಿದ ರಾಜ್ಯದ ಕಲಾವಿದರಿಗೆ ‘ವರ್ಣಶಿಲ್ಪಿ ವೆಂಕಟಪ್ಪ’ ಪ್ರಶಸ್ತಿ ನೀಡಲು ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT