ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ| ಭಾನುವಾರ, 29–1–1995

ಭಾನುವಾರ
Last Updated 28 ಜನವರಿ 2020, 15:19 IST
ಅಕ್ಷರ ಗಾತ್ರ

ಬದನವಾಳು: ಯುವಕನ ಕಗ್ಗೊಲೆ

ಮೈಸೂರು, ಜ. 28– ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ಬಳಿ ನಿನ್ನೆ ರಾತ್ರಿ ಗುಂಪೊಂದು ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು ಇದರಿಂದ ಇಡೀ ತಾಲ್ಲೂಕಿನಲ್ಲಿ ಈಗ ಉದ್ರಿಕ್ತ ಸ್ಥಿತಿ ಉಂಟಾಗಿದೆ.

ಎರಡು ವರ್ಷಗಳ ಹಿಂದೆ ಬದನವಾಳು ಗ್ರಾಮದಲ್ಲಿ ನಡೆದ ಉಪಾಧ್ಯಾಯ ನಾರಾಯಣಸ್ವಾಮಿ ಹಾಗೂ ಇತರ ಇಬ್ಬರ ಕೊಲೆ ಪ್ರಕರಣದ ಆರೋಪಿಗಳಲ್ಲಿ ಈ ಯುವಕನೂ ಒಬ್ಬನಾಗಿದ್ದ ಎನ್ನಲಾಗಿದೆ.

ಬದನವಾಳಿನ ಮಹೇಶ (25) ಎಂಬ ಹೆಸರಿನ ಈ ಯುವಕ ತನ್ನ ಸ್ನೇಹಿತ ನಾಗನೊಡನೆ ಶುಕ್ರವಾರ ರಾತ್ರಿ ಬಸವಟ್ಟಿ ಬಳಿ ನಡೆದು ಬರುತ್ತಿದ್ದಾಗ ಮಾರಕಾಸ್ತ್ರಗಳಿಂದ ಸಜ್ಜಾಗಿದ್ದ ಎಂಟು ಮಂದಿ ಯುವಕರ ಗುಂಪು ಹಲ್ಲೆ ನಡೆಸಿತು. ಮಹೇಶ ಸ್ಥಳದಲ್ಲಿಯೇ ಸತ್ತ. ಗಾಯಗೊಂಡಿದ್ದ ನಾಗ ತಪ್ಪಿಸಿಕೊಂಡು ಬಂದು ನಂಜನಗೂಡಿನಲ್ಲಿ ಪೊಲೀಸರಿಗೆ ವಿಷಯ ತಿಳಿಸಿದ. ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀವನ್‌ಕುಮಾರ್ ಗಾಂವಕರ್ ತಕ್ಷಣವೇ ಹೆಚ್ಚಿನ ಪೊಲೀಸ್ ಮತ್ತು ಮೀಸಲು ಪಡೆಯೊಂದಿಗೆ ಸ್ಥಳಕ್ಕೆ ಧಾವಿಸಿ ಬದನವಾಳು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಾವಲು ಇರಿಸಿದರು.

ರಾಮಕೃಷ್ಣ ನಿಂದನೆ ಪ್ರಕರಣ: ಸಿಓಡಿ ತನಿಖೆಗೆ ಶಿಫಾರಸು

ಕಲ್ಬುರ್ಗಿ, ಜ. 28– ಕಾಂಗೈನ ಹಿರಿಯ ಮುಖಂಡ, ಮಾಜಿ ಸಚಿವ ಜಿ. ರಾಮಕೃಷ್ಣ ಅವರನ್ನು ಜಾತಿಯ ಹೆಸರನ್ನೆತ್ತಿ
ಕೊಂಡು ಆಳಂದ ಕ್ಷೇತ್ರದ ಶಾಸಕ ಸುಭಾಷ್‌ ಗುತ್ತೇದಾರ್ ಅವರು ನಿಂದಿಸಿದರು ಎಂಬ ಘಟನೆಯ ಬಗ್ಗೆ ಸಿ.ಓ.ಡಿ. ತನಿಖೆ ನಡೆಸಬೇಕೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮದನಗೋಪಾಲ್ ಅವರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT