ಶನಿವಾರ, ಜನವರಿ 25, 2020
28 °C

ಶನಿವಾರ, 3–12–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಯಸ್ಕರ ಶಿಕ್ಷಣ ಸಚಿವ ಶಿವಮೂರ್ತಿ ರಾಜೀನಾಮೆ

ಬೆಂಗಳೂರು, ಡಿ. 2–  ವಯಸ್ಕರ ಶಿಕ್ಷಣ ರಾಜ್ಯ ಸಚಿವ ಕೆ. ಶಿವಮೂರ್ತಿ ಅವರು ತಮ್ಮ ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ರಾಜಕೀಯ ಕುತಂತ್ರಕ್ಕೆ ತಮ್ಮನ್ನು ಬಲಿಪಶುವನ್ನಾಗಿಮಾಡಿರುವುದರಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತಮಗೆ ಮತ್ತೆ ಸ್ಪರ್ಧಿಸಲು ಪಕ್ಷದ ಟಿಕೆಟ್ ನಿರಾಕರಿಸಿದುದೇ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾಗಿದೆ. ಟಿಕೆಟ್ ಕೈತಪ್ಪಿದ ಕೂಡಲೇ ಈ ನಿರ್ಧಾರ ತೆಗೆದುಕೊಂಡಿದ್ದರೂ ಚುನಾವಣೆಯಲ್ಲಿ ಪಕ್ಷದ ಹಿತಕ್ಕೆ ಧಕ್ಕೆಯಾಗಬಾರದೆಂದು ರಾಜೀನಾಮೆ ಸಲ್ಲಿಸಿರಲಿಲ್ಲ ಎಂದು ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಶೇಷನ್ ಮೇಲೆ ಆಕ್ರೋಶಕ್ಕೆ ಹೋಟೆಲ್ ಗುರಿ

ಮದ್ರಾಸ್, ಡಿ. 2 (ಪಿಟಿಐ)– ಮುಖ್ಯ ಚುನಾವಣೆ ಕಮೀಷನರ್ ಟಿ.ಎನ್. ಶೇಷನ್ ಅವರು ತಮ್ಮ ಎರಡು ದಿನಗಳ ತಮಿಳುನಾಡು ಪ್ರವಾಸದ ವೇಳೆ ಉಳಿದುಕೊಂಡಿದ್ದ ಪಂಚತಾರಾ ಹೋಟೆಲೊಂದರ ಮೇಲೆ ಶಸ್ತ್ರಸಜ್ಜಿತ ಗುಂಪೊಂದು ಕಳೆದ ರಾತ್ರಿ ದಾಂದಲೆ ನಡೆಸಿದೆ.

ಪ್ರತಿಕ್ರಿಯಿಸಿ (+)