ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 2–12–1994

Last Updated 1 ಡಿಸೆಂಬರ್ 2019, 18:32 IST
ಅಕ್ಷರ ಗಾತ್ರ

ಅಂತಿಮ ಹಂತದ ಮತದಾನ ಶೇ 65; ಬಹುತೇಕ ಶಾಂತ

ಬೆಂಗಳೂರು, ಡಿ. 1– ಕೆಲವು ಹಿಂಸಾತ್ಮಕ ಘಟನೆಗಳೊಂದಿಗೆ ರಾಜ್ಯದ ಹತ್ತು ಜಿಲ್ಲೆಗಳ 109 ಕ್ಷೇತ್ರಗಳಲ್ಲಿ ಎರಡನೇ ಹಾಗೂ ಅಂತಿಮ ಸುತ್ತಿನ ವಿಧಾನಸಭಾ ಚುನಾವಣೆ ಕೊನೆಗೊಂಡು ಶೇಕಡ 65ರಷ್ಟು ಮತದಾನ ನಡೆದಿದೆ. ಕಲ್ಬುರ್ಗಿ ಜಿಲ್ಲೆ ಸೇಡಂನಲ್ಲಿ ವ್ಯಕ್ತಿ
ಯೊಬ್ಬರನ್ನು ದುಷ್ಕರ್ಮಿಗಳ ಗುಂಪೊಂದು ಅಮಾನುಷವಾಗಿ ಕಲ್ಲುಗಳಿಂದ ಜಜ್ಜಿ ಕೊಂದಿದೆ. ಔರಾದ್ ಅಭ್ಯರ್ಥಿಯೊಬ್ಬರ ಪುತ್ರ ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಮತಗಟ್ಟೆ ಏಜೆಂಟ್ ಒಬ್ಬರ ಸಾವು, ಲಘು ಲಾಠಿ ಪ್ರಹಾರ ಹಾಗೂ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಉಳಿದೆಡೆ ಶಾಂತಿಯುತ ಮತದಾನವಾಗಿದೆ.

ಮೇಧಾ ಪಾಟ್ಕರ್‌ಗೆ ಕೆ.ಎಸ್. ಹೆಗಡೆ ಪ್ರತಿಷ್ಠಾನದ ಪ್ರಶಸ್ತಿ

ಮಂಗಳೂರು, ಡಿ. 1– ಹೆಸರಾಂತ ಪರಿಸರವಾದಿ ಹಾಗೂ ನರ್ಮದಾ ಬಚಾವೋ ಅಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರಿಗೆ ನ್ಯಾಯಮೂರ್ತಿ ದಿವಂಗತ ಕೆ.ಎಸ್. ಹೆಗಡೆ ಪ್ರತಿಷ್ಠಾನದ 1994ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ವಿಚಾರವನ್ನು ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಎನ್‌.ವಿನಯ್ ಹೆಗಡೆ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT