ಬುಧವಾರ, ಜುಲೈ 28, 2021
28 °C

ಮಂಗಳವಾರ, 20–6–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಶೀಘ್ರ ನೈರುತ್ಯ ರೈಲ್ವೆ ವಲಯ

ಬೆಂಗಳೂರು, ಜೂನ್‌ 19– ಕರ್ನಾಟಕವನ್ನು ದಕ್ಷಿಣ ರೈಲ್ವೆ ವಲಯದಿಂದ ಬೇರ್ಪಡಿಸಿ ರಾಜ್ಯಕ್ಕೇ ಪ್ರತ್ಯೇಕವಾದ ದಕ್ಷಿಣ– ಪಶ್ಚಿಮ ರೈಲ್ವೆ ವಲಯ ರಚಿಸಲು ತೀರ್ಮಾನಿಸಿದ್ದು, ಹೊಸ ರೈಲ್ವೆ ವಲಯ ಅತಿ ಶೀಘ್ರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ ಎಂದು ರೈಲ್ವೆ ಸಚಿವ ಸಿ.ಕೆ.ಜಾಫರ್‌ ಷರೀಫ್‌ ಅವರು ಇಂದು
ಇಲ್ಲಿ ಪ್ರಕಟಿಸಿದರು.

ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯ ರಚಿಸಬೇಕೆಂಬ ಬೇಡಿಕೆಯನ್ನು ತಾವು ಒಪ್ಪಿದ್ದು, ಉದ್ದೇಶಿತ ದಕ್ಷಿಣ– ಪಶ್ಚಿಮ ರೈಲ್ವೆ ವಲಯ ರಚನೆಗೆ ಬೇಕಾದ ಅಗತ್ಯ ಹಣಕಾಸಿನ ವ್ಯವಸ್ಥೆಯನ್ನು ಪ್ರಸ್ತುತ ಸಾಲಿನ ರೈಲ್ವೆ ಮುಂಗಡ ಪತ್ರದಲ್ಲೇ ಒದಗಿಸಿರುವುದಾಗಿ ಅವರು ಹೇಳಿದರು.

ಹಿಂದುಳಿದ ವರ್ಗದವರಿಗೆ ಶಾಶ್ವತ ಆಯೋಗ

ಬೆಂಗಳೂರು, ಜೂನ್‌ 19– ಹಿಂದುಳಿದ ವರ್ಗದವರ ಶಾಶ್ವತ ಆಯೋಗ ಸ್ಥಾಪಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಆಯೋಗಕ್ಕೆ ಸೂಕ್ತ ಆಯುಕ್ತರನ್ನು ನೇಮಿಸುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿದೆ.

ಹಿಂದಿನ ಸರ್ಕಾರವು ಆಯೋಗವನ್ನು ರಚಿಸಿತ್ತಾದರೂ ಅದು ಕೆಲಸ ಆರಂಭಿಸಿಯೇ ಇಲ್ಲ ಎಂದು ಸಂಪುಟ ಸಭೆಯ ನಂತರ ವಾರ್ತಾ ಸಚಿವ ಎಂ.ಸಿ.ನಾಣಯ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು