ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 1–11–1968

ವಾರ
Last Updated 31 ಅಕ್ಟೋಬರ್ 2018, 17:58 IST
ಅಕ್ಷರ ಗಾತ್ರ

ಪ್ರಜೆಗೆ ಸಾರ್ವಭೌಮ ಗೌರವ ಅಧಿಕಾರಿ ವರ್ಗಕ್ಕೆ ಮುಖ್ಯಮಂತ್ರಿಯವರ ರಾಜ್ಯೋತ್ಸವ ಆದೇಶ

ಬೆಂಗಳೂರು, ಅ. 31– ‘ನಿಮ್ಮ ಕಚೇರಿಗಳಿಗೆ ಬರುವ’ ಪ್ರಜಾಪ್ರಭುತ್ವದ ಸಾರ್ವಭೌಮರಾದ ಪ್ರಜೆಗಳಿಗೆ ‘ಸೌಜನ್ಯಪೂರಿತವಾದ ಸ್ವಾಗತ ನೀಡಿ, ಅವರ ಅಪೇಕ್ಷೆಗಳನ್ನು ನೆರವೇರಿಸಬೇಕು’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಕನ್ನಡ ರಾಜ್ಯೋತ್ಸವದಂದು ಅಧಿಕಾರಿ ವರ್ಗಕ್ಕೆ ಅಗ್ರಹಪೂರ್ವಕವಾದ ಮನವಿ ಮಾಡಿದ್ದಾರೆ.

ಜನತೆಗೆ ಸಲ್ಲಬೇಕಾದ ಗೌರವ ಗಮನಗಳತ್ತ ಅಧಿಕಾರಿ ವರ್ಗದ ಗಮನವನ್ನು ಸೆಳೆದು ‘ಅಧಿಕಾರಿ ವರ್ಗದವರು ನನ್ನ ಮನಸ್ಸೇನೆಂಬುದನ್ನು ತಿಳಿದು, ಜನರಿಗೆ ಪುರಸ್ಕಾರ ನೀಡಬೇಕು’ ಎಂದು ತಿಳಿಸಿದ್ದಾರೆ.

ರಾಜ್ಯೋತ್ಸವ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಖ್ಯಮಂತ್ರಿಗಳು ಇತ್ತ ಈ ಸಂದೇಶ, ಒಂದು ಆದೇಶ ಮನವಿಯೂ ಹೌದು, ಎಚ್ಚರಿಕೆಯೂ ಹೌದು.

ತಾಲ್ಲೂಕ್ ಮಟ್ಟದಲ್ಲಿ ಕನ್ನಡದಲ್ಲಿ ಆಡಳಿತ ಇಂದಿನಿಂದ

ಬೆಂಗಳೂರು, ಅ. 31– ಕನ್ನಡವನ್ನು ರಾಜ್ಯದ ಆಡಳಿತ ಭಾಷೆಯನ್ನಾಗಿ ಮಾಡುವ ಕನ್ನಡಿಗರ ಬೇಡಿಕೆ ನಾಳೆಯಿಂದ ತಾಲ್ಲೂಕು ಮಟ್ಟದ ಆಡಳಿತ ಕನ್ನಡದಲ್ಲಿ ಪ್ರಾರಂಭವಾಗುವ ಮೂಲಕ ಕಾರ್ಯರೂಪಕ್ಕೆ ಬರಲಿದೆ.

‘ಕರ್ನಾಟಕ’– ಒಟ್ಟಾಗಿ ಇಟ್ಟರೆ ಚೆಂದ

12 ವರ್ಷಗಳ ಕೆಳಗೆ ಉದಯವಾದ ವಿಶಾಲ ಮೈಸೂರಿನ ಹೆಸರು ‘ಕರ್ನಾಟಕ’ ಎಂದಾಗಬೇಕು.

ಇದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಈ ಬಗ್ಗೆ ವಿವಾದ ಇಲ್ಲವೆಂದಲ್ಲ. ರಾಜ್ಯದ ಹೆಸರು ಬದಲಾವಣೆಗಿದ್ದ ವಿರೋಧ ಕಡಿಮೆಯಾಗಿರುವುದೂ ನಿಜ.

‘ಎಲ್ಲ ಒಟ್ಟಾಗಿ ಸೇರಿ ತೀರ್ಮಾನಕ್ಕೆ ಬರಬೇಕು’– ಇದು, ಈ ಪ್ರಶ್ನೆ ಕುರಿತು ವ್ಯವಹರಿಸುವುದರಲ್ಲಿ ಮುಖ್ಯಮಂತ್ರಿಗಳಿಗಿರುವ ದೃಷ್ಟಿ, ತೀರ್ಮಾನಕ್ಕಾಗಿ ಹಿಡಿಯಬೇಕೆಂದು ಅವರು ಬಯಸುವ ದಾರಿ.

‘ಬಂಗಾರದ ಹೂವು’ ಚಿತ್ರಕ್ಕೆ ಬೆಳ್ಳಿಯ ಪದಕ; ಬಂಗಾಳಿ ‘ಹಾತೆ ಬಜಾರೆ’ ಶ್ರೇಷ್ಠ ಚಿತ್ರ

ನವದೆಹಲಿ, ಅ. 31– ‘ಬಂಗಾರದ ಹೂವು’ (ನಿರ್ಮಾಪಕ, ನಿರ್ದೇಶಕ ಬಿ.ಎ. ಅರಸುಕುಮಾರ್) ಚಲಚಚಿತ್ರಕ್ಕೆ ಬೆಳ್ಳಿಯ ಪದಕ ದೊರೆತಿದೆ.

ಪ್ರಾದೇಶಿಕ ಭಾಷೆಗಳಲ್ಲಿ ಈ ಪದಕ ಪಡೆದಿರುವ ಚಿತ್ರಗಳ ನಿರ್ಮಾತೃಗಳಿಗೆ 5000 ರೂ.ಗಳ ನಗದು ಬಹುಮಾನ ಕೊಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT