2017ರಲ್ಲಿ ಚೀನಾಕ್ಕೆ ಭೇಟಿ ನೀಡಿದ್ದಾಗ ನಾನು ಭಾರತದ ಈಶಾನ್ಯ ರಾಜ್ಯಗಳ ಜೊತೆ ನಿಕಟ ಐತಿಹಾಸಿಕ ಸಂಬಂಧ ಹೊಂದಿರುವ ಯುನಾನ್ ಪ್ರಾಂತ್ಯಕ್ಕೆ ಹೋಗಿದ್ದೆ. ನನ್ನನ್ನು ಅಲ್ಲಿ ಸುತ್ತಾಡಿಸಿದ ಗೈಡ್, ದುಬಾಷಿ ಬಹಳ ಚೆನ್ನಾಗಿ ವಿಷಯ ಮಂಡನೆ ಮಾಡಬಲ್ಲವನಾಗಿದ್ದ. ಕಮ್ಯುನಿಸ್ಟ್ ಪಕ್ಷದ ಸದಸ್ಯನಾದ ಅವನು ಯುನಾನ್ ಸರ್ಕಾರದ ವಿದೇಶ ಸಂಬಂಧಗಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ನಾನು ಅವನ ಕೆಲಸದ ಬಗ್ಗೆ ಕೇಳಿದೆ. ‘ವಿದೇಶಿ ಅತಿಥಿಗಳು ಇಲ್ಲದಿದ್ದಾಗ ನಾನು ಕಚೇರಿಯಲ್ಲಿ ಅನುವಾದಕನಾಗಿ ಕೆಲಸ ಮಾಡುತ್ತೇನೆ. ವರ್ಷದಲ್ಲಿ ಎರಡು ತಿಂಗಳು ದೂರದ ಹಳ್ಳಿಗಳಿಗೆ ಹೋಗಿ, ಬಡತನ ಹೋಗಲಾಡಿಸಲು ಸರ್ಕಾರ ರೂಪಿಸಿದ ಯೋಜನೆಗಳ ಕೆಲಸ ಮಾಡಬೇಕಾಗುತ್ತದೆ’ ಎಂದ.

ಆಶ್ಚರ್ಯಚಕಿತನಾಗಿ ನಾನು ‘ಕೆಲಸ ಖುಷಿಕೊಡುತ್ತದೆಯೇ’ ಎಂದು ಕೇಳಿದೆ. ‘ಹೌದು. ಚೀನಾ ಶ್ರೀಮಂತ ವಾಗಿದೆ. ಆದರೆ ಬಡವರು ಇನ್ನೂ ಬಹಳ ಜನ ಇದ್ದಾರೆ. ಈ ದಶಕದ ಅಂತ್ಯದೊಳಗೆ ಕಡುಬಡತನ ತೊಲಗಬೇಕು ಎಂದು ನಮ್ಮ ಅಧ್ಯಕ್ಷ ಷಿ ಜಿನ್ಪಿಂಗ್ ನಿರ್ಣಯಿಸಿ
ದ್ದಾರೆ. ಬಹಳ ಬದ್ಧತೆ ಇರುವ, ಕಷ್ಟಪಟ್ಟು ಕೆಲಸ ಮಾಡುವ ಪಕ್ಷದ ಕಾರ್ಯಕರ್ತರನ್ನು ಈ ಉದ್ದೇಶಕ್ಕಾಗಿ ಕಳುಹಿಸಲಾಗುತ್ತದೆ’ ಎಂದು ಹೇಳಿದ.

ಇದಾದ ಸರಿಸುಮಾರು ನಾಲ್ಕು ವರ್ಷಗಳ ನಂತರ, ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಷಿ ಅವರು ಫೆಬ್ರುವರಿ 25ರಂದು, ‘ಬಡತನದ ವಿರುದ್ಧದ ಹೋರಾಟದಲ್ಲಿ ಚೀನಾ ದೇಶವು ಸಂಪೂರ್ಣ ವಿಜಯ ಸಾಧಿಸಿದೆ. ಬಡತನ ನಿರ್ಮೂಲನೆ ಆಗುವುದರೊಂದಿಗೆ ಚೀನಾ ಇನ್ನೊಂದು ಪವಾಡ ಸೃಷ್ಟಿಸಿದೆ’ ಎಂದು ಘೋಷಿಸಿದರು. ಅಳಿದುಳಿದ 10 ಕೋಟಿ ಗ್ರಾಮೀಣ ಬಡವರನ್ನು ಕಳೆದ ಎಂಟು ವರ್ಷಗಳಲ್ಲಿ ಕಡುಬಡತನದಿಂದ ಮೇಲಕ್ಕೆತ್ತಲಾಗಿದೆ. ಬಡತನದ ಪಟ್ಟಿಯಿಂದ 1.30 ಲಕ್ಷ ಹಳ್ಳಿಗಳ ಹೆಸರು ಹೊರಬಂದಿದೆ.

1970ರ ದಶಕದ ಕೊನೆಯ ಭಾಗದಲ್ಲಿ ದೇಶವನ್ನು ಮಾರುಕಟ್ಟೆ ಪರ ಆರ್ಥಿಕ ಸುಧಾರಣೆಗಳಿಗೆ ಡೆಂಗ್ ಷಿಯೋಪಿಂಗ್ ಅವರು ತೆರೆದ ನಂತರ, 80 ಕೋಟಿ ಜನ ಬಡತನದಿಂದ ಬಿಡಿಸಿಕೊಂಡಿದ್ದಾರೆ. ಇಷ್ಟು ಸಣ್ಣ ಅವಧಿಯಲ್ಲಿ ಇಷ್ಟೊಂದು ಜನರನ್ನು ಬಡತನದಿಂದ ಹೊರತರಲು ಯಾವ ದೇಶಕ್ಕೂ ಸಾಧ್ಯವಾಗಿಲ್ಲ. ‘ಬಡತನದ ಎಲ್ಲ ರೂಪಗಳನ್ನು, ಎಲ್ಲ ಕಡೆಗಳಲ್ಲೂ ಕೊನೆಗಾಣಿಸಿ’ ಎಂಬುದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದು. ಇದನ್ನು 2030ರೊಳಗೆ ಸಾಧಿಸಬೇಕಿದೆ. ಈ ಗುರಿಯನ್ನು ಚೀನಾ ಹತ್ತು ವರ್ಷ ಮೊದಲೇ ಸಾಧಿಸಿದೆ.

ದುರದೃಷ್ಟಕರ ಸಂಗತಿಯೆಂದರೆ, ಈ ಬಗ್ಗೆ ಭಾರತದ ರಾಜಕೀಯ ವಲಯಗಳಲ್ಲಿ ಅಥವಾ ಮಾಧ್ಯಮ
ಗಳಲ್ಲಿ ಹೆಚ್ಚಿನ ಚರ್ಚೆ ಆಗಿಲ್ಲ. ಹಿಂದಿನ ವರ್ಷ ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷವು ಭಾರತದಲ್ಲಿ ಚೀನಾ ವಿರೋಧಿ ಮನೋಭಾವವನ್ನು ಸೃಷ್ಟಿಸಿದೆ. ವಿಶ್ವಾಸದ ಕೊರತೆಯನ್ನು ತುಂಬಲು ಚೀನಾ ಮಾಡಬೇಕಿರುವುದು ಬಹಳ ಇದೆ. ಆದರೆ, ಹಲವು ರಂಗಗಳಲ್ಲಿ ಚೀನಾ ಸಾಧಿಸುತ್ತಿರುವ ಯಶಸ್ಸಿನ ವಿಚಾರದಲ್ಲಿ ನಾವು ಕುರುಡಾಗಬಾರದು.

2012ರಲ್ಲಿ ಅಧಿಕಾರ ವಹಿಸಿಕೊಂಡ ಷಿ ಅವರು ‘ಗರೀಬಿ ಹಟಾವೊ’ವನ್ನು ತಮ್ಮ ರಾಜಕೀಯ ಆದ್ಯತೆ ಯನ್ನಾಗಿಸಿಕೊಂಡರು. ಮುಖ್ಯವಾಗಿ ಮೂರು ಕಾರಣ ಗಳಿಂದಾಗಿ ಅವರು ಇದನ್ನು ಮಾಡಿದರು – ರಾಷ್ಟ್ರೀಯ ಕಾರಣ, ಪಕ್ಷಕ್ಕೆ ಸಂಬಂಧಿಸಿದ ಕಾರಣ ಹಾಗೂ ವೈಯಕ್ತಿಕ ಕಾರಣ. ಮಾವೊ ನಂತರದ ಕಾಲಘಟ್ಟದಲ್ಲಿ ಆರ್ಥಿಕ ಬೆಳವಣಿಗೆ ಚೀನಾದಲ್ಲಿ ದೊಡ್ಡ ಪ್ರಮಾಣದಲ್ಲಿ ಇತ್ತಾದರೂ, ಆರ್ಥಿಕ ಅಸಮಾನತೆ ತೀವ್ರವಾಗಿತ್ತು. ಇಂದಿಗೂ ಅಲ್ಲಿ ಆದಾಯದ ಅಂತರ ತೀವ್ರವಾಗಿದೆ. ಹಾಗಾಗಿ, ಕಮ್ಯುನಿಸ್ಟ್ ಪಕ್ಷದ ಆಡಳಿತವಿರುವ, ತನ್ನನ್ನು ಸಮಾಜವಾದಿ ಎಂದು ಕರೆದುಕೊಳ್ಳುವ ರಾಷ್ಟ್ರಕ್ಕೆ ಸಾಮಾಜಿಕ–ಆರ್ಥಿಕ ಸಂರಚನೆಯ ಬುಡದಲ್ಲಿರುವವರ ಪರಿಸ್ಥಿತಿ ಉತ್ತಮಪಡಿಸುವುದು ಅಗತ್ಯವಾಗುತ್ತದೆ.

ಬಡತನ ಉಳಿದುಕೊಳ್ಳುವುದು ಕಮ್ಯುನಿಸ್ಟ್ ಆಡಳಿತಗಾರರು ಅಧಿಕಾರದಲ್ಲಿ ಏಕಿರಬೇಕು ಎಂಬ ಪ್ರಶ್ನೆಯನ್ನು ಮುಂದಕ್ಕೆ ತರಬಹುದಾಗಿತ್ತು. ಪಕ್ಷವು ಅಧಿಕಾರದ ಮೇಲೆ ಹೊಂದಿರುವ ಪಾರಮ್ಯವನ್ನು ಕಳೆದುಕೊಳ್ಳಬಹುದಿತ್ತು. ಹಾಗಾಗಿ ಚೀನಾದ ಪಾಲಿಗೆ ‘ಗರೀಬಿ ಹಟಾವೊ’ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ ಹೊಣೆಯಾಗಿತ್ತು. ವೈಯಕ್ತಿಕವಾಗಿ ಷಿ ಅವರಿಗೆ ಬಡತನ ವಿರೋಧಿ ಅಭಿಯಾನವು ಭಾವನಾತ್ಮಕ ಹಾಗೂ ರಾಜಕೀಯ ಉದ್ದೇಶ ಹೊಂದಿದೆ. ಷಿ ಅವರು ಹರೆಯದಲ್ಲಿ ಬಡತನವನ್ನು ಅನುಭವಿಸಿದವರು. ಸಾಂಸ್ಕೃತಿಕ ಕ್ರಾಂತಿಯ ಸಂದರ್ಭದಲ್ಲಿ ಷಿ ಅವರ ತಂದೆಯನ್ನು ಮಾವೊ ದೌರ್ಜನ್ಯಕ್ಕೆ ಗುರಿಮಾಡಿ, ಜೈಲಿಗೆ ತಳ್ಳಿದಾಗ ಷಿ ಅವರು ಏಳು ವರ್ಷಗಳ ಕಾಲ ಒಂದು ಹಳ್ಳಿಯ ಗುಹೆಯಲ್ಲಿ ಇದ್ದರು. ಚೀನಾ ಹಿಂದುಳಿದಿದ್ದನ್ನು ಹಾಗೂ ಜನರಲ್ಲಿನ ನೋವನ್ನು ಕಮ್ಯುನಿಸ್ಟ್ ಪಕ್ಷದ ಯುವ ಕಾರ್ಯಕರ್ತನಾಗಿ ಷಿ ಅವರು ಕಂಡಿದ್ದರು. ಹಾಗಾಗಿ, ದೇಶದ ಅತ್ಯುನ್ನತ ಹುದ್ದೆ ಸಿಕ್ಕಿದ ನಂತರ, ಅಳಿದುಳಿದ ಬಡತನವನ್ನು ತೊಲಗಿಸುವುದು ಅವರಿಗೆ ವೈಯಕ್ತಿಕವಾಗಿ ಪ್ರೀತಿಯ ಕೆಲಸವಾಯಿತು. ಈಗ ಸಿಕ್ಕಿರುವ ಯಶಸ್ಸು ಷಿ ಅವರಿಗೆ 2022ರಲ್ಲಿ ಕೊನೆಯಾಗಲಿರುವ ತಮ್ಮ ಎರಡನೆಯ ಅವಧಿಯ ನಂತರವೂ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡುತ್ತದೆ.

ಭಾರತ ಮತ್ತು ಚೀನಾದ ಆಡಳಿತ ವ್ಯವಸ್ಥೆ ಹಾಗೂ ರಾಜಕೀಯ ಪರಿಸ್ಥಿತಿ ಬೇರೆಯಾಗಿದ್ದರೂ ಬಡತನ ನಿರ್ಮೂಲನೆಗೆ ಚೀನಾ ಅನುಸರಿಸಿದ ಮಾರ್ಗದಲ್ಲಿ ಭಾರತಕ್ಕೆ ಮುಖ್ಯ ಪಾಠಗಳಿವೆ. ಅತ್ಯುನ್ನತ ಹಂತದಲ್ಲಿ ಗಟ್ಟಿ ರಾಜಕೀಯ ಇಚ್ಛಾಶಕ್ತಿ ಇಲ್ಲದಿದ್ದರೆ, ಸರ್ಕಾರ ಹಾಗೂ ಜನರ ಸಂಘಟಿತ ಪ್ರಯತ್ನ ಇಲ್ಲದಿದ್ದರೆ, ಹೊಸ ಕಾರ್ಯತಂತ್ರಗಳು ಇಲ್ಲದಿದ್ದರೆ ಯಾವುದೇ ಐತಿಹಾಸಿಕ ಬದಲಾವಣೆ ಸಾಧಿಸಲು ಆಗದು ಎಂಬುದು ಒಂದು ಪಾಠ. ಷಿ ಅವರು ಪಕ್ಷದ ಹಾಗೂ ಸರ್ಕಾರದ ಪೂರ್ಣ ಶಕ್ತಿಯನ್ನು ಬಳಸಿ ಜಗತ್ತು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಬಡತನ ವಿರೋಧಿ ಅಭಿಯಾನ ಶುರು ಮಾಡಿದರು. ಷಿ ಅವರು ಖುದ್ದಾಗಿ 50ಕ್ಕೂ ಹೆಚ್ಚು ಕಡೆ ಭೇಟಿ ನೀಡಿ ಪರಿಶೀಲಿಸಿದರು. ಅವರ ಭೇಟಿಗಳ ದೃಶ್ಯಾವಳಿಗಳು ಯೂಟ್ಯೂಬ್ನಲ್ಲಿ ಲಭ್ಯವಿವೆ.

250 ಬಿಲಿಯನ್ ಅಮೆರಿಕನ್ ಡಾಲರ್ನಷ್ಟು (ಸುಮಾರು ₹ 18 ಲಕ್ಷ ಕೋಟಿ) ಹಣವನ್ನು ಬಡತನ ನಿರ್ಮೂಲನೆಗಾಗಿ ಕಳೆದ ಎಂಟು ವರ್ಷಗಳಲ್ಲಿ ವೆಚ್ಚ ಮಾಡಲಾಯಿತು. ಬಡತನದ ವಿರುದ್ಧ ಹೋರಾಡಲು ಬದ್ಧತೆಯುಳ್ಳ, ಪಕ್ಷದ 30 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು, ಸಂಶೋಧಕರನ್ನು, ಸರ್ಕಾರಿ ಅಧಿಕಾರಿಗಳನ್ನು ನಗರ ಮತ್ತು ಪಟ್ಟಣಗಳಿಂದ ಹಳ್ಳಿಗಳಿಗೆ ಕಳುಹಿಸಲಾಯಿತು. ಬಡತನ ನಿರ್ಮೂಲನ ಕಾರ್ಯಕ್ರಮಗಳಲ್ಲಿ ಭ್ರಷ್ಟಾಚಾರ ಕೊನೆಗೊಳಿಸುವ ಬಗ್ಗೆ ಷಿ ಮತ್ತೆ ಮತ್ತೆ ಮಾತನಾಡಿದರು. ಪಕ್ಷವು ಸಾವಿರಾರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿತು. ಬಡತನ ನಿರ್ಮೂಲನೆಗಾಗಿ ರೂಪಿಸಿದ ವಿಶೇಷ ಕಾರ್ಯತಂತ್ರವು ಹೆಚ್ಚಿನ ಯಶಸ್ಸನ್ನು ತಂದುಕೊಟ್ಟಿತು.

ಈ ಕಾರ್ಯತಂತ್ರವು ಬಡ ಹಳ್ಳಿಗಳನ್ನು ಗುರುತಿಸಿದ್ದು ಮಾತ್ರವಲ್ಲದೆ, ಬಡ ಕುಟುಂಬಗಳನ್ನು ಹಾಗೂ ವ್ಯಕ್ತಿ
ಗಳನ್ನು ಗುರಿಯಾಗಿರಿಸಿಕೊಂಡಿತ್ತು. ನಂತರ, ದತ್ತಾಂಶ ವಿಶ್ಲೇಷಣೆ ಹಾಗೂ ಇತರ ಡಿಜಿಟಲ್ ತಂತ್ರಜ್ಞಾನಗಳ ಸಹಾಯದಿಂದ ಯೋಜನೆಯನ್ನು ಅನುಷ್ಠಾನಕ್ಕೆ ತರುವಂತೆ ಸ್ಥಳೀಯ ನಾಯಕರಿಗೆ ತಿಳಿಸಲಾಯಿತು. ಕೃಷಿ ಸುಧಾರಣೆ, ಸ್ಥಳೀಯ ಹಾಗೂ ಗೃಹ ಕೈಗಾರಿಕೆಗಳು, ಹೂಡಿಕೆ ಮತ್ತು ಮಾರುಕಟ್ಟೆ ಬೆಂಬಲದ ಖಾತರಿ, ಆರೋಗ್ಯ ಸೇವೆ, ಶಿಕ್ಷಣ, ಕೌಶಲ ಅಭಿವೃದ್ಧಿ ಇವೆಲ್ಲ ಈ ಕಾರ್ಯಕ್ರಮದಲ್ಲಿದ್ದವು.

ಚೀನಾದ ಸರ್ಕಾರದ ಪ್ರಚಾರಾಂದೋಲನದಲ್ಲಿ ಕೆಲವು ಉತ್ಪ್ರೇಕ್ಷೆಗಳು ಇದ್ದಿರಬಹುದು ಎಂಬುದು ನಿಜ. ಆದರೆ, ನಮ್ಮ ನೆರೆಯ ದೇಶವು ತನ್ನ ಮತ್ತು ಇಡೀ ಮನುಕುಲದ ಪಾಲಿಗೆ ಮಹತ್ವದ್ದಾಗಿರುವುದನ್ನು ಸಾಧಿಸಿದೆ ಎಂಬುದನ್ನು ಪೂರ್ವಗ್ರಹ ಹೊಂದಿಲ್ಲದ, ಚೀನಾದ ಹಳ್ಳಿ–ನಗರಗಳನ್ನು ಕಂಡವರು ಹೇಳಬಲ್ಲರು. ಚೀನಾದಲ್ಲಿ ಪ್ರಜಾತಂತ್ರವಿಲ್ಲ, ಅದು ಆ ದೇಶದ ದೊಡ್ಡ ದೌರ್ಬಲ್ಯ ಎಂಬುದು ನಿಜ. ಹೀಗಿದ್ದರೂ, ಬಡ ದೇಶವಾಗಿದ್ದು ಅದು ಅರ್ಧ ಶತಮಾನಕ್ಕಿಂತ ಕಡಿಮೆ ಅವಧಿಯಲ್ಲಿ ಎರಡನೆಯ ಅತ್ಯಂತ ಸಂಪದ್ಭರಿತ ರಾಷ್ಟ್ರವಾಗಿ ಪ್ರಶಂಸಾರ್ಹ ರೀತಿಯಲ್ಲಿ ಬೆಳೆದಿದೆ. ನಾವು ಅವರ ಯಶಸ್ಸನ್ನು ಒಪ್ಪಿಕೊಳ್ಳಬೇಕು, ಬಡತನದ ವಿರುದ್ಧದ ಹೋರಾಟದಲ್ಲಿ ನಮಗೆ ಸೂಕ್ತವಾದ ಪಾಠ ಗಳನ್ನು ಕಲಿತುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.