ಶುಕ್ರವಾರ, ಆಗಸ್ಟ್ 6, 2021
25 °C

ಉತ್ತರ ಪ್ರದೇಶ: ಪಂಚಾಯಿತಿಗಿಂತ ಭಿನ್ನ ವಿಧಾನಸಭೆ ಫಲಿತಾಂಶ

ಸಂಜಯ್‌ ಪಾಂಡೆ Updated:

ಅಕ್ಷರ ಗಾತ್ರ : | |

Prajavani

ವ್ಯಾಪಕ ಹಿಂಸಾಚಾರಗಳ ನಡುವೆಯೂ ಉತ್ತರ ಪ್ರದೇಶದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಒಟ್ಟು 74 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿದೆ ಎಂದು ಆ ಪಕ್ಷವು ಹೇಳಿಕೊಳ್ಳುತ್ತಿದೆ. ಇದರಿಂದಾಗಿ, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಇಂಥದ್ದೇ ಫಲಿತಾಂಶ ಬರಬಹುದು ಎಂಬ ನಿರೀಕ್ಷೆಗಳು ಬಿಜೆಪಿಯಲ್ಲಿ ಗರಿಗೆದರಿವೆ. ಆದರೆ ಇತಿಹಾಸ ಬೇರೆಯದ್ದೇ ಚಿತ್ರಣವನ್ನು ನೀಡುತ್ತದೆ.

ರಾಜ್ಯದಲ್ಲಿ ಕಳೆದ ಎರಡು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿಯೂ ಆಡಳಿತಾರೂಢ ಪಕ್ಷಗಳೇ ಗೆದ್ದಿವೆ. ಆದರೆ ಆ ಚುನಾವಣೆಗಳ ಬಳಿಕ ಮರುವರ್ಷವೇ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷಗಳು ಸೋತಿದ್ದವು.

2010ರಲ್ಲಿ ರಾಜ್ಯದಲ್ಲಿ ಬಿಎಸ್‌ಪಿ ಅಧಿಕಾರದಲ್ಲಿ ಇತ್ತು. ಆಗ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟು 71 ಜಿಲ್ಲೆಗಳ ಪಂಚಾಯಿತಿಯ ಅಧ್ಯಕ್ಷ ಸ್ಥಾನಗಳಲ್ಲಿ 60 ಸ್ಥಾನಗಳನ್ನು ಬಿಎಸ್‌ಪಿ ಗೆದ್ದಿತ್ತು. ಆದರೆ 2012ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 403 ಸ್ಥಾನಗಳಲ್ಲಿ 80 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಬಿಎಸ್‌ಪಿಗೆ ಸಾಧ್ಯ ವಾಗಿತ್ತು. ಮೂರು ಪಂಚಾಯಿತಿಗಳಲ್ಲಿ ಮಾತ್ರ ಗೆದ್ದಿದ್ದ ಸಮಾಜವಾದಿ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ 224 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿತ್ತು.

ಅದೇ ರೀತಿ, 2016ರಲ್ಲಿ ನಡೆದಿದ್ದ ಪಂಚಾಯಿತಿ ಚುನಾವಣೆಯಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷ 74 ಜಿಲ್ಲಾ ಪಂಚಾಯಿತಿಗಳ ಪೈಕಿ 63ರ ಅಧ್ಯಕ್ಷ ಸ್ಥಾನಗಳನ್ನು ಗೆದ್ದಿತ್ತು. ಆಗ ಬಿಜೆಪಿ ಕೇವಲ ಐದು ಸ್ಥಾನಗಳನ್ನು ಗೆದ್ದಿತ್ತು. ಆದರೆ ಮರುವರ್ಷವೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಬಿಜೆಪಿ ಭಾರಿ ದೊಡ್ಡ ಅಂತರದ ಜಯ ಸಾಧಿಸಿತ್ತು. 403 ಸ್ಥಾನಗಳಲ್ಲಿ 325 ಸ್ಥಾನಗಳು ಬಿಜೆಪಿಯ ತೆಕ್ಕೆಗೆ ಬಿದ್ದಿದ್ದವು. ಸಮಾಜ ವಾದಿ ಪಕ್ಷಕ್ಕೆ 49 ಸ್ಥಾನಗಳನ್ನು ಗೆಲ್ಲಲು ಮಾತ್ರ ಸಾಧ್ಯವಾಗಿತ್ತು. ಈ ಬಾರಿ ಆಡಳಿತಾರೂಢ ಬಿಜೆಪಿ ಕೂಡಾ ಪಂಚಾಯಿತಿ ಚುನಾವಣೆಯಲ್ಲಿ ಅಂಥದ್ದೇ ದೊಡ್ಡ ಗೆಲುವು ಸಾಧಿಸಿದೆ.

ಆಡಳಿತಾರೂಢ ಪಕ್ಷಗಳೇ ಯಾವಾಗಲೂ ಪಂಚಾಯಿತಿ ಚುನಾವಣೆಗಳನ್ನು ಗೆದ್ದಿವೆ. ಸ್ಥಳೀಯ ಆಡಳಿತ ಹಲವಾರು ಸ್ಪಷ್ಟ ಕಾರಣಗಳಿಗಾಗಿ ಆಡಳಿತಾರೂಢ ಪಕ್ಷದ ಪರವಾಗಿ ಜನರು ನಿಲ್ಲುತ್ತಾರೆ ಎಂದು ಲಖನೌ ಮೂಲದ ಮಾಧ್ಯಮ ವಿಶ್ಲೇಷಕರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು