‘ಕನ್ನಡ ಕಸ್ತೂರಿ’ ಎಂಬ ಮಾತಿದೆ. ಈ ಮಾತನ್ನು ನೂರಕ್ಕೆ ನೂರು ಪ್ರತಿಶತ ನಿಜವಾಗಿಸಿದವರು ನಾ.ಕಸ್ತೂರಿ!!
ಮಲಯಾಳಂ ಮಾತೃಭಾಷಿಕರಾಗಿ, ತಮ್ಮ ಬದುಕಿನ ಇಪ್ಪತ್ತೊಂದನೇ ವಯಸ್ಸಿನವರೆಗೂ ಕನ್ನಡದ ಕಾ -ಗುಣಿತದ ಪರಿಚಯವೂ ಇರದ ಕಸ್ತೂರಿ, ಕನ್ನಡದ ‘ಘಮ’ವನ್ನು ಪಸರಿಸಿ ಪ್ರಸಿದ್ಧರಾದದ್ದು ಮಾತ್ರ ಪರಮ ಸೋಜಿಗದ ಸಂಗತಿಯೇ.

ರಾಷ್ಟಕವಿದ್ವಯರಾದ ಕುವೆಂಪು ಹಾಗೂ ಜಿ.ಸ್.ಶಿವರುದ್ರಪ್ಪ, ಕನ್ನಡ ರತ್ನ ರಾಜರತ್ನಂ ಅಂತವರ ಸೃಜನಶೀಲತೆಗೆ ಪ್ರೇರಕರಾಗಿ;ಬಾನುಲಿಗೆ ‘ಆಕಾಶವಾಣಿ’ ಎಂದು ನಾಮಕರಣ ಮಾಡಿದವರಲ್ಲೊಬ್ಬರೆನಿಸಿ, ಕನ್ನಡದ ‘ಪಂಚ್’ ಎಂದೇ ಖ್ಯಾತವಾದ ‘ಕೊರವಂಜಿ’ ಹಾಸ್ಯ ಬಳಗದ ಉಸ್ತಾದರಾಗಿ,ಕಾದಂಬರಿ, ನಾಟಕ, ಆಶು- ನಾಟಕಗಳ ಕರ್ತೃವಾಗಿ, ‘ಅನರ್ಥ ಕೋಶ’ವೆಂಬ ವಿಶ್ವದಲ್ಲೇ ಅದ್ವಿತೀಯನಿಸಿದ ವಿಶಿಷ್ಟ ಪ್ರಕಾರದ ಕೃತಿ ನೀಡಿ ಅರ್ಥಪೂರ್ಣ ನುಡಿ-ಸೇವೆಗೈದ ಧೀಮಂತರು- ನಾ.ಕಸ್ತೂರಿ.

ಅವರ ಆತ್ಮ-ಕಥೆ,ಅವರ ಮಗಳು ಬರೆದಿರುವ ಲೇಖನ,ಹಿರಿಯ ಹಾಸ್ಯಗಾರರಾದ ರಾ.ಶಿ., ಅ.ರಾ.ಮಿತ್ರ, ಪ್ರಭುಶಂಕರ್ಮೊದಲಾದವರು ಒದಗಿಸಿಕೊಟ್ಟಿರುವ ಉಪನ್ಯಾಸ ಮಾಲಿಕೆಗಳ ಆಧಾರದಿಂದಹಾಗೂ ಮುಖ್ಯವಾಗಿ ನಾ ಕಸ್ತೂರಿ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಅಭೂತಪೂರ್ವ ಯಶಸ್ಸಿನ ಹಾಸ್ಯೋತ್ಸವಗಳ ಅನುಭವಗಳಿಂದ ನಾ.ಕಸ್ತೂರಿ ಅವರ (ಸಂಘರ್ಷ, ನೋವುಗಳಿಂದೊಡಗೂಡಿದ್ದರೂ! )ಬದುಕಿನ ಪರಿ-ಹಾಸಪೂರ್ಣ ಪಯಣವನ್ನು, ಅನುಭವ ರಸ-ಸಿದ್ಧಿಯ ಪಾಕವನ್ನು ಸವಿಯುತ್ತ ನೂರಿಪ್ಪತ್ತೈದನೇ ಜನ್ಮದಿನ ಆಚರಣೆಯನ್ನು ಸ್ಮರಣೀಯವಾಗಿಸೋಣ.

ನಾ.ಕಸ್ತೂರಿ ಅವರ ಪೂರ್ತಿ ಹೆಸರು-ನಾರಾಯಣ ಕಸ್ತೂರಿ ರಂಗನಾಥ ಶರ್ಮ, 25 ಡಿಸೆಂಬರ್ 1897ರಲ್ಲಿ ಕೇರಳದ ತ್ರಿಪುನ್ನತ್ತರ ಗ್ರಾಮದಲ್ಲಿ ಹುಟ್ಟಿದರು. ಅವರ ತಂದೆ ಕಸ್ತೂರಿ ರಂಗನಾಥ ಶರ್ಮ. ಅವರ ಮಾತೃ ಭಾಷೆ ತಮಿಳು, ಓದಿ ಶಿಕ್ಷಣ ಪಡೆದದ್ದು ಮಲೆಯಾಳಂನಲ್ಲಿ. ಅವರು ಹುಟ್ಟಿದಾಗ ಅವರ ಕೈ ಕಾಲಿನಲ್ಲಿ ತಲಾ ಆರು ಬೆರಳುಗಳಿದ್ದವು! ಒಟ್ಟು 20ರ ಬದಲು 24 ಬೆರಳುಗಳಿದ್ದವು. ಇದ್ಯಾವುದೋ ಅನಿಷ್ಠ, ಒಳ್ಳೆಯ ಸೂಚಕವಲ್ಲ ಎಂದು ಅವರ ಅಜ್ಜಿ ಕತ್ತರಿಯಿಂದ ಅವರ ಹೆಚ್ಚುವರಿ ಬೆರಳುಗಳನ್ನು ಕತ್ತರಿಸಿಬಿಟ್ಟರು! ಅದು ಅಜ್ಜಿ ನನಗೆ ಮಾಡಿದ ‘ಸಿಸೇರಿಯನ್’ ಆಪರೇಷನ್ ಎಂದು ಮುಂದೆ ನಕ್ಕು ಹೇಳಿಕೊಳ್ಳುತ್ತಿದ್ದರಂತೆ ಕಸ್ತೂರಿ! ವಾಸಿ ಮಾಡಲು ಅಜ್ಜಿ ತಿರುಪತಿ ತಿಮ್ಮಪ್ಪನಿಗೆ ಮೊರೆಬಿದ್ದು, ಕೊನೆಗೆ ಪಾರಾದರು ಕಸ್ತೂರಿ.

ಆದರೆ ಹುಟ್ಟಿ ಐದು ವರ್ಷದಲ್ಲೇ ಕಸ್ತೂರಿ ತಮ್ಮ ತಂದೆಯನ್ನು ಕಳೆದುಕೊಂಡರು. ತೀರಾ ಬಡತನದಲ್ಲಿದ್ದ ಕುಟುಂಬದವರು ಅವರನ್ನು ಓದಿಸಲು ಬಹಳ ಕಷ್ಟಪಟ್ಟರು. ಮಿಡ್ಲ್ ಸ್ಕೂಲ್ ಆದ ಮೇಲೆ ಅವರಿಗೆ ಸ್ಕಾಲರ್ಷಿಪ್ ದೊರೆತು ಎರ್ನಾಕುಲಂ ಮಹಾರಾಜ ಕಾಲೇಜಿನಲ್ಲಿ ಓದಿ ಇಂಟರ್ ಮೀಡಿಯೇಟ್ ತನಕ ಓದಿದರು. ಆಮೇಲೆ ಅವರು ತಿರುವನಂತಪುರ ಮಹಾರಾಜ ಕಾಲೇಜಿನಲ್ಲಿ ಓದಿ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು.

ಮೈಸೂರಿಗೆ ಬಂದು ಕನ್ನಡದಲ್ಲಿ ಅ, ಆ, ಇ, ಈ, ಯಿಂದ ಶುರು ಮಾಡಿದ ಕಸ್ತೂರಿ, ಆವಾಗಲೇ ಕನ್ನಡದಲ್ಲಿ ನಾಟಕಗಳನ್ನು ಬರೆದು ವಿದ್ಯಾರ್ಥಿಗಳೊಂದಿಗೆ ಸೇರಿ ನಾಟಕವನ್ನು ಆಡುತ್ತಿದ್ದರು. ಬಹಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ರಾಮಕೃಷ್ಣ ಆಶ್ರಮದಲ್ಲಿ ಸೇವೆಗೆ ಸೇರಿದ ಕಸ್ತೂರಿ ಹಿರಿಯ ಕವಿ ಬಿ.ಎಂ.ಶ್ರೀ ಅವರ ಜೊತೆ ಬಹಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. 1928ರಲ್ಲಿ ಮೈಸೂರಿನ ಇಂಟರ್ ಮಿಡಿಯೇಟ್ ಕಾಲೇಜಿನಲ್ಲಿ ಇತಿಹಾಸದ ಅಧ್ಯಾಪಕರಾಗಿ ಸೇರಿದರು. ಕನ್ನಡದ ಸೇವೆ ಆಗಲಿಂದಲೇ ಶುರುವಾಯಿತು. ಅರ್ಥಕೋಶದಿಂದ ಸೃಷ್ಟಿಯಾಯಿತು ಅನರ್ಥಕೋಶ. ಇಂದಿಗೂ (ಇಂದಿಗೇ!) ಅರ್ಥಪೂರ್ಣ ಅನರ್ಥ ಕೋಶ!
ಅಕ್ರಮಾದಿತ್ಯ=ಪ್ರಜಾಹಿತಕ್ಕೆ ವಿರೋಧವಾಗಿ ರಾಜ್ಯಭಾರ ಮಾಡುವ ರಾಜರುಗಳಿಗೆ ಈ ಬಿರುದು ಸಲ್ಲುತ್ತಿತ್ತಂತೆ.
ಅಗ್ನಿ ಮಿತ್ರ+ ಪೆಟ್ರೋಲ್

ಉತ್ತರ ಕ್ರಿಯೆ= ಪರೀಕ್ಷೆಗಳಲ್ಲಿ ಉತ್ತರ ಬರೆಯುವ ಕೆಲಸ.

ಕಾರಾಗೃಹಸ್ಥ = ಮದುವೆ ಬಂಧನಕ್ಕೊಳಾಗಾದವ

ಧನಸ್ಥಾಪ= ಧನಕ್ಕಾಗಿ ಆಗುವ ಜಗಳ.

ನಗೆಗಾರರೆಂದೇ ಖ್ಯಾತರಾದ ಕಸ್ತೂರಿಯವರು ‘ಗಗ್ಗಯ್ಯನ ಗಡಿಬಿಡಿ’, ‘ವರ ಪರೀಕ್ಷೆ’, ‘ಕಾಡಾನೆ’, ‘ತಾಪತ್ರಯ ತಪ್ಪಿತು’, ‘ಬ್ಯಾಂಕಿನ ದಿವಾಳಿ’, ‘ರಾಮಕೃಷ್ಣನ ದರ್ಬಾರು’ ಎಂಬ ಆರು ನಾಟಕಗಳನ್ನು ಬರೆದರು. ‘ಗಾಳಿಗೋಪುರ’, ‘ಶಂಖವಾದ್ಯ’, ರಂಗನಾಯಕಿ’, ‘ಅಲ್ಲೋಲ ಕಲ್ಲೋಲ’, ‘ಉಪಾಯ ವೇದಾಂತ’, ‘ಅನರ್ಥ ಕೋಶ’, ‘ಯದ್ವಾತದ್ವಾ’, ‘ಚಿತ್ರ ವಿಚಿತ್ರ’ ಇವು ಅವರ ಹಾಸ್ಯಪ್ರಧಾನ ಕೃತಿಗಳು.‘ಸಂಪತ್ತು’, ‘ಚೆಂಗೂಲಿ ಚೆಲುವ’, ‘ಚಕ್ರದೃಷ್ಟಿ’, ‘ನೊಂದಜೀವಿ’, ‘ಡೊಂಕು ಬಾಲ’, ಗೃಹದಾರಣ್ಯಕ’ ಇವು ಕಸ್ತೂರಿ ಅವರ ಕಾದಂಬರಿಗಳು. ಇವಲ್ಲದೆ,‘ಪಾತಾಳದಲ್ಲಿ ಪಾಪಚ್ಚಿ’ ಎಂಬ ಶಿಶುಸಾಹಿತ್ಯ ಕಸ್ತೂರಿ ಅವರ ಮೊದಲ ಪ್ರಕಟಣೆ. ಚಾರಲ್ಸ್ ಲುಡ್ವಿಗ್ ಡಾಡ್ಜ್ ಸನ್ ಅವರ ಪ್ರಸಿದ್ಧ ‘Alice in Wonder Land’ ಆಧಾರದ ಮೇಲೆ ರಚಿತವಾದ ಕೃತಿ. ಕನ್ನಡದ ಸ್ವಂತ ಕೃತಿಯಂತೆ ಪಾಪಚ್ಚಿ ನಮ್ಮ ಮನೆಯ ಅಂಗಳದ್ದೇ ಮಗು ಎಂಬಂತೆ ಕಸ್ತೂರಿ ಚಿತ್ರಿಸಿದ್ದಾರೆ. ವೈ.ಎನ್.ಕೆ ಅವರು ಪಾಪಚ್ಚಿಯ ಬಗ್ಗೆಮೆಚ್ಚಿನ ಮಾತಾಡುತ್ತ ಪಾತಾಳ-ಗರಡಿ ಹಾಕಿ ಹುಡುಕಿದರೂ ಇಷ್ಟು ಒಳ್ಳೆಯ ಶಿಶು-ಸಾಹಿತ್ಯ ಸಿಗೋಲ್ಲ'-ಅನ್ನುತ್ತಿದ್ದರು.

ಕಸ್ತೂರಿಯವರ ಸ್ವಗತ -ಸಂಭಾಷಣೆ.

‘ನನ್ನ ಹೆಸರು ಕಸ್ತೂರಿ ಅಂತ. ಆದರೆ ಈ ಹೆಸರಿನಿಂದ ಆಗುವ / ಆಗಬಹುದಾದ ಅವಾಂತರಗಳು ಒಂದೆರೆಡಲ್ಲ. ನನ್ನನ್ನು ಹಲವಾರು ಸಮಾರಂಭ, ಸಭೆಗಳಿಗೆ ಆಹ್ವಾನಿಸುವಾಗ, ಈ ಸಭೆ ಸಮಾರಂಭಗಳ ಆಯೋಜಕರುಗಳು ನನ್ನನ್ನು ಮುಖತಃ ನೋಡದಿದ್ದವರು, ನನ್ನ ಹೆಸರನ್ನು ನೋಡಿ, ಕಸ್ತೂರಿ ಅಂದರೆ ಹೆಂಗಸೇ ಅಂತ ತೀರ್ಮಾನಿಸಿ, ಆಹ್ವಾನ ಪತ್ರಿಕೆಯಲ್ಲಿ 'ಶ್ರೀಮತಿ ಕಸ್ತೂರಿಯವರು' ಅಂತಾನೇ ಬರೆದು ಬಿಡ್ತಾ ಇದ್ರು.

ನಾನೂ ಸಹ ಅದನ್ನು ಗಮನಿಸಿದರೂ, ನನ್ನ ಹೆಸರೇ ಹಾಗಿದೆಯಲ್ಲ ಅಂತ ಸುಮ್ಮನಾಗಿ ಬಿಡುತ್ತಿದ್ದೆ. ಎದುರಿನಲ್ಲಿ ನೋಡಿದಾಗ ಅವರಿಗೇ ತಿಳಿಯುತ್ತದೆಯಲ್ಲಾ ಅಂತ ಸಮಾಧಾನಪಟ್ಟುಕೊಳ್ತಾ ಇದ್ದೆ. ಕೆಲವರು ಇನ್ನೂ ಹೆಚ್ಚಿನ ಮುತುವರ್ಜಿ, ನನಗೆ ಪತ್ರ ಬರೆಯುವಾಗ ‘ಗಂಗಾ– ಭಾಗೀರಥಿ ಸಮಾನರಾದ ಶ್ರೀಮತಿ ಕಸ್ತೂರಿಯವರಿಗೆ’ ಅಂತ ಬರೆದು ಬಿಡೋದೇ?/ , ನಾನು ಹೆಂಗಸು ಮತ್ತು ವಿಧವೆ ಕೂಡ ಅಂತ ತೀರ್ಮಾನ ಮಾಡಿಬಿಡೋದೆ,

ಈ ಅವಾಂತರ, ಇನ್ನೂ ಕೇಳಿ, ಸಭೆ ಸಮಾರಂಭಕ್ಕೆ ಸಾಮಾನ್ಯವಾಗಿ ರೈಲಿನಲ್ಲಿ ಹೋಗುತ್ತಿದ್ದೆ. ಆಯೋಜಕರು ರೈಲ್ವೇ ಸ್ಟೇಷನ್ನಿಗೆ ಬಂದು ಸ್ವಾಗತಿಸಲು ಕಾಯುತ್ತಿರುತ್ತಿದ್ದರು. ನಾನು, ನನ್ನ ಹೆಂಡತಿ ರೈಲಿನಿಂದ ಇಳಿದ ಕೂಡಲೇ, ಅವರೆಲ್ಲ ನನ್ನ ಹೆಂಡತಿಗೆ ಹಾರ ಹಾಕಿ ಕೈಲಿ ತುರಾಯಿ ಕೊಟ್ಟು ಬಿಡುತ್ತಿದ್ದರು. ನಾನು ಪೆದ್ದನ ಹಾಗೆ ನೋಡುತ್ತ ನಿಲ್ಲಬೇಕಿತ್ತು. ಮುಂದೆ ನಡೆದ ಒಂದು ಘಟನೆ ಬಹಳ ಅಪಾಯಕಾರಿ ಘಟನೆ ಆಗೋಹಾಗಿತ್ತು.

‘ನನಗೆ ಕೆಲವು ತಿಂಗಳುಗಳ ಕಾಲ ಒಂದು ರೀತಿ ಹೊಟ್ಟೆ ಬೇನೆ. ಸರಿ, ವೈದ್ಯರ ಸಲಹೆ ಪಡೆಯಲು ನನ್ನ ವೈದ್ಯರ ಬಳಿಗೆ ಹೋದೆ. ಅವರು ನನ್ನನ್ನು ತಪಾಸಣೆ ಮಾಡಿ, ಮಾತ್ರೆಗಳನ್ನು ಕೊಟ್ರು. ಏನೂ ಪ್ರಯೋಜನ ಇಲ್ಲ. ಪುನಃ ಅವರ ಬಳಿ ಹೋದೆ, ‘ಡಾಕ್ಟರೇ, ಏನೂ ವ್ಯತ್ಯಾಸ ಇಲ್ಲ’ ಅಂದೆ. ಅವರು ‘ಸರಿ ಹಾಗಾದ್ರೆ, ನೀವು ಒಂದು ಕೆಲಸ ಮಾಡಿ. ರಕ್ತ ಪರೀಕ್ಷೆಗೆ ಇಲ್ಲೇ ರಕ್ತ ತಗೊಳ್ತಾರೆ. ಮಲ ಪರೀಕ್ಷೆಗೆ, ಒಂದು ಸಣ್ಣ ಬಾಟಲಿಯಲ್ಲಿ ನಿಮ್ಮ ಮಲವನ್ನು ತುಂಬಿಸಿ, ನಿಮ್ಮ ಹೆಸರನ್ನು ಬರೆದು ಅಂಟಿಸಿ ತನ್ನಿ. ಅಂತ ಹೇಳಿದರು... ಮಾರನೇ ದಿನ ಬೆಳಿಗ್ಗೆ ಒಂದು ಸಣ್ಣ ಬಾಟಲಿಯಲ್ಲಿ ಪಾಯಿಖಾನೆ ತುಂಬಿಸಿ, ಅದರ ಮೇಲೆ ‘ಕಸ್ತೂರಿ’ ಅಂತ ಬರೆದು ಅಂಟಿಸಿ ದೂರದ ಒಂದು ಸ್ಟೂಲ್ ಮೇಲೆ ಇಟ್ಟೆ. ವೈದ್ಯರಿಗೆ ತೆಗೆದುಕೊಂಡು ಹೋಗಿ ಕೊಡಲು ಇನ್ನೂ ಸಮಯ ಇತ್ತು ಅದಕ್ಕೆ. ಅಲ್ಲ ಮಲ ತುಂಬಿದ ಬಾಟಲಿಯ ಮೇಲೆ ‘ಕಸ್ತೂರಿ’ಅಂತ ಬರೆದು ಅಂಟಿಸಿ ಇಟ್ಟಿದ್ದರೆ, ಯಾರಾದರೂ ಪ್ರಮಾದವಶಾತ್ ಕಸ್ತೂರಿ ಅಂತ ತಿಳಿದು ಉಪಯೋಗಿಸಿ ಬಿಟ್ಟಿದ್ದರೆ, ಎಂಥಾ ಅನಾಹುತ ಆಗಿ ಬಿಡುತ್ತಿತ್ತು.!!’ --ಹಿರಿಯ ಸಾಹಿತಿ ಪ್ರೊ-ಆ.ರಾ.ಮಿತ್ರಾ ಅವರು ದಶಕಗಳ ಹಿಂದೆ, ನಮ್ಮ ಕನ್ನಡ ಸಂಘದಲ್ಲಿ ಈ ಪ್ರಸಂಗವನ್ನು ರಸವತ್ತಾಗಿ ಬಣ್ಣಿಸಿದ್ದು ನಿಚ್ಚಳ ನೆನಪಿದೆ.

ಕಸ್ತೂರಿ ಅವರ ನೀರೂರಿಸುವ ಪ್ರಸಂಗ...

ಗಾಂಧೀಜಿ ಅವರನ್ನು ನೋಡಲು ನಾ.ಕಸ್ತೂರಿ ಅವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಮದ್ರಾಸಿಗೆ ಹೋಗಿದ್ದರಂತೆ- ಮೊದಲೇ ಮದ್ರಾಸ್ ಬಿಸಿಲು. ವಿಪರೀತ ದಾಹ, ಮಕ್ಕಳಿಗೆ ದಾಹ ಕಡಿಮೆ ಮಾಡಲು ಐಸ್-ಕ್ರೀಮ್ ಕೊಡಿಸಿದರಂತೆ ಕಸ್ತೂರಿ. ಮಕ್ಕಳು ಸವಿದರು, ಆದರೆ ಕೈಯೆಲ್ಲಾ .. ಅಂಟಂಟು. ಕೈತೊಳೆಯಲು ನೀರೆಲ್ಲಿ? -ಕಸ್ತೂರಿ ಅವರನ್ನು ಪ್ರಭುಶಂಕರ ಕೇಳಿದರು. ಆಗ ಕಸ್ತೂರಿ ‘ಅಯ್ಯೋ ಅದಕ್ಕೇನಂತೆ, ಮುಂದಿರುವ ವ್ಯಕ್ತಿಯ ಬೆನ್ನಗೆ ಒರಸಿದರಾಯ್ತು’- ಪ್ರಭುಶಂಕರಗೆ ಮುಜುಗರ, ಕಸಿವಿಸಿ, ಸಂಕೋಚ. ಏನೀಗ? ಒರಸು, ಒರಸು ಏನೂ ಮುಜುಗರ ಪಟ್ಕೊಬೇಡ -ನಾನು ನಿನ್ನ ಬೆನ್ನಿಗೆ ಒರಸಿಲ್ಲವೇ!!’-ಪ್ರಭುಶಂಕರ ಬೇಸ್ತು-ಬೀಳುವುದು ಮಾತ್ರ ಬಾಕಿ!!. ಪ್ರಭುಶಂಕರ ಅವರ ಬಾಯಲ್ಲಿ ಈ ಐಸ್-ಕ್ರೀಮ್ ಪ್ರಸಂಗ ಇನ್ನೂ ನೀರೂರುವಂತೆ ನಿರೂಪಿತವಾಗುತ್ತದೆ.

ಗಾದೆಗೊಂದು - ತಗಾದೆ.

ನಮ್ಮ ಹಳೆಯ ಗಾದೆಗಳನ್ನು ತಿರುಗ ಮುರುಗ ಮಾಡಿ, ಜಾಲಾಡಿಸಿ, ಇಂದಿನ ನಮ್ಮ ಬಾಳಿಗೆ/ ಪೀಳಿಗೆಗೆ ನೀಡಿದ್ದಾರೆ ಕಸ್ತೂರಿ ಆವರ ‘ತಗಾದೆ’ಯೇನೂ ಕಡಿಮೆಯದಲ್ಲ. ಅವರು ಹುಟ್ಟು ಹಾಕಿದ ಗಾದೆಗಳ ಸ್ಯಾಂಪಲ್;

-ಅಡುಗೆ ರುಚಿ ಬಡಿಸುವವನಿಗೇ ಗೊತ್ತು

-ಮಕ್ಕಳಿಗೆ ಶಿಶುವಿಹಾರ, ದೊಡ್ಡವರಿಗೆ ಉಪಕಾರ

-ಸೀರೆ ನೋಡಿ ಸೀಟ್ ಹಾಕಿ, ವಾಲೆ ನೋಡಿ ಮಾಲೆ ಹಾಕಿ

-ಪಾಪಿ ಬಸ್ಸಿಗೆ ಹೋದರೆ ಮೊಣಕಾಲು ಮಡಿಸಲೂ ಜಾಗವಿಲ್ಲ.
-ಸಿನಿಮಾ ತಾರೆ ಪುರಾಣ ಊರಿಗೆಲ್ಲ ಪ್ರಾಣ.

ಕವಿ-ವರ ಬೇಂದ್ರೆ ಅವರು ಹೇಳುವಂತೆ-‘ಎನ್ನ ಪಾಡೇನಗಿರಲಿ, ಅದರ ಸವಿಯನ್ನಷ್ಟೇ ಹಣಿಸುವೆ ನಿನಗೆ’-ಎಂಬಂತೆ ಕಸ್ತೂರಿ, ಬಾಲ್ಯದಿಂದಲೇ ಕಷ್ಟ ಅನುಭವಿಸುತ್ತ ಮುಂದೆ ಮಧ್ಯ ವಯಸ್ಸಿನಲ್ಲಿ ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡು, ಪುತ್ರ-ಶೋಕ ತಾಳದೆ ವಿಹ್ವಲರಾಗಿ ಪುಟ್ಟಪರ್ತಿಯ ಆಶ್ರಮ ಸೇರಿ ಅಲ್ಲಿ ‘ಸನಾತನ ಸಾರಥಿ’ ಪತ್ರಿಕೆ, ಆಧಾತ್ಮ ಕೃತಿ ರಚನೆಯಲ್ಲಿ ತೊಡಗಿ ಆಗಸ್ಟ್ 14 1987ರಂದು ಕೊನೆಯುಸಿರೆಳೆದರು. ಆಗ ತೊಂಬತ್ತು ತುಂಬಿತ್ತು; ಉಸಿರು ನಿಂತಿತ್ತು. ಕನ್ನಡ-ಸುಮದಲ್ಲರಳಿದ ‘ಕಸ್ತೂರಿ-ಘಮ’ ಇಂದಿಗೂ,ಪಸರಿಸಿ,ಉಸಿರಾಡುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.