ಜಗತ್ತಿನ ಬೃಹತ್ ತಂತ್ರಜ್ಞಾನ ಕಂಪನಿಗಳು ಇಂದು ಒಂದಕ್ಕಿಂತ ಇನ್ನೊಂದು ದೊಡ್ಡದಾದ ಮತ್ತು ಬಲವಾದ ಡೇಟಾ ಸೆಂಟರ್ಗಳನ್ನು ನಿರ್ಮಿಸಲು ಪರಸ್ಪರ ಸ್ಪರ್ಧೆಗಿಳಿದಿವೆ. ಆದರೆ, ಪರ್ಪ್ಲೆಕ್ಸಿಟಿ ಎಐ ಸಂಸ್ಥೆಯ ಸಿಇಒ ಆಗಿರುವ ಅರವಿಂದ್ ಶ್ರೀನಿವಾಸ್ ಅವರು ಕೃತಕ ಬುದ್ಧಿಮತ್ತೆ ವಾಸ್ತವವಾಗಿ ಯಾವ ದಿಕ್ಕಿನತ್ತ ಸಾಗಲಿದೆ ಎನ್ನುವ ಕುರಿತು ಅತ್ಯಂತ ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಎಲಾನ್ ಮಸ್ಕ್, ಸುಂದರ್ ಪಿಚೈ ಮುಂತಾದ ಸಿಇಒಗಳ ನೇತೃತ್ವದ ಬೃಹತ್ ಕಂಪನಿಗಳು ಬಹುದೊಡ್ಡ ಎಐ ಯೋಜನೆಗಳಿಗೆ ಬಿಲಿಯನ್ಗಟ್ಟಲೆ ಡಾಲರ್ ಹಣ ವೆಚ್ಚ ಮಾಡುತ್ತಿದ್ದು, ಬಾಹ್ಯಾಕಾಶದಲ್ಲೂ ಡೇಟಾ ಸೆಂಟರ್ಗಳನ್ನು ಸ್ಥಾಪಿಸುವ ಕುರಿತು ಆಲೋಚಿಸುತ್ತಿವೆ. ಆದರೆ, ಅರವಿಂದ್ ಶ್ರೀನಿವಾಸ್ ಅವರು ಎಐ ಭವಿಷ್ಯ ಮೌನವಾಗಿಯೇ ಬದಲಾವಣೆ ಹೊಂದಲಿದ್ದು, ಅದು ಈ ಬೃಹತ್ ಕಟ್ಟಡಗಳಿಂದ ಬೇರೆ ದಿಕ್ಕಿನತ್ತ ಸಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಎಐಗೆ ಸಂಬಂಧಿಸಿದ ಮುಂದಿನ ಬದಲಾವಣೆಯಲ್ಲಿ, ಬುದ್ಧಿಮತ್ತೆಯನ್ನು ಬೃಹತ್ತಾದ ಡೇಟಾ ಸೆಂಟರ್ಗಳ ಒಳಗೆ ಇಟ್ಟುಕೊಳ್ಳುವ ಬದಲು, ಅದನ್ನು ಬಳಕೆದಾರರ ಬಳಿಗೆ ಕಳುಹಿಸುವ ಸಾಧ್ಯತೆಗಳಿವೆ ಎಂದು ಶ್ರೀನಿವಾಸ್ ಹೇಳಿದ್ದಾರೆ.

ಉಪಕರಣದಲ್ಲಿನ ಎಐ ಕ್ರಾಂತಿ

ಪ್ರಖರ್ ಗುಪ್ತಾ ಅವರ ಯೂಟ್ಯೂಬ್ ಪಾಡ್ಕಾಸ್ಟ್ನಲ್ಲಿ ಮಾತನಾಡುವ ಸಂದರ್ಭದಲ್ಲಿ, ಶ್ರೀನಿವಾಸ್ ಅವರು ಈ ಬೃಹತ್ ಡೇಟಾ ಸೆಂಟರ್ಗಳ ಎದುರಿಗಿರುವ ಬಹುದೊಡ್ಡ ಸವಾಲೆಂದರೆ, ಆನ್ ಡಿವೈಸ್ ಎಐ ಎನ್ನುವುದು ಅತ್ಯಂತ ಪ್ರಬಲವಾಗಿ ಬೆಳೆದಿರುವುದು ಎಂದಿದ್ದಾರೆ. ಅಂದರೆ, ಎಲ್ಲೋ ದೂರದಲ್ಲಿರುವ ಸರ್ವರ್ಗಳ ಬದಲು, ಸ್ಮಾರ್ಟ್ಫೋನ್ಗಳು ಮತ್ತು ಕಂಪ್ಯೂಟರ್ಗಳಲ್ಲಿ ಕಾರ್ಯಾಚರಿಸುವ ರೀತಿಯಲ್ಲಿ ಎಐ ಬೆಳೆದಿರುವುದು ಡೇಟಾ ಸೆಂಟರ್ಗಳಿಗೆ ತೊಂದರೆ ನೀಡಬಲ್ಲದು ಎನ್ನುವುದು ಅವರ ಅಭಿಪ್ರಾಯ.

ಒಂದು ವೇಳೆ ಆಧುನಿಕವಾದ ಎಐ ಅನ್ನು ಫೋನ್ಗಳಲ್ಲಿ, ಲ್ಯಾಪ್ಟಾಪ್ಗಳಲ್ಲಿ, ಅಥವಾ ವೈಯಕ್ತಿಕ ಉಪಕರಣಗಳಲ್ಲಿ ಇರುವ ಸಣ್ಣ ಚಿಪ್ಗಳಿಗೆ ಅಳವಡಿಸಲು ಸಾಧ್ಯವಾದರೆ, ಆಗ ಬೃಹತ್ತಾದ ಕ್ಲೌಡ್ ಡೇಟಾ ಸೆಂಟರ್ಗಳ ಅವಶ್ಯಕತೆ ಬಹಳ ವೇಗವಾಗಿ ಕುಸಿಯುತ್ತದೆ ಎಂದು ಅವರು ವಿವರಿಸಿದ್ದಾರೆ. ಸರಳವಾಗಿ ಹೇಳುವುದಾದರೆ, ಎಐ ನಿರಂತರವಾಗಿ ಕಾರ್ಯಾಚರಿಸಲು ಎಲ್ಲೋ ದೂರದಲ್ಲಿರುವ ಸರ್ವರ್ಗಳಿಗೆ ಸಂಪರ್ಕಿಸುತ್ತಾ ಇರುವ ಅಗತ್ಯವಿಲ್ಲ. ಬದಲಿಗೆ, ಅದು ತಾನು ಬಳಕೆಯಾಗುತ್ತಿರುವ ಉಪಕರಣದಲ್ಲೇ ಕಾರ್ಯಾಚರಿಸಬಲ್ಲದು.

ಚಾಟ್ ಜಿಪಿಟಿ, ಜೆಮಿನೈ, ಮತ್ತು ಪರ್ಪ್ಲೆಕ್ಸಿಟಿಯಂತಹ ಇಂದಿನ ಎಐ ಟೂಲ್ಗಳು ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸಲು ಬೃಹತ್ತಾದ ಡೇಟಾ ಸೆಂಟರ್ಗಳ ಮೇಲೆ ಅಪಾರ ಅವಲಂಬನೆ ಹೊಂದಿವೆ. ಈ ಕೇಂದ್ರಗಳು ಅಪಾರ ಪ್ರಮಾಣದ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುತ್ತವೆ. ಇವುಗಳಿಗೆ ಆಧುನಿಕ ತಂಪು ಮಾಡುವ ವ್ಯವಸ್ಥೆಗಳ ಅಗತ್ಯವಿದ್ದು, ಸರ್ವರ್ಗಳು ಅತಿಯಾಗಿ ಬಿಸಿಯಾಗುವುದನ್ನು ತಡೆಯಲು ನಿರಂತರವಾಗಿ ನೀರಿನ ಪೂರೈಕೆ ನಡೆಸುತ್ತಿರಬೇಕಾಗುತ್ತದೆ.

ಒಂದು ವೇಳೆ ಎಐ ಕಾರ್ಯಗಳನ್ನು ಬೃಹತ್ತಾದ ಕೇಂದ್ರೀಯ ಡೇಟಾ ಸೆಂಟರ್ಗಳ ಅಗತ್ಯವಿಲ್ಲದೆ, ನೇರವಾಗಿ ವೈಯಕ್ತಿಕ ಉಪಕರಣಗಳಲ್ಲೇ ನಡೆಸಲು ಸಾಧ್ಯವಾದರೆ, ಆ ದೀರ್ಘಾವಧಿಯಲ್ಲಿ ಇಂತಹ ವ್ಯವಸ್ಥೆಯ ಅವಶ್ಯಕತೆ ಇರುವುದಿಲ್ಲ ಎಂದು ಶ್ರೀನಿವಾಸ್ ಹೇಳಿದ್ದಾರೆ.

ಇಂತಹ ಅಡಚಣೆಯ ಅರ್ಥಶಾಸ್ತ್ರ

ಒಂದು ವೇಳೆ ಎಐ ಬುದ್ಧಿವಂತಿಕೆಯನ್ನು ನೇರವಾಗಿ ನಾವು ಬಳಸುವಂತಹ ಉಪಕರಣಗಳ ಚಿಪ್ ಒಳಗೇ ಅಳವಡಿಸಲು ಸಾಧ್ಯವಾದರೆ, ಅದು ಡೇಟಾ ಸೆಂಟರ್ಗಳ ಪಾಲಿಗೆ ಬಹುದೊಡ್ಡ ತೊಂದರೆಯಾಗಲಿದೆ ಎನ್ನುವುದು ಶ್ರೀನಿವಾಸ್ ವಾದ. ಅಂತಹ ಸಂದರ್ಭದಲ್ಲಿ, ಎಐ ನೇರವಾಗಿ ತಾನಿರುವ ಉಪಕರಣದಲ್ಲೇ ಕಾರ್ಯಾಚರಿಸಲು ಸಾಧ್ಯವಾಗುವುದರಿಂದ, ಎಲ್ಲವನ್ನೂ ಒಂದು ಬೃಹತ್ ಡೇಟಾ ಕೇಂದ್ರದಲ್ಲಿ ಸಂಸ್ಕರಿಸುವ ಅಗತ್ಯ ಬೀಳುವುದಿಲ್ಲ.

ಇಂತಹ ಬದಲಾವಣೆಯ ಪರಿಣಾಮವಾಗಿ, ಎಐ ಹೆಚ್ಚು ಹೆಚ್ಚು ವಿಕೇಂದ್ರೀಕರಣಗೊಳ್ಳಲಿದೆ. ಅದರಲ್ಲೂ ಎಐ ಮಾಡೆಲ್ಗಳು ಕಾಲಕ್ರಮೇಣ ಬಳಕೆದಾರರಿಗೆ ವೈಯಕ್ತಿಕವಾಗಿ ಹೊಂದಿಕೊಂಡರೆ ಅವು ಇನ್ನೂ ಹೆಚ್ಚು ವೈಯಕ್ತಿಕವಾಗಲಿವೆ ಎಂದು ಅವರು ವಿವರಿಸಿದ್ದಾರೆ.

ಇದು ಈಗಾಗಲೇ ಚಾಲ್ತಿಯಲ್ಲಿರುವ ಉದ್ಯಮ ಮಾದರಿಗೆ ಒಂದು ಮೂಲಭೂತ ಸವಾಲಾಗಿ ಪರಿಣಮಿಸಲಿದೆ. ಉದ್ಯಮ ದೈತ್ಯರು ಈಗಾಗಲೇ ಡೇಟಾ ಸೆಂಟರ್ಗಳ ಮೂಲಭೂತ ವ್ಯವಸ್ಥೆಗಳಿಗಾಗಿ ಬಿಲಿಯಾಂತರ ಡಾಲರ್ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಕೆಲವು ಯೋಜನೆಗಳಂತೂ ಮುಂದಿನ ಕೆಲ ವರ್ಷಗಳಲ್ಲಿ ಒಂದು ಟ್ರಿಲಿಯನ್ ಡಾಲರ್ಗೂ ಹೆಚ್ಚು ವೆಚ್ಚದಾಯಕವಾಗುವ ಸಾಧ್ಯತೆಗಳಿವೆ. ಒಂದು ವೇಳೆ ಆನ್ ಡಿವೈಸ್ ಎಐ ವ್ಯಾಪಕವಾಗಿ ಬಳಕೆಗೆ ಬಂದರೆ, ಇದರಲ್ಲಿ ಬಹುತೇಕ ಹೂಡಿಕೆ ಅನವಶ್ಯಕವಾಗಬಹುದು.

ಖಾಸಗಿತನ, ವೇಗ, ಮತ್ತು ಮಾಲಿಕತ್ವ

ಉಪಕರಣದಲ್ಲೇ ಎಐ ಅಳವಡಿಕೆಯಾಗುವುದರಿಂದ, ಅಪಾರ ಪ್ರಮಾಣದ ಮೂಲಭೂತ ವ್ಯವಸ್ಥೆಗಳ ವೆಚ್ಚ ಕಡಿಮೆಯಾಗುವ ಜೊತೆಗೆ, ಖಾಸಗಿತನವೂ ಬಹುದೊಡ್ಡ ಪ್ರಯೋಜನವಾಗಲಿದೆ ಎನ್ನುವುದು ಶ್ರೀನಿವಾಸ್ ಅಭಿಪ್ರಾಯ. ಒಂದು ವೇಳೆ ಎಐ ಮಾಹಿತಿ ಸಂಸ್ಕರಣೆ ಉಪರಣದ ಒಳಗೇ ನಡೆಯತೊಡಗಿದರೆ, ಆಗ ಖಾಸಗಿ ಮಾಹಿತಿಯನ್ನು ಹೊರಗಡೆ ಕಳುಹಿಸುವ ಅಗತ್ಯ ಬರುವುದಿಲ್ಲ. ಇದರಿಂದ ಬಾಹ್ಯ ಸರ್ವರ್ಗಳ ಮೇಲಿನ ಅವಲಂಬನೆ ಕಡಿಮೆಯಾಗಿ, ಡೇಟಾ ದುರುಪಯೋಗವಾಗುವ ಅಪಾಯ ಕಡಿಮೆಯಾಗುತ್ತದೆ.

ಇವೆಲ್ಲದರೊಡನೆ, ಉಪಕರಣದಲ್ಲೇ ಕಾರ್ಯಾಚರಿಸುವ ಎಐ ತಕ್ಷಣವೇ ಬಳಕೆದಾರರಿಗೆ ಪ್ರತಿಕ್ರಿಯೆ ನೀಡಬಹುದು ಎಂದು ಶ್ರೀನಿವಾಸ್ ಹೇಳುತ್ತಾರೆ. ಯಾಕೆಂದರೆ, ಇದು ದೂರದಲ್ಲಿರುವ ಡೇಟಾ ಸೆಂಟರ್ಗಳಿಗೆ ಮನವಿ ಕಳುಹಿಸುವ ಅಗತ್ಯವಿಲ್ಲದ್ದರಿಂದ, ಅನವಶ್ಯಕ ವಿಳಂಬಗಳು ತಗ್ಗುತ್ತವೆ. ಹೀಗಾದಾಗ, ಅಂತರ್ಜಾಲದ ವಿಳಂಬ ಇಲ್ಲವಾಗಿ, ತಕ್ಷಣವೇ ಫಲಿತಾಂಶ ಲಭಿಸಿ, ಬಳಕೆದಾರರಿಗೆ ತಮ್ಮ ಮಾಹಿತಿಯ ಮೇಲೆ ಸಂಪೂರ್ಣ ನಿಯಂತ್ರಣ ಇರುತ್ತದೆ.

ಶ್ರೀನಿವಾಸ್ ಈ ಪರಿಕಲ್ಪನೆಯನ್ನು ಒಂದು ರೀತಿ ವೈಯಕ್ತಿಕ ʼಡಿಜಿಟಲ್ ಮೆದುಳುʼ ಇದ್ದಂತೆ ಎಂದು ಬಣ್ಣಿಸಿದ್ದು, ಇದು ಸಂಪೂರ್ಣವಾಗಿ ಬಳಕೆದಾರನಿಗೆ ಸೇರಿದ್ದು ಎಂದಿದ್ದಾರೆ. ಹೀಗಾದಾಗ, ಎಐ ಬಳಕೆದಾರರನ್ನು ನೆನಪಿಟ್ಟುಕೊಂಡು, ಅವರನ್ನು ಅರ್ಥ ಮಾಡಿಕೊಳ್ಳುತ್ತದೆ. ಇದರಿಂದಾಗಿ ಆ ಬುದ್ಧಿಮತ್ತೆ ತಮ್ಮದೇ ಆಗಿರುವುದರಿಂದ, ಬಳಕೆದಾರರು ಪದೇ ಪದೇ ಹೇಳಿದ್ದನ್ನೇ ಪುನರಾವರ್ತಿಸುವ ಅಗತ್ಯ ಬೀಳುವುದಿಲ್ಲ.

“ನೀವು ಈ ಬುದ್ಧಿಮತ್ತೆಯ ಮಾಲಿಕರಾಗುತ್ತೀರಿ. ಅದು ನಿಮ್ಮ ಮೆದುಳಾಗಿರುತ್ತದೆ” ಎಂದು ಶ್ರೀನಿವಾಸ್ ವಿವರಿಸುತ್ತಾರೆ. ಈ ಕಾರ್ಯ ವಿಧಾನ ಡೇಟಾ ಸೆಂಟರ್ಗಳ ಉದ್ಯಮಕ್ಕೆ ಗಂಭೀರವಾಗಿ ತೊಂದರೆ ನೀಡಬಹುದು ಎನ್ನುವುದು ಅವರ ಸ್ಪಷ್ಟ ನಂಬಿಕೆಯಾಗಿದ್ದು, ಬೃಹತ್ತಾದ, ಕೇಂದ್ರೀಯ ಎಐ ಮೂಲಭೂತ ವ್ಯವಸ್ಥೆಗಳ ಮೇಲೆ ನೂರಾರು ಬಿಲಿಯನ್ ಡಾಲರ್ ಅಥವಾ ಟ್ರಿಲಿಯನ್ ಡಾಲರ್ ಹಣವನ್ನು ವೆಚ್ಚ ಮಾಡುವ ಕುರಿತು ಅನುಮಾನಗಳು ಮೂಡುವಂತೆ ಮಾಡಿದೆ.

ಈಗಲೇ ಅಂತಹ ಸ್ಥಿತಿ ಬಂದಿಲ್ಲ – ಆದರೆ ಆ ದಿನಗಳು ದೂರವಿಲ್ಲ

ತಾನು ವಿವರಿಸಿರುವಂತಹ ಎಐ ಭವಿಷ್ಯ ಇನ್ನೂ ಆರಂಭಗೊಂಡಿಲ್ಲ ಎಂದು ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ. ಇಲ್ಲಿಯ ತನಕ ಯಾವ ಕಂಪನಿಯೂ ಒಂದು ಉಪಕರಣದಲ್ಲೇ ಕಾರ್ಯ ನಿರ್ವಹಿಸುವ, ಸಂಕೀರ್ಣ ಕಾರ್ಯಗಳನ್ನು ವೈಯಕ್ತಿಕ ಉಪಕರಣದಲ್ಲಿ ನಿರ್ವಹಿಸಬಲ್ಲಷ್ಟು ಶಕ್ತಿಶಾಲಿಯಾದ ಮತ್ತು ದಕ್ಷವಾದ ಆನ್ ಡಿವೈಸ್ ಎಐ ಅನ್ನು ನಿರ್ಮಿಸಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.

ಈಗ ಬಳಕೆಯಲ್ಲಿರುವ ಆನ್ ಡಿವೈಸ್ ಎಐ ಮಾದರಿಗಳಿಗೆ ಪ್ರೊಸೆಸಿಂಗ್ ಸಾಮರ್ಥ್ಯ, ಬ್ಯಾಟರಿ ಬಾಳಿಕೆ, ಮತ್ತು ಮೆಮರಿ ಕೊರತೆಯಂತಹ ಸಾಕಷ್ಟು ಸವಾಲುಗಳಿವೆ. ಇಂದಿನ ಅತ್ಯಾಧುನಿಕ ಎಐ ಮಾದರಿಗಳಿಗೆ ಇನ್ನೂ ಬೃಹತ್ ಕಂಪ್ಯೂಟಿಂಗ್ ಸಂಪನ್ಮೂಲಗಳ ಅಗತ್ಯವಿದ್ದು, ಅದನ್ನು ವೈಯಕ್ತಿಕ ಉಪಕರಣಗಳು ಈಗಿನ ಮಟ್ಟಿಗೆ ಒದಗಿಸಲು ಸಾಧ್ಯವಿಲ್ಲ.

ಆದ್ದರಿಂದ, ಶಕ್ತಿಶಾಲಿ ಆನ್ ಡಿವೈಸ್ ಎಐ ಅಭಿವೃದ್ಧಿ ಇನ್ನೂ ಆಗಿಲ್ಲ ಎಂದು ಶ್ರೀನಿವಾಸ್ ಹೇಳಿದ್ದಾರೆ. ಆದರೆ, ಒಂದು ವೇಳೆ ಅಂತಹ ಅಸಾಧಾರಣ ಸಾಧನೆ ನೆರವೇರಿದರೆ, ಅದು ಎಐ ವ್ಯವಸ್ಥೆ ಕಾರ್ಯಾಚರಿಸುವ ವಿಧವನ್ನೇ ಸಂಪೂರ್ಣವಾಗಿ ಬದಲಿಸಲಿದೆ. ಇಂತಹ ಬೆಳವಣಿಗೆ ಸಾಧ್ಯವಾದರೆ, ಮೇನ್ ಫ್ರೇಮ್ಸ್ ಬದಲಾಗಿ ವೈಯಕ್ತಿಕ ಕಂಪ್ಯೂಟರ್ಗಳು ಬಂದಂತಹ, ಡೆಸ್ಕ್ಟಾಪ್ ಕಂಪ್ಯೂಟರ್ಗಳ ಕೆಲಸವನ್ನು ಸ್ಮಾರ್ಟ್ ಫೋನ್ಗಳು ಮಾಡಿದಾಗ ಉಂಟಾದಂತಹ ಬದಲಾವಣೆಯೇ ಕಂಡುಬರಲಿದೆ. ಆಗ ಅತ್ಯಂತ ಶಕ್ತಿಶಾಲಿ ತಂತ್ರಜ್ಞಾನ ನಿಜಕ್ಕೂ ಹಗುರವೂ, ವೈಯಕ್ತಿಕವೂ ಆಗಲಿದೆ.

ಉದ್ಯಮದ ಮೇಲೆ ಇದರ ಪರಿಣಾಮವೇನು?

ಇಂತಹ ಬೆಳವಣಿಗೆ ಸಾಧ್ಯವಾದರೆ, ಅದರ ಪರಿಣಾಮಗಳು ಅಷ್ಟೇ ಗಂಭೀರವಾಗಿರಲಿವೆ. ಒಂದು ವೇಳೆ ಶ್ರೀನಿವಾಸ್ ನುಡಿದಿರುವ ಭವಿಷ್ಯ ನಿಜವಾದರೆ, ಅದು ಎಐ ಉದ್ಯಮದ ಮೂಲಭೂತ ಮರು ವಿನ್ಯಾಸಕ್ಕೆ ಕಾರಣವಾಗಲಿದೆ. ಡೇಟಾ ಸೆಂಟರ್ಗಳ ಮೂಲಭೂತ ವ್ಯವಸ್ಥೆಗಳ ಮೇಲೆ ಅಪಾರ ಹೂಡಿಕೆ ಮಾಡಿರುವ ಕಂಪನಿಗಳು ತಮ್ಮ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಬೇಕಾಗಿ ಬರಬಹುದು. ಆಗ ಎಐ ಉದ್ಯಮದಲ್ಲಿ ಚಿಪ್ ಉತ್ಪಾದಕರು ಮತ್ತು ಉಪಕರಣ ನಿರ್ಮಾಪಕರು ಹೊಸ ಶಕ್ತಿಶಾಲಿ ಆಟಗಾರರಾಗಿ ಹೊರಹೊಮ್ಮಲಿದ್ದಾರೆ.

ಇನ್ನು ಸಾಮಾನ್ಯ ಬಳಕೆದಾರರಿಗೆ ಏನು ಪ್ರಯೋಜನ? ಅವರಿಗೆ ಎಐ ಅಸಿಸ್ಟೆಂಟ್ಗಳು ಆಫ್ಲೈನ್ನಲ್ಲೂ ಕಾರ್ಯಾಚರಿಸಿ, ತಕ್ಷಣವೇ ಪ್ರತಿಕ್ರಿಯೆ ನೀಡಿ, ಖಾಸಗಿತನವನ್ನು ಕಾಪಾಡಿ, ಮಾಹಿತಿಗಳನ್ನು ಕಾರ್ಪೋರೇಟ್ ಸರ್ವರ್ಗಳಿಗೆ ಕಳುಹಿಸದೆಯೇ ವೈಯಕ್ತಿಕ ಅವಶ್ಯಕತೆಗಳನ್ನು ಅರ್ಥ ಮಾಡಿಕೊಳ್ಳಬಲ್ಲವು.

ಈಗ ಎದುರಿಗಿರುವ ಪ್ರಶ್ನೆ ಇಂತಹ ಬದಲಾವಣೆ ಆಗಬಹುದೇ ಎನ್ನುವುದಲ್ಲ. ಬದಲಿಗೆ, ಇಂತಹ ಬದಲಾವಣೆ ಉಂಟಾದಾಗ, ಯಾವೆಲ್ಲ ಕಂಪನಿಗಳು ಇದಕ್ಕೆ ಸಿದ್ಧವಾಗಿರಬಲ್ಲವು ಎನ್ನುವುದಾಗಿದೆ.

ಲೇಖಕರು: ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.