ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಪೂರ್ಣಗೊಳಿಸಿರುವ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಸುದೀರ್ಘ ಅವಧಿಯ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನೂ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಜನವರಿ 7ನೇ ತಾರೀಖಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಏಳು ವರ್ಷ 240 ದಿನಗಳಷ್ಟು ಅವಧಿಯನ್ನು ಕ್ರಮಿಸಿದ ದಾಖಲೆಯನ್ನೂ ನಿರ್ಮಿಸಲಿದ್ದಾರೆ. ತನ್ಮೂಲಕ ಡಿ. ದೇವರಾಜ ಅರಸು ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು, ಮುನ್ಸಾಗಿದ್ದಾರೆ.

ಕರ್ನಾಟಕದಲ್ಲಿ ಸುದೀರ್ಘ ಅವಧಿ ಆಡಳಿತ ನಡೆಸಿದವರು ವಿರಳ. ಬಹುತೇಕರು ಐದು ವರ್ಷ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅನೇಕರು ಎರಡು– ಮೂರು ಬಾರಿ ಮುಖ್ಯಮಂತ್ರಿಯಾದರೂ ಒಂದು ವಿಧಾನಸಭೆಯ ಅವಧಿಯಾದ ಐದು ವರ್ಷ ಅಧಿಕಾರದಲ್ಲಿರಲು ಸಾಧ್ಯವಾಗಲಿಲ್ಲ. ಹಾಗೇ ಅವಧಿಯಲ್ಲಿ, ಜನ ಕಲ್ಯಾಣ ಯೋಜನೆಗಳ ಜಾರಿಯಲ್ಲಿ, ಉತ್ತಮ ಆಡಳಿತ ನೀಡುವಲ್ಲಿ ದಾಖಲೆ ಮಾಡಿದವರು ಹಿಂದುಳಿದವರ ಅರಸ ಎಂದೇ ಪ್ರಸಿದ್ಧರಾದ ಡಿ. ದೇವರಾಜ ಅರಸು ಅವರು 1972ರಿಂದ 1980ರವರೆಗೆ ಏಳು ವರ್ಷ 239 ದಿನಗಳ ಆಡಳಿತವನ್ನು ನಡೆಸಿದ್ದರು. ಕರ್ನಾಟಕ ಇತಿಹಾಸದಲ್ಲಿ ದಾಖಲಾದ ಅರಸುರವರ ಸಾಧನೆಯನ್ನು ಜನವರಿ 6ಕ್ಕೆ ಸರಿಗಟ್ಟಿರುವ ಸಿದ್ದರಾಮಯ್ಯ, ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದ್ದಾರೆ.

ಅವರ ಕಾಲದಲ್ಲಿ ಕೊಡುಗೆಗಳು, ಜನಪರವಾದ ಕಾಯ್ದೆಗಳು, ಸಾಮಾಜಿಕ ನ್ಯಾಯದ ಪರವಾದ ದೃಢವಾದ ಹೆಜ್ಜೆಗಳನ್ನು ಇಟ್ಟ ಕಾರಣಕ್ಕೆ ಅರಸು ಅವರು ಇಂದಿಗೂ ಜನರ ಹೃದಯದಲ್ಲಿ ಇದ್ದಾರೆ. ಸಕಲ ಜಾತಿಯವರು ಪ್ರೀತಿಸುವ, ಸದಾ ನೆನೆಯುವ ಅರಸರ ವ್ಯಕ್ತಿತ್ವ ಎಂದಿಗೂ ಅಜರಾಮರ.

ಒಂದೇ ಜಿಲ್ಲೆಯವರಾಗಿ, ಹಿಂದುಳಿದ ಸಮುದಾಯವನ್ನು ಪ್ರತಿನಿಧಿಸುವವರಾಗಿ, ಸಾಮಾಜಿಕ ನ್ಯಾಯದ ಬಗೆಗಿನ ಬದ್ಧತೆಯಿಂದಾಗಿ ದೇವರಾಜ ಅರಸು ಅವರಿಗೆ ಹೋಲಿಸಬಹುದಾದ ವ್ಯಕ್ತಿತ್ವ ಸಿದ್ದರಾಮಯ್ಯನವರದ್ದು. ಹಾಗಾಗಿ, ಅವರ ಅಭಿಮಾನಿಗಳು, ಹೊಗಳು ಭಟರು ‘ಆಧುನಿಕ ಅರಸು’ ಎಂದು ಸಿದ್ದರಾಮಯ್ಯನವರನ್ನು ಬಣ್ಣಿಸುವುದುಂಟು. ಅವಧಿಯಲ್ಲೇನೋ ಸಿದ್ದರಾಮಯ್ಯನವರು ಅರಸು ಅವರನ್ನು ಹಿಂದಿಕ್ಕಿದರು. ಆದರೆ, ಕೊಡುಗೆ, ಸಾಧನೆ ಹಾಗೂ ವ್ಯಕ್ತಿತ್ವದಲ್ಲಿ ಅರಸರಿಗೆ ಸರಿಸಮಾನರು ಎಂದು ಹೋಲಿಸಬಹುದೇ ಎಂದು ನೋಡಿದರೆ, ಅರಸರ ಮಟ್ಟಕ್ಕೆ ಸಿದ್ದರಾಮಯ್ಯನವರು ಏರಿಲ್ಲವೆಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಈಗಿನ ಆಡಳಿತ ವೈಖರಿ ನೋಡಿದರೆ, ಅವರು ತಮ್ಮ ಅವಧಿ ಪೂರ್ಣಗೊಳಿಸಿದರೂ ಆ ಸಾಧನೆಯ ಶಿಖರವನ್ನು ತಲುಪುವುದು ಕಷ್ಟವೆಂದೇ ತೋರುತ್ತದೆ.

ಹಾಗಾಗಿಯೇ ಸಿದ್ದರಾಮಯ್ಯನವರೂ ಸಹ, ‘ಅರಸರಿಗೂ ನನಗೆ ಹೋಲಿಕೆ ಇಲ್ಲ. ಅವಧಿಯಲ್ಲಷ್ಟೇ ಅವರ ದಾಖಲೆಯನ್ನು ಮುರಿದಿದ್ದೇನೆ. ದಾಖಲೆ ಇರುವುದೇ ಸರಿಗಟ್ಟುವುದಕ್ಕೆ. ನನ್ನ ದಾಖಲೆಯನ್ನು ಯಾರೂ ಮುರಿಯಬಹುದು. ಸಚಿನ್ ತೆಂಡಲ್ಕೂರ್ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿಲ್ಲವೇ’ ಎಂದು ಜನವರಿ 5ರಂದು ಹೇಳಿದ್ದಿರಬಹುದು. ಬಹುಶಃ ಅವರಿಗೂ ಕೂಡ ಅರಸು ಅವರಷ್ಟು ಸಾಧನೆ ತಮ್ಮಿಂದ ಸಾಧ್ಯವಾಗಿಲ್ಲ ಎಂಬ ಭಾವನೆ ಅವರಲ್ಲಿ ಇದ್ದಿರಬಹುದು.
.Karnataka CM: ದೇವರಾಜ ಅರಸು ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ.ಸಿಎಂ ಸಿದ್ದರಾಮಯ್ಯ ಸಾವಿರ ದಿನ: ರಾಜಕೀಯ ಪಯಣದ ಹಾದಿ ಚಿತ್ರಗಳಲ್ಲಿ.
ಅರಸು ಸಾಧನೆ ಪರ್ವ...

ಸ್ವಾತಂತ್ರ್ಯ ಚಳವಳಿಯ ಪಸೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಿರದ, ಸಮಾಜವಾದಿ ಆಶಯಗಳು ಇನ್ನೂ ನಮ್ಮ ಸಮಾಜದಲ್ಲಿ ಗಟ್ಟಿಗೊಳ್ಳುತ್ತಿದ್ದ ಕಾಲಮಾನದಲ್ಲಿ ದೇವರಾಜ ಅರಸು ಅವರು ಆಡಳಿತದ ಚುಕ್ಕಾಣಿ ಹಿಡಿದರು. ಸ್ವಾತಂತ್ರ್ಯ ಬಂದರೂ ಆಡಳಿತದ ಚುಕ್ಕಾಣಿ ಆ ಕಾಲಕ್ಕೂ ಕರ್ನಾಟಕದಲ್ಲಿ ಬಲಿಷ್ಠ ಹಾಗೂ ಪ್ರಭಾವಿಯಾಗಿದ್ದ ಒಕ್ಕಲಿಗ, ರೆಡ್ಡಿ ಹಾಗೂ ಲಿಂಗಾಯತರ ಹಿಡಿತದಲ್ಲೇ ಇತ್ತು. ಅದಿನ್ನೂ ದಲಿತರಿಗೆ ಹೋಗಲಿ, ಸಮಾಜದಲ್ಲಿ ತುಸು ಮೇಲುಸ್ತರ ಎನ್ನಬಹುದಾದ ಹಿಂದುಳಿದವರಿಗೂ ಎಟುಕಿರಲಿಲ್ಲ. ಸಂಖ್ಯೆಯಲ್ಲಿ ಸಣ್ಣ ಸಮುದಾಯವಾದರೂ ಹಿಂದುಳಿದ ಜಾತಿಗೆ ಸೇರಿದ್ದರೂ ಮೈಸೂರು ರಾಜ ಮನೆತನದ ಕಾರಣಕ್ಕೆ ಅರಸು ಸಮುದಾಯವು ಪ್ರಬಲವಾಗಿತ್ತು. ದೇವರಾಜ ಅರಸು ಬಡವರೂ ಆಗಿರಲಿಲ್ಲ. ಹೀಗಾಗಿಯೇ, ಕರ್ನಾಟಕದ ನೆಲದಲ್ಲಿ ಅರಸು ಅವರು ತಮ್ಮದೇ ಆದ ವಿಶಿಷ್ಟ ರಾಜಕಾರಣವೊಂದನ್ನು ನಡೆಸಲು, ಅದನ್ನು ರೂಢಿಸಲು ಸಾಧ್ಯವಾಯಿತು.

ತಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡ ದೇವರಾಜ ಅರಸು, ಕರ್ನಾಟಕದ ರಾಜಕಾರಣದಲ್ಲಿ ಹೊಸ ಭಾಷ್ಯವನ್ನೇ ಬರೆದರು. ವಿಧಾನಸಭೆಯ ಟಿಕೆಟ್ ನೀಡುವಾಗಲೇ ಪ್ರಬಲ ಜಾತಿಗಳಿಗೆ ಮಾತ್ರವಲ್ಲದೇ, ಹಿಂದುಳಿದವರು, ಅತಿ ಹಿಂದುಳಿದವರು, ಪರಿಶಿಷ್ಟ ಸಮುದಾಯದವರು, ಬ್ರಾಹ್ಮಣರು ಹೀಗೆ ಎಲ್ಲರನ್ನೂ ಒಳಗೊಂಡ ರಾಜಕಾರಣವನ್ನು ನಡೆಸಿದರು. ಅರಸು ಗುರುತಿಸಿ ರಾಜಕಾರಣಕ್ಕೆ ಕರೆತಂದವರು ಮುಂದೆ ಕರ್ನಾಟಕವನ್ನು ಬಹುಕಾಲ ಮುನ್ನಡೆಸಿದರು. ಅರಸು ಅವರು ಕೊಟ್ಟ ಮೀಸಲಾತಿಯ ಸೌಲಭ್ಯದಿಂದಾಗಿ, ಇಂದು ಹಿಂದುಳಿದ ಸಮುದಾಯದ ನಾಯಕರು ರಾಜಕೀಯದ ಮುಂಚೂಣಿಗೆ ಬರಲು ಸಾಧ್ಯವಾಯಿತು.

ಹಾಗೆ ಗುರುತಿಸಿ ಮುಂಚೂಣಿಗೆ ಕರೆತಂದವರಲ್ಲಿ ವೀರಪ್ಪ ಮೊಯಿಲಿ, ಎಚ್. ವಿಶ್ವನಾಥ್, ಕೆ.ಆರ್. ರಮೇಶ್ ಕುಮಾರ್, ಬಿ. ಸುಬ್ಬಯ್ಯ ಶೆಟ್ಟಿ, ಎನ್. ಧರಂ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಹೀಗೆ ನೂರಾರು ಜನರನ್ನು ಹೆಸರಿಬಹುದು. ಆದರೆ, ಅರಸು ನಂಬಿದ ಅನೇಕರು ಕೊನೆಗೆ ಅವರ ಜತೆಗೆ ಇರಲಿಲ್ಲವೆಂಬುದು ಸತ್ಯ.

ಅರಸು ತಂದ ಸುಧಾರಣೆಗಳು ಆಯಾ ಕಾಲದ ತುರ್ತುಗಳು ಆಗಿದ್ದವು. ದೇಶದಲ್ಲೇ ಪ್ರಸಿದ್ಧ ಹೋರಾಟವಾದ ‘ಉಳುವವನೇ ಭೂ ಒಡೆಯ’ ಎಂಬ ಘೋಷಣೆಯ ಕಾಗೋಡು ಚಳವಳಿಯ ಕಾವು ಕರ್ನಾಟಕದಲ್ಲಿ ಆರಿರಲಿಲ್ಲ. ಅದರ ಅನಿವಾರ್ಯವನ್ನು ಅರಿತಿದ್ದ ಉಳುವವರಿಗೆ ಭೂಮಿಯನ್ನು ನೀಡಲೇಬೇಕೆಂಬ ಸಂಕಲ್ಪ ತೊಟ್ಟಿದ್ದ ಅರಸು ಅವರು ದೇಶದಲ್ಲೇ ಮೊದಲ ಬಾರಿಗೆ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದರು. ಪ್ರಬಲ ಜಾತಿಗಳ ವಿರೋಧದ ಮಧ್ಯೆಯೂ ತಮ್ಮ ಪಕ್ಷದ ವರಿಷ್ಠರನ್ನು ಒಪ್ಪಿಸಿ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಿದರು. ಇಂದಿಗೂ ಕರ್ನಾಟಕದ ಉದ್ದಗಲಕ್ಕೆ ಒಕ್ಕಲಿಗರು, ಹಿಂದುಳಿದವರು, ಕೆಲವು ಬ್ರಾಹ್ಮಣರು ಸೇರಿದಂತೆ ಲಕ್ಷಾಂತರ ಮಂದಿ ಜಮೀನು ಹೊಂದಿ, ಈಚೆಗಿನ ವರ್ಷಗಳಲ್ಲಿ ಜಮೀನ್ದಾರುರಾಗಿ ಪರಿವರ್ತನೆಯಾಗಿದ್ದಾರೆ ಎಂದರೆ ಅದಕ್ಕೆ ಅರಸು ಅವರ ಕಾಯ್ದೆಯೇ ಕಾರಣ.

ಹಾಗೆಯೇ, ಎಂತಹ ವಿರೋಧವನ್ನೂ ಲೆಕ್ಕಿಸದೇ ಎಲ್.ಜಿ. ಹಾವನೂರು ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿದ ಅರಸು ಅವರು ನಿಗದಿತ ಅವಧಿಯಲ್ಲಿಯೇ ಅದರ ವರದಿ ಪಡೆದು, ಅನುಷ್ಠಾನವನ್ನೂ ಮಾಡಿದರು. ಹಿಂದುಳಿದ ಸಮುದಾಯದವ ಶಿಕ್ಷಣಕ್ಕಾಗಿ ನೂರಾರು ಕಡೆಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಹಾವನೂರು ಆಯೋಗದ ಅನುಷ್ಠಾನದಿಂದಾಗಿ ಮೀಸಲಾತಿ ಸೌಲಭ್ಯವೂ ಸಿಕ್ಕಿತು. ಇದರ ಫಲವನ್ನು ರಾಜಕಾರಣ, ಉದ್ಯೋಗ, ಉದ್ದಿಮೆಗಳಲ್ಲಿ ಈಗ ನೋಡುತ್ತಿದ್ದೇವೆ. ಅದು ಅರಸರ ಅಪ್ರತಿಮ ಕೊಡುಗೆ.

ಸಮಾಜದ ಅನಿಷ್ಟಗಳಾಗಿದ್ದ, ಶೋಷಿತರನ್ನು ಅವಮಾನದ ಗುಂಡಿಯಲ್ಲಿ ದೂಡಲ್ಪಡುತ್ತಲೇ ಇದ್ದ ಅನೇಕ ಅಮಾನವೀಯ ಪದ್ಧತಿಗಳಿಗೆ ಅರಸರು ಕಡಿವಾಣ ಹಾಕಿದರು. ಇದು ಅವರ ಸಾಮಾಜಿಕ ನ್ಯಾಯದ ಬಗೆಗಿನ ಕಳಕಳಿಗೆ, ಮನುಷ್ಯತ್ವವನ್ನು ಗೌರವಿಸಬೇಕೆಂಬ ಅವರ ಬದ್ಧತೆಗೆ ಸಾಕ್ಷಿ.

ಪ್ರಬಲ ಜಾತಿಗಳವರ ಮನೆಯಲ್ಲಿನ ಮಲ ಬಳಿಯುವ ಕೆಲಸವನ್ನು ತಳ ಸಮುದಾಯದ ಜಾತಿಗಳು ಮಾಡಲೇಬೇಕಾಗಿತ್ತು. ಅಂತಹ ಭೀಕರ ಎನ್ನಿಸುವ ಮಲ ಹೊರುವ ಪದ್ಧತಿಯನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ಅರಸರು ಕೈಗೊಂಡರು.

ಹಾಗೆಯೇ, ಜೀತ ಪದ್ಧತಿ ನಿಷೇಧಕ್ಕೆ ಕಾಯ್ದೆ ಜಾರಿಗೊಳಿಸಿ ಅದನ್ನು ಅನುಷ್ಠಾನ ಮಾಡಿದರು.

ಈಗಲೂ ಜೀವಂತವಾಗಿರುವ ಬಡ್ಡಿ ದಂಧೆ ಹಾಗೂ ಸಾಲ ಪಡೆದವರನ್ನು ಹಿಂಸಿಸುವ ಪದ್ಧತಿಯನ್ನು ಆಗಲೇ ನಿರ್ಬಂಧಿಸಲು ಅರಸು ಅವರು ಪಣತೊಟ್ಟಿದ್ದರು. ಹೀಗಾಗಿಯೇ, ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಿ ಬಡ್ಡಿಕೋರರನ್ನು ಹೆಡೆ ಮುರಿ ಕಟ್ಟಲು ಕಾನೂನಿನ ಬಲ ನೀಡಿದ್ದರು.
.ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವಿದೆ, ಇನ್ನು ಹೈಕಮಾಂಡ್ ತೀರ್ಮಾನ: ಸಿದ್ದರಾಮಯ್ಯ .ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಗ್ರಾಮಸ್ಥರಿಗೆ ನಾಟಿಕೋಳಿ ಔತಣಕೂಟ ನಾಳೆ.
ಸಿದ್ದರಾಮಯ್ಯ ಪರ್ವ...

ಅರಸು ಆರಂಭಿಸಿದ ಉನ್ನತ ಪರಂಪರೆಯನ್ನು ಕರ್ನಾಟಕದಲ್ಲಿ ಅನೇಕರು ಮುಂದುವರಿಸಿದ್ದಾರೆ. ಆ ಪೈಕಿ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಅನೇಕ ಜನಪರ ಕಾರ್ಯಕ್ರಮಗಳು ಹಾಗೂ ಜನಪರ ಕಾಯ್ದೆಗಳು ಜಾರಿಯಾದವು.

ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಅರಸು ಅವರಂತೆಯೇ ಅನುಷ್ಠಾನ ಮಾಡಿದವರು ಮತ್ತೊಬ್ಬ ಹಿಂದುಳಿದ ನಾಯಕರ ಎಸ್. ಬಂಗಾರಪ್ಪನವರು. ಅವರು ತಂದ ಅನೇಕ ಯೋಜನೆಗಳು ಈಗಲೂ ಜನಪ್ರಿಯವಾಗಿವೆ. ಅದೇ ಮಾದರಿಯಲ್ಲಿ ಬಡವರು, ಶೋಷಿತರ ಪರ ಕೆಲವು ಯೋಜನೆಗಳನ್ನು ಕೊಟ್ಟವರು ಬಿ.ಎಸ್. ಯಡಿಯೂರಪ್ಪ.

ಇವರೆಲ್ಲ ದಾಖಲೆಯನ್ನೂ ಮುರಿದು, ಸಾಮಾಜಿಕ ನ್ಯಾಯಕ್ಕೆ ಅರಸುರವರು ಕೊಟ್ಟಂತಹ ಭದ್ರ ಬುನಾದಿಯ ಮೇಲೆ ಸುಂದರ ಸೌಧ ನಿರ್ಮಿಸಲು ಹೊರಟವರು ಸಿದ್ದರಾಮಯ್ಯನವರು. ಆದರೆ, ಅರಸರ ಕಾಲಕ್ಕೂ ಈಗಿನ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅರಸು ತಮ್ಮ ಬಲದ ಮೇಲೆ ಆಡಳಿತ ನಡೆಸಿದರೆ, ಸಿದ್ದರಾಮಯ್ಯ ತಮ್ಮ ಚಾತುರ್ಯದ ರಾಜಕಾರಣ ಹಾಗೂ ಅದೃಷ್ಟ ಬಲದ ಮೇಲೆ ಆಡಳಿತವನ್ನು ಸುದೀರ್ಘ ಅವಧಿ ನಡೆಸುತ್ತಿದ್ದಾರೆ.

ಅರಸರ ಕಾಲದಲ್ಲಿ ಸಮಾಜವಾದದ ಪಸೆ ಇನ್ನೂ ಇತ್ತು. ಸ್ವಾತಂತ್ರ್ಯದ ಆಶಯಗಳು ಇನ್ನೂ ಮರೆಯಾಗಿರಲಿಲ್ಲ. ಕಾಂಗ್ರೆಸ್ ಒಂದೇ ಇಡೀ ದೇಶದಲ್ಲಿ ಬಲವಾಗಿದ್ದ ಪಕ್ಷ. ಎಡ ಪಕ್ಷಗಳು ಹಲವು ರಾಜ್ಯಗಳಲ್ಲಿ ಪ್ರಬಲವಾಗಿದ್ದರೂ ಕರ್ನಾಟಕದಲ್ಲಿ ಅಂತಹ ನೆಲೆ ಇರಲಿಲ್ಲ. ಇಂದಿರಾಗಾಂಧಿಯವರ ಕಾಲದಲ್ಲಿ ಘೋಷಿತವಾಗಿ ತುರ್ತು ಪರಿಸ್ಥಿತಿಯನ್ನು, ಜನರ ಮೇಲೆ ದಬ್ಬಾಳಿಕೆ ಮಾಡಲು ಅರಸು ಅವರು ಬಳಸಿಕೊಳ್ಳಲಿಲ್ಲ. ಅದರ ಬದಲು ತುರ್ತು ಪರಿಸ್ಥಿತಿಯ ಅವಕಾಶವನ್ನು ಬಡವರ, ದಲಿತ, ಶೋಷಿತರ ಕಲ್ಯಾಣಕ್ಕಾಗಿ ಬಳಸಿಕೊಂಡರು. ಭೂ ಸುಧಾರಣೆ ಜಾರಿಗೆ, ಮಲ ಹೊರುವುದು, ಜೀತ ಪದ್ಧತಿಯ ನಿಷೇಧಕ್ಕೆ ಸಮರ್ಪಕವಾಗಿ ಬಳಸಿದರು. ಹೀಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಿದರು. ಆ ಕಾಲದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದವರು ಎಚ್.ಡಿ. ದೇವೇಗೌಡರಂತಹ ಘಟಾನುಘಟಿ ನಾಯಕರು. ಹೆಜ್ಜೆ ಹೆಜ್ಜೆಗೂ ಕಟ್ಟಿ ಹಾಕುತ್ತಿದ್ದ ಗೌಡರ ನಡೆಯ ಮಧ್ಯೆಯೇ ಚತುರತೆಯಿಂತ ಅರಸರು ಆಳ್ವಿಕೆ ಮಾಡಿದರು.

ಆದರೆ, ಸಿದ್ದರಾಮಯ್ಯನವರ ಕಾಲವೇ ಬೇರೆ. ಈಗ ಸಮಾಜವಾದದ ಆಶಯ ಬಾಯಲ್ಲೂ ಉಳಿದಿಲ್ಲ. ಜಾಗತೀಕರಣ, ಉದಾರೀಕರಣ ತಂದಿರುವ ಸುಧಾರಣೆಗಳಿಂದಾಗಿ ಜನರ ಆಲೋಚನಾ ವಿಧಾನಗಳೇ ಬದಲಾಗಿವೆ. ರಾಜಕೀಯವೂ ಕೇಸರಿಕರಣಗೊಂಡ ಪರಿಣಾಮ, ಜನ ಕಲ್ಯಾಣದ ಆಲೋಚನೆ, ಚಿಂತನೆ ಹಾಗೂ ಕಾರ್ಯಕ್ರಮಗಳನ್ನೇ ಲೇವಡಿ ಮಾಡುವ ಪರಿಸ್ಥಿತಿಗೆ ಭಾರತ ತಲುಪಿದೆ. ಇದರ, ಜತೆಗೆ ದೇಶದಲ್ಲಿ ಪ್ರಬಲವಾಗಿರುವ ಬಿಜೆಪಿ ಹಾಗೂ ನೇತಾರರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಬಲಿಷ್ಠ ಆಡಳಿತ ಇದೆ. ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನೂ ತನ್ನ ಕಪಿಮುಷ್ಟಿಯಲ್ಲಿಟ್ಟು ತನಗೆ ಬೇಕಾದಂತೆ ಆಡಿಸುವ ಕೆಲಸವನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ.

ಇಂತಹ ಹೊತ್ತಿನೊಳಗೆ ಎರಡು ಬಾರಿ ಮುಖ್ಯಮಂತ್ರಿಯಾಗುವುದು ಸುಲಭವಾದುದೇನಲ್ಲ. ಹಾಗೆಯೇ, ಕೇಂದ್ರ ಸರ್ಕಾರದಿಂದ ನಿರೀಕ್ಷಿತ ನೆರವು ಸಿಗುತ್ತಿಲ್ಲ.

ಆದರೆ, 2014ರ ಬಳಿಕ ಸೋತು ಸುಣ್ಣವಾದ ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿರುವುದು, ರಾಜ್ಯದಲ್ಲಿ ಪ್ರಬಲ ವಿರೋಧ ಪಕ್ಷ ಇಲ್ಲದೇ ಇರುವುದು ಸಿದ್ದರಾಮಯ್ಯನವರಿಗೆ ವರದಾನವಾಗಿದೆ. ಇದೊಂತರ ಅವರ ಅದೃಷ್ಟವೂ ಹೌದು.
.ದಾಖಲೆ ಮುರಿಯುತ್ತಿದ್ದೇನೆ, ಅರಸುಗೂ ನನಗೂ ಹೋಲಿಕೆ ಇಲ್ಲ: ಸಿದ್ದರಾಮಯ್ಯ.ರಾಹುಲ್ ಗಾಂಧಿ ಜೊತೆ ಚರ್ಚಿಸಿ ಸಚಿವ ಸಂಪುಟ ಪುನರ್ ರಚನೆ: ಸಿದ್ದರಾಮಯ್ಯ.
ಅರಸು ಹಾದಿಯಲ್ಲಿ ಸಿದ್ದರಾಮಯ್ಯ...

ಸಿದ್ದರಾಮಯ್ಯ 2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮೊದಲು ಮಾಡಿದ ಕೆಲಸವೆಂದರೆ ಬಡವರಿಗೆ ತಲಾ ₹1ರ ದರದಲ್ಲಿ 10 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿ. ಇದರ ಜತೆಗೆ ವಿವಿಧ ತಳ ಸಮುದಾಯಗಳು ಸಹಕಾರ ಸಂಘದಲ್ಲಿ ಮಾಡಿದ ಸಾಲದ ಬಡ್ಡಿ ಮನ್ನಾ ಮಾಡುವ ಯೋಜನೆಯನ್ನು ಜಾರಿಗೊಳಿಸಿದರು. ಇದು ಅವರ ಕಳಕಳಿಗೆ ನಿದರ್ಶನ.

ಅದಾದ ಬಳಿಕ ಕ್ಷೀರ ಭಾಗ್ಯ, ಕೃಷಿ ಭಾಗ್ಯ ಹೀಗೆ ಹಲವು ಭಾಗ್ಯಗಳನ್ನು ನೀಡಿದರು. ಹಾಸ್ಟೆಲ್ ಸೌಲಭ್ಯ ಸಿಗದ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲು ವಿದ್ಯಾಸಿರಿ ಯೋಜನೆ ಅನುಷ್ಠಾನ ಮಾಡಿದರು. ಇದು, ಅನೇಕ ವಿದ್ಯಾರ್ಥಿಗಳಿಗೆ ನೆರವು ನೀಡಿತು. ಅನ್ನಭಾಗ್ಯ ಯೋಜನೆಯಂತೂ ರಾಜ್ಯದಲ್ಲಿ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಅವರ ಆಶಯಕ್ಕೆ ತಕ್ಕನಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ಅಕ್ಕಿ ಕೊಟ್ಟರೆ ಅನ್ನ ಮಾಡಿಕೊಂಡು ತಿನ್ನುವ ಅವಕಾಶವಾದರೂ ಇರುತ್ತದೆ. ಆದರೆ, ನಗರ ಪ್ರದೇಶಗಳಲ್ಲಿ ಜನತೆ ಏನು ಮಾಡಬೇಕು ಎಂಬುದಕ್ಕೆ ಪರಿಹಾರ ಹುಡುಕಿದ ಅವರು, ಇಂದಿರಾ ಕ್ಯಾಂಟೀನ್ ಆರಂಭಿಸಿ, ಅತಿ ಕಡಿಮೆ ದರದಲ್ಲಿ ತಿಂಡಿ– ಊಟದ ವ್ಯವಸ್ಥೆ ಮಾಡಿದರು.

ಮೌಢ್ಯ ನಿಷೇಧ ಕಾಯ್ದೆ ಹಾಗೂ ವೈಭವದ ಮದುವೆ ನಿರ್ಬಂಧ ಕಾಯ್ದೆ ಜಾರಿಗೆ ತರುವ ಮಹತ್ವದ ಹೆಜ್ಜೆ ಇಟ್ಟರು. ಆದರೆ, ಸಚಿವ ಸಂಪುಟದಲ್ಲಿ ಅವಕಾಶ ಸಿಗದೇ ಇರುವುದರಿಂದ ಅದು ಅನುಷ್ಠಾನಗೊಳ್ಳಲಿಲ್ಲ.

ಅರಸು ಅವರು ಹಿಂದುಳಿದ ವರ್ಗವರಿಗೆ ಆಯೋಗ ರಚಿಸಿ ವರದಿ ಪಡೆದಂತೆಯೇ ದೇಶದಲ್ಲೇ ಮೊದಲ ಬಾರಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ದೊಡ್ಡ ಕೈಂಕರ್ಯವನ್ನು ಕೈಗೊಂಡರು. ಅದು ಪೂರ್ಣಗೊಂಡಿತು. ಆದರೆ, ಅದನ್ನು ಸ್ವೀಕರಿಸಲು ತಮ್ಮ ಸಚಿವ ಸಂಪುಟದ ಸದಸ್ಯರೇ ಅವಕಾಶ ಕೊಡಲಿಲ್ಲ ಎಂಬ ಮಾತುಗಳಿವೆ.

ಹೀಗಾಗಿ, ಅದು ಮೂಲೆ ಸೇರಿತು. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ಮಾನ ನೀಡುವ ಮಹತ್ವದ ಆಲೋಚನೆಯು ಅವರಿಗೆ ಮುಳುವಾಗಿಯೇ ಪರಿಣಮಿಸಿತು.

ಆದರೆ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಿದ ಸಾಧನೆ ಇತಿಹಾಸದ ಪುಟ ಸೇರಿತು. ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಉಮೇದಿನಲ್ಲಿದ್ದರೂ ರಾಜ್ಯದ ಜನ ಅವರಿಗೆ ಅನುಕೂಲಕಾರಿ ತೀರ್ಪು ಕೊಡಲಿಲ್ಲ.

2023ರ ಚುನಾವಣೆಯಲ್ಲಿ ಅವರು ಮಹತ್ವದ ತಯಾರಿಯನ್ನೇ ಮಾಡಿಕೊಂಡಿದ್ದರು. ಅದಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಜತೆಯಾದರು. ಪಕ್ಷದ ಹೈಕಮಾಂಡ್ ಕೂಡ ನೆರವಿಗೆ ಬಂತು. ಚುನಾವಣೆ ಪೂರ್ವದಲ್ಲಿ ಘೋಷಿಸಿದ ಪಂಚ ಗ್ಯಾರಂಟಿಗಳು ಕಾಂಗ್ರೆಸ್ನ ಕೈಹಿಡಿದವು. ಹಿಂದೆ ಅಧಿಕಾರದಲ್ಲಿ ಬಿಜೆಪಿ ಅವಧಿಯ ಸರ್ಕಾರ ಕೆಟ್ಟ ದಿನಗಳನ್ನು ನೋಡಿದ್ದ ಜನ ಕಾಂಗ್ರೆಸ್ಗೆ ಮತ ಹಾಕಿದರು.

ಹೀಗಾಗಿ, ಸಿದ್ದರಾಮಯ್ಯ ಮತ್ತೆ ಎರಡನೇ ಬಾರಿ ಆಡಳಿತದ ಚುಕ್ಕಾಣಿ ಹಿಡಿದರು. ಪಕ್ಷ ಆಶ್ವಾಸನೆ ಕೊಟ್ಟಂತೆ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದರು. ಗ್ಯಾರಂಟಿಗಳು ಜಾರಿಯಾಗುವುದಿಲ್ಲ, ಗ್ಯಾರಂಟಿಗಳಿಂದ ಕರ್ನಾಟಕ ದಿವಾಳಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೂ ಸೇರಿದಂತೆ ಬಿಜೆಪಿಯ ಕೇಂದ್ರ–ರಾಜ್ಯದ ನಾಯಕರು ಟೀಕಿಸಿದ್ದರು. ಆದರೆ, ಅದಕ್ಕೆ ಆಸ್ಪದವೇ ಕೊಡದಂತೆ ಸಮರ್ಥವಾಗಿ ಗ್ಯಾರಂಟಿಗಳನ್ನು ಜಾರಿಗೊಳಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದಾಗಿದೆ. ಈಗ ಕರ್ನಾಟಕದ ಗ್ಯಾರಂಟಿಯನ್ನೇ ಮೋದಿಯವರು ಕೇಂದ್ರದಲ್ಲಿ ಹಾಗೂ ಬಿಜೆಪಿ, ಬಿಜೆಪಿ ಜತೆಗಿನ ಸಖ್ಯದಲ್ಲಿ ಆಡಳಿತ ನಡೆಸುತ್ತಿರುವ ವಿವಿಧ ರಾಜ್ಯಗಳಲ್ಲಿ ಜಾರಿಗೊಳಿಸಿದ್ದಾರೆ. ಅಷ್ಟರಮಟ್ಟಿಗೆ ಕರ್ನಾಟಕದ ಗ್ಯಾರಂಟಿ ಅನುಕರಣೀಯವಾಗಿದೆ.

ಸರ್ಕಾರಿ ಕಾಮಗಾರಿಗಳ ಟೆಂಡರ್ನಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ, ಹಿಂದುಳಿದವರಿಗೆ ಮೀಸಲಾತಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ತಾವೇ, ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿದ್ದ ಎಸ್ಸಿಎಸ್ಪಿ ಟಿಎಸ್ಪಿ ಯೋಜನೆಗಳನ್ನು ಮುಂದುವರಿಸಿದ್ದಾರೆ. ಒಳಮೀಸಲಾತಿಗೆ ರಕ್ಷಣೆ ನೀಡಲು ಕಾಯ್ದೆ ಜಾರಿಗೊಳಿಸಿದ್ದಾರೆ.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಎರಡನೇ ಬಾರಿಗೆ ನಡೆಸಿದ್ದಾರೆ. ಅದನ್ನು ಜಾರಿ ಮಾಡುವ ಜವಾಬ್ದಾರಿಯಷ್ಟೇ ಈಗ ಅವರ ಮುಂದಿದೆ.

ಇದಲ್ಲದೇ, ಸಾಮಾಜಿಕ ಬಹಿಷ್ಕಾರ ನಿಷೇಧ, ಮರ್ಯಾದೆಗೇಡು ಹತ್ಯೆ, ದ್ವೇಷ ಭಾಷಣ ನಿರ್ಬಂಧದಂತಹ ಮಹತ್ವದ ಕಾಯ್ದೆಗಳನ್ನು ತರುವ ಪ್ರಯತ್ನ ನಡೆದಿದೆ. ಇವೆಲ್ಲವೂ ಸಿದ್ದರಾಮಯ್ಯನವರ ಹೆಗ್ಗಳಿಕೆಯೇ.

ಆದರೆ, ತಾವೇ ಮಹತ್ವಾಕಾಂಕ್ಷೆಯಿಂದ ತರಲು ಮುಂದಾಗಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಅನುಷ್ಠಾನಗೊಳಿಸಲು ಅವರಿಂದ ಸಾಧ್ಯವಾಗಲಿಲ್ಲ. ಪ್ರಬಲ ಜಾತಿಗಳು ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅದನ್ನು ತಡೆದವು. ಹಿಂದಿನ ಬಾರಿಯಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯನವರಾಗಿದ್ದರೆ ಅದಕ್ಕೆ ಬಗ್ಗುತ್ತಿರಲಿಲ್ಲ. ಈ ಬಾರಿ ತುಸು ಬಾಗಿದ್ದಾರೆ. ಹಾಗಾಗಿ, 10 ವರ್ಷವಾಯಿತು ಎಂಬ ಕಾರಣ ಮುಂದೊಡ್ಡಿ ಕಾಂತರಾಜ ವರದಿ ಹಾಗೂ ಜಯಪ್ರಕಾಶ್ ಹೆಗ್ಡೆಯವರ ಶಿಪಾರಸುಗಳನ್ನು ಅವರು ಕೈಬಿಟ್ಟರು.

ಸಿದ್ದರಾಮಯ್ಯನವರು ಮೊದಲ ಬಾರಿ ಐದು ವರ್ಷ ದಾಖಲೆ ನಿರ್ಮಿಸಿ, ಈಗ ಅರಸು ಅವರ ದಾಖಲೆ ಮುರಿದಿದ್ದಾರೆ. ಆದರೆ, ಆಗಿನ ದಕ್ಷ, ಪರಿಣಾಮಕಾರಿ ಆಡಳಿತ ಈಗಿಲ್ಲ. 10–12 ಗಂಟೆ ನಿರಂತರ ಸಭೆ ನಡೆಸಿ ಅಧಿಕಾರಿಗಳ ಚಳಿ ಬಿಡಿಸುತ್ತಿದ್ದ ಸಿದ್ದರಾಮಯ್ಯ ಈಗ ಇಲ್ಲ. ಈಗ, ಅಧಿಕಾರಿಗಳಿಗೆ, ತಮ್ಮ ಆಪ್ತರಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಹೀಗಾಗಿ, ಆಡಳಿತದಲ್ಲಿ ಬಿಗಿ ಕಡಿಮೆಯಾಗಿದೆ. ಹಿಂದಿನ ಅವಧಿಯಲ್ಲಿ ದುಬಾರಿ ಹುಬ್ಲೊ ವಾಚ್ ಹಾಗೂ ಅರ್ಕಾವತಿ ಡಿನೋಟಿಫಿಕೇಶನ್ ಮಾತ್ರ ಸದ್ದು ಮಾಡಿದ್ದವು. ಈ ಅವಧಿಯಲ್ಲಿ ಅನೇಕ ಹಗರಣಗಳು ಸದ್ದು ಮಾಡಿದವು. ಮುಡಾ ಪ್ರಕರಣದ ಆರೋಪವಂತೂ ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕಿ. ಅವರಿಗೆ ಆಘಾತ ತಂದ ಪ್ರಕರಣವೂ ಹೌದು. ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿಲ್ಲ. ಅದು ಬಿಜೆಪಿ ಅವಧಿಗಿಂತ ಜಾಸ್ತಿಯಾಗಿದೆ ಎಂಬುದು ನೇರ ಅರಿವಿಗೆ ಬರುತ್ತಿದೆ. ಆದರೆ, ಅದನ್ನು ಹೋಗಲಾಡಿಸುವ ಸೂತ್ರವಂತೂ ಸಿದ್ದರಾಮಯ್ಯನವರ ಬಳಿ ಇದ್ದಂತಿಲ್ಲ.

ಆದರೆ, ನಾಡಿನ ಬಗೆಗೆ, ಹಿಂದುಳಿದವರು–ದಲಿತರ ಬಗೆ, ಪ್ರಜಾತಂತ್ರ ಹಾಗೂ ಸಂವಿಧಾನದ ರಕ್ಷಣೆಯ ಬಗ್ಗೆ ಅವರಿಗಿರುವ ಕಳಕಳಿ ಅನನ್ಯ. ಅವರು ಮಾತಿಗೆ ನಿಂತರೆ ಅಲ್ಲಿ ನಿಶ್ಯಬ್ಧ. ಎದುರಾಳಿಗಳನ್ನೂ ಮೆಚ್ಚಿಸುವ ರೀತಿಯಲ್ಲಿ ವಿಷಯ ಮಂಡಿಸುವ ಅವರ ಪರಿಣಿತಿ ಅವರಿಗೆ ಮಾತ್ರ ಸಿದ್ಧಿಸುವಂತಹದು. ನಾಡಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅಂಕಿ ಅಂಶಗಳ ಸಮೇತ, ಯಾವುದೇ ಸಣ್ಣ ಚೀಟಿಯೂ ಇಲ್ಲದೇ ಅವರು ವಿಷಯ ಮಂಡನೆ ಮಾಡಬಲ್ಲರು. ಅಷ್ಟರಮಟ್ಟಿಗೆ ನಾಡಿನ ಸ್ಥಿತಿಗತಿ ಅವರಿಗೆ ಕರತಲಾಮಲಕ. ದಾಖಲೆ ಮುರಿಯಲಿ, ಮುರಿಯದಿರಲಿ, ಅವರೊಬ್ಬ ನಾಡು ಕಾಣುತ್ತಿರುವ ಅತ್ಯುತ್ತಮ ಸಂಸದೀಯ ಪಟು ಎಂಬುದನ್ನು ಮಾತ್ರ ಅಲ್ಲಗಳೆಯಲಾಗದು.