ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ನಟ ಕಮಲ್ ಹಾಸನ್ ಅವರ ಹೇಳಿಕೆ ಕರ್ನಾಟಕದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಆದರೆ ಅವರು ಹೊಸದಾಗಿ ಏನನ್ನೂ ಹೇಳಿಲ್ಲ. ತಮಿಳುನಾಡಿನ ಎಲ್ಲಾ ರಾಜಕೀಯ ನಾಯಕರು ಇದೇ ವಾದ ಮುಂದಿಡುತ್ತಾರೆ. ಅದು ಅವರ ನಾಡಗೀತೆಯ ಭಾಗವೂ ಆಗಿದೆ.

ಚೆನ್ನೈನಲ್ಲಿ ತಮ್ಮ ಮುಂಬರುವ ಚಿತ್ರ 'ಥಗ್ ಲೈಫ್' ನ ಆಡಿಯೊ ಬಿಡುಗಡೆಯ ಸಂದರ್ಭದಲ್ಲಿ ಕಮಲ್ ನೀಡಿದ ಸಾಂದರ್ಭಿಕ ಹೇಳಿಕೆಯನ್ನು 20ನೇ ಶತಮಾನದ ಆರಂಭದಲ್ಲಿ ಪೆರಿಯಾರ್ ನೇತೃತ್ವದ ದ್ರಾವಿಡ ಚಳವಳಿಯ ಸಂದರ್ಭದಲ್ಲಿಯೂ ಕಾಣಬಹುದು. ಒಬ್ಬ ಸಿದ್ಧಾಂತವಾದಿಯಾಗಿ ಪೆರಿಯಾರ್ (1879-1973) ದಕ್ಷಿಣದ ಭಾಷೆಗಳನ್ನು ಸಮರ್ಥಿಸಿಕೊಂಡರು. ಹಿಂದಿ ಪ್ರಾಬಲ್ಯವನ್ನು ವಿರೋಧಿಸಿದರು. ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಹಳೆ ತಮಿಳಿನಿಂದ ಹುಟ್ಟಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಪೆರಿಯಾರ್ ಸಿದ್ಧಾಂತದ ಮೇಲೆ ಸ್ಥಾಪಿತವಾದ ಡಿಎಂಕೆ ಪಕ್ಷದ ಬೆಂಬಲದೊಂದಿಗೆ ಕಮಲ್ ಈಗ ರಾಜ್ಯಸಭೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ.

ಭಾಷಾತಜ್ಞರು ಈಗ ಮೂಲ ದ್ರಾವಿಡ ಭಾಷೆ ಎಂದು ಯಾವುದನ್ನು ಕರೆಯುತ್ತಿದ್ದಾರೋ ಅದು ಪೆರಿಯಾರ್ ಹೇಳುತ್ತಿದ್ದ ಹಳೆ ತಮಿಳು ಭಾಷೆಯೇ ಆಗಿದೆ. ಇದು ಈಗಿನ ತಮಿಳು, ಕನ್ನಡ, ತೆಲುಗು, ಮಲಯಾಳಂ, ತುಳು ಇತ್ಯಾದಿ ಭಾಷೆಗಳಿಗೆ ಮೂಲವಾಗಿದೆ ಎಂಬುದು ಸಾರಸ್ವತ ಲೋಕದ ಹಲವರ ಅಭಿಪ್ರಾಯ.

ತಮಿಳು ಭಾಷೆಯ ಮೇಲ್ಮೆಯ ಬಗ್ಗೆ ಕಮಲ್ ಅವರ ನಿಲುವು ವಿವಾದಾಸ್ಪದವಾಗಿರುವಿದರಲ್ಲಿ ಆಶ್ಚರ್ಯವಿಲ್ಲ. ಕನ್ನಡ ಮತ್ತು ತಮಿಳು ನುಡಿಗಳ ನಂಟಿನ ಬಗ್ಗೆ ಕನ್ನಡಿಗರ ಆಕ್ಷೇಪವಿಲ್ಲ. ಆದರೆ, ಅವು ಎಂಥ ಸಂಬಂಧ ಹೊಂದಿವೆ ಎಂಬುದೇ ಪ್ರಶ್ನೆ.

ಕಮಲ್ ಅವರ ಸಾಂದರ್ಭಿಕ ಹೇಳಿಕೆ, ನಂತರ ಅವರು ಹೇಳಿಕೆ ಹಿಂತೆಗೆದುಕೊಂಡು ಕ್ಷಮೆ ಕೇಳಲು ಒಲ್ಲೆ ಎಂದಿರುವುದು ಕರ್ನಾಟಕದಲ್ಲಿ ಸಿಟ್ಟಿಗೆ ಕಾರಣವಾಗಿದೆ.

ಬಾಕ್ಸ್ ಆಫೀಸ್ನಲ್ಲಿ ಇತಿಹಾಸ ಸೃಷ್ಟಿಸಿದ್ದ ಗ್ಯಾಂಗ್ಸ್ಟರ್ ಚಿತ್ರ ‘ನಾಯಗನ್’ ಬಿಡುಗಡೆಯಾಗಿ 38 ವರ್ಷಗಳ ನಂತರ ಮಣಿರತ್ನಂ ಮತ್ತು ಕಮಲ್ ಕಾಂಬಿನೇಷನ್ನಲ್ಲಿ ‘ಥಗ್ ಲೈಫ್’ ಬಂದಿದೆ.

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಭಾಷಾಶಾಸ್ತ್ರಜ್ಞ, ಪ್ರಾಧ್ಯಾಪಕ ಮತ್ತು ಸಂಶೋಧಕ ಮೇಟಿ ಮಲ್ಲಿಕಾರ್ಜುನ, ತಮಿಳು ಎಲ್ಲಾ ದ್ರಾವಿಡ ಭಾಷೆಗಳ ತಾಯಿ ಎಂಬುದು ತಮಿಳು ಜನರ ಸಾಮಾನ್ಯ ನಂಬಿಕೆಯಾಗಿದೆ. ಆದರೆ ಇದರ ಹಿಂದೆ ಯಾವುದೇ ತರ್ಕ ಇಲ್ಲ. ಇದು ಜಾನಪದ ನಂಬಿಕೆ ಇದ್ದಂತೆ ಎಂದು ಹೇಳುತ್ತಾರೆ.

‘ದಕ್ಷಿಣದ ಭಾಷೆಗಳ ಬಗ್ಗೆ ಆಳವಾದ ಜ್ಞಾನವಿದ್ದಿದ್ದರೆ ಕಮಲ್ ಹಾಸನ್ ಇಂತಹ ವಿವಾದಾತ್ಮಕ ಹೇಳಿಕೆ ಕೊಡುತ್ತಿರಲಿಲ್ಲ. ಕನ್ನಡ ಮತ್ತು ತಮಿಳು ಒಂದೇ ಮರದ ಎರಡು ಕೊಂಬೆಗಳಿದ್ದಂತೆ. ಪ್ರೋಟೊ–ದ್ರಾವಿಡಿಯನ್(ಮೂಲ ದ್ರಾವಿಡ) ಎಂದು ನಾವು ಈಗ ಏನನ್ನು ಕರೆಯುತ್ತಿದ್ದೇವೆ ಅದುವೇ ಬೇರು,’ ಎಂದು ಅವರು ಹೇಳುತ್ತಾರೆ.

ಭಾರತದಲ್ಲಿನ ಭಾಷೆಗಳ ಉದಯವು ಪ್ರಧಾನವಾಗಿ ಎರಡು ಭಾಷಾ ಕುಟುಂಬಗಳಿಂದ ಆಗಿದೆ. ಅವುಗಳೆಂದರೆ, ಮೂಲ-ದ್ರಾವಿಡ ಮತ್ತು ಮೂಲ-ಇಂಡೋ-ಆರ್ಯನ್. ‘ನಮ್ಮ ದ್ರಾವಿಡ ಕುಟುಂಬದಲ್ಲಿ 25 ರಿಂದ 27 ಭಾಷೆಗಳಿವೆ. ಕೆಲವು ಅಧ್ಯಯನಗಳು ಈ ಸಂಖ್ಯೆ 70 ಎಂದೂ ಸೂಚಿಸುತ್ತವೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ,’ ಎಂದು ಮೇಟಿ ಮಲ್ಲಿಕಾರ್ಜುನ ಹೇಳುತ್ತಾರೆ.

ಭಾಷಾ ಕುಟುಂಬದಲ್ಲಿ ವಿವಿಧ ಹಂತಗಳಲ್ಲಿ ಕವಲೊಡೆದು ಬ್ರಾಹುಯಿ, ಮಾಲ್ಟೊ, ತುಳು, ಗೊಂಡಿ, ಕೊಡವ, ತಮಿಳು, ಕನ್ನಡ ಭಾಷೆಗಳ ಸೃಷ್ಟಿಯಾಗಿದೆ. ಕ್ರಮೇಣ, ಭಾಷೆಗಳಲ್ಲಿ ಪರಸ್ಪರ ತಿಳುವಳಿಕೆ ಕಡಿಮೆಯಾದಾಗ ಅವು ಸ್ವತಂತ್ರ ನುಡಿಗಳಾದವು ಎಂದು ಅವರು ಹೇಳುತ್ತಾರೆ.

ರಾಜಕಾರಣಿಗಳು ತಮ್ಮ ಅಜೆಂಡಾಗಳನ್ನು ಸಾಧಿಸಿಕೊಳ್ಳಲು ಭಾಷಾ ವಿವಾದಗಳನ್ನು ಬಳಸಿಕೊಳ್ಳುವುದು ಸಾಮಾನ್ಯ. ಕನ್ನಡವು ಸಂಸ್ಕೃತದಿಂದ ಬಂದಿದೆ ಎಂಬ ಹೇಳಿಕೆಯನ್ನೂ ಕೆಲವರು ಮುಂದಿಡುತ್ತಾರೆ. ಈ ವಾದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೆಸರಾಂತ ಭಾಷಾಶಾಸ್ತ್ರಜ್ಞರೊಬ್ಬರು ಹೇಳುತ್ತಾರೆ.

ತಮಿಳು, ಮಲಯಾಳಂ ಮತ್ತು ಕನ್ನಡ ಒಂದೇ ದ್ರಾವಿಡ ಭಾಷಾ ಸಮೂಹದ (ದಕ್ಷಿಣ ದ್ರಾವಿಡ ಭಾಷಾ ಸಮೂಹ) ಭಾಗವಾಗಿದ್ದವು ಎಂದು ವಿವರಿಸಿದ ಅವರು ಹೇಳುವುದು: ‘ಕನ್ನಡವು ಅದರಿಂದ ಮೊದಲು ಕವಲೊಡೆಯಿತು. ತಮಿಳು ಮತ್ತು ಮಲಯಾಳಂ ಬಹಳ ಕಾಲ ಒಟ್ಟಿಗೆ ಇದ್ದವು. ಕೆಲವು ಅಧ್ಯಯನಗಳಲ್ಲಿ ಕನ್ನಡಕ್ಕಿಂತ ಬಹಳ ಹಿಂದೆಯೇ ತುಳು ಮತ್ತು ಕೊಡವ ಕವಲೊಡೆದಿದ್ದವು ಎಂಬ ಸೂಚನೆಗಳಿವೆ’.

‘ಎರಡು ಭಾಷೆಗಳು ಅದೇ ಒಂದಿಷ್ಟು ಪದಗಳನ್ನು ಹೊಂದಿವೆ ಎಂಬುದರ ಅರ್ಥ ಒಂದು ಇನ್ನೊಂದರಿಂದ ಹುಟ್ಟಿಕೊಂಡಿದೆ ಎಂದಲ್ಲ. ಕೊರಿಯಾ ಭಾಷೆಯಲ್ಲಿ ಹಲವು ತಮಿಳು ಪದಗಳಿವೆ. ಹಾಗೆಂದ ಮಾತ್ರಕ್ಕೆ ಕೊರಿಯಾ ಭಾಷೆ ತಮಿಳಿನಿಂದ ಹುಟ್ಟಿಕೊಂಡಿದೆ ಎಂದು ಹೇಳಲಾಗುವುದಿಲ್ಲ,’ ಎಂದು ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ಬರೆಯುವ ಕಾದಂಬರಿಕಾರ, ಕವಿ ಕೆ. ನಲ್ಲತಂಬಿ ಹೇಳುತ್ತಾರೆ.

‘ಸುಮಾರು ಕ್ರಿ.ಪೂ. 300ರ ಹಿಂದಿನ ಸಂಗಮ ಸಾಹಿತ್ಯವು ತಮಿಳು ಹಳೆಯ ಭಾಷೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದಕ್ಕೆ ಹೆಚ್ಚುವರಿಯಾಗಿ, ಅತ್ಯಂತ ಹಳೆಯ ವ್ಯಾಕರಣ ಪುಸ್ತಕಗಳಲ್ಲಿ ಒಂದಾದ ತೊಲ್ಕಪ್ಪಿಯಂ ಅನ್ನು ಪಾಣಿನಿಯ ಸಮಕಾಲೀನರಾದ ತೋಲ್ಕಪ್ಪಿಯರ್ ಬರೆದಿದ್ದಾರೆ. ಇದು ದಕ್ಷಿಣ ಭಾರತದ ಪ್ರಸಿದ್ಧ ವ್ಯಾಕರಣ ಪುಸ್ತಕವಾಗಿದೆ,’ ಎಂದು ಮೇಟಿ ಮಲ್ಲಿಕಾರ್ಜುನ ಹೇಳುತ್ತಾರೆ.

ತಮಿಳು ದಕ್ಷಿಣದ ಇತರ ಭಾಷೆಗಳಿಗಿಂತ ಹಳೆಯದು ಎಂಬ ನಂಬಿಕೆ ತಮಿಳುನಾಡಿನಲ್ಲಿ ಆಳವಾಗಿ ಬೇರೂರಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ತಮಿಳು ಪ್ರಾಧ್ಯಾಪಕರಾಗಿದ್ದ ಕನ್ನಡದ ಮೂಲಕ ತಮಿಳು ಭಾಷೆಯನ್ನು ಕಲಿಸುತ್ತಿದ್ದ ಪ್ರೊಫೆಸರ್ ಕಾರ್ಲೋಸ್ ಹೇಳುತ್ತಾರೆ.

ಮನೋನ್ಮಣಿಯಂ ಸುಂದರಂ ಪಿಳ್ಳೈ ಅವರು ಬರೆದ ತಮಿಳುನಾಡಿನ ನಾಡಗೀತೆಯಲ್ಲಿ ಎಲ್ಲಾ ದ್ರಾವಿಡ ಭಾಷೆಗಳು ತಮಿಳಿನಿಂದ ಹುಟ್ಟಿಕೊಂಡಿವೆ ಎಂಬ ಉಲ್ಲೇಖವಿದೆ. ತಮಿಳರು ಪ್ರತಿದಿನ ಈ ಹಾಡನ್ನು ಹಾಡುತ್ತಾರೆ. ಇತರ ಭಾಷೆಗಳನ್ನು ಸಹ ಹೊಗಳಿರುವ ಪಿಳ್ಳೈ, ತೆಲುಗನ್ನು ಸುಂದರ ಭಾಷೆ ಎಂದು, ಕನ್ನಡವನ್ನು ಸಂತೋಷದ ಭಾಷೆ ಎಂದೂ ಬಣ್ಣಿಸಿದ್ದಾರೆ. ಆದರೆ ಅವೆಲ್ಲವೂ ತಮಿಳು ತಾಯಿಯ ಗರ್ಭದಿಂದ ಬಂದವು ಎಂದು ಹೇಳಿದ್ದಾರೆ. ಕಮಲ್ ಕೂಡ ಹೇಳಿದ್ದು ಇದನ್ನೇ,’ ಎಂದು ಕಾರ್ಲೋಸ್ ಹೇಳುತ್ತಾರೆ.

19ನೇ ಶತಮಾನದ ಮಧ್ಯಭಾಗದಲ್ಲಿ ದ್ರಾವಿಡ ಅಥವಾ ದಕ್ಷಿಣ-ಭಾರತೀಯ ಭಾಷಾ ಕುಟುಂಬದ ತುಲನಾತ್ಮಕ ವ್ಯಾಕರಣವನ್ನು ಬರೆದ ಬ್ರಿಟಿಷ್ ಮಿಷನರಿ ಮತ್ತು ಭಾಷಾಶಾಸ್ತ್ರಜ್ಞ ರಾಬರ್ಟ್ ಕಾಲ್ಡ್ವೆಲ್ ‘ತಮಿಳು’ ಪದದ ಉತ್ಪತ್ತಿಯ ಬಗ್ಗೆ ಚರ್ಚಿಸಿದ್ದಾರೆ.

'ಡ್ರಮಿಲ್' ಈಗ ತಮಿಳಾಗಿದೆ ಎಂದು ಅವರು ಬರೆದಿದ್ದಾರೆ. ಆದರೆ, ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವು ಸಂಸ್ಕೃತ ಪಠ್ಯಗಳಲ್ಲಿ ತಮಿಳು ಡ್ರಮಿಲ್ ಆಗಿ ಮಾರ್ಪಟ್ಟಿದೆ ಎಂದೂ ಕೆಲವರು ಅಭಿಪ್ರಾಯ ಪಡುತ್ತಾರೆ ಎಂದು ಮೇಟಿ ಮಲ್ಲಿಕಾರ್ಜುನ ಹೇಳುತ್ತಾರೆ.

1961ರಲ್ಲಿ ಪ್ರಕಟವಾದ ಎಂ.ಬಿ.ಎಮೆನಿಯು ಮತ್ತು ಟಿ.ಬರೋ ಸಂಕಲಿಸಿದ 'A Dravidian Etymological Dictionary' ಯತ್ತ ಗಮನ ಸೆಳೆದಿರುವ ಕಾರ್ಲೋಸ್, ‘ಈ ಪುಸ್ತಕದಲ್ಲಿ ಸುಮಾರು 12 ದ್ರಾವಿಡ ಭಾಷೆಗಳನ್ನು ಅವುಗಳ ಮೂಲಗಳ ಜೊತೆಗೆ ವಿವರಿಸಿದ್ದಾರೆ. ಪದಗಳನ್ನು ವರ್ಣಮಾಲೆಯ ಕ್ರಮದಲ್ಲಿ ಪಟ್ಟಿ ಮಾಡಿ ಇತರ ಭಾಷೆಗಳೊಂದಿಗೆ ಹೋಲಿಸಿದ್ದಾರೆ,’ ಎಂದು ಹೇಳುತ್ತಾರೆ.

ಉದಾಹರಣೆಗೆ, ಕನ್ನಡದ ಹೋಗು ಅನ್ನುವ ಪದದ ಜೊತೆಗೆ ತಮಿಳಿನ ಪೋ ಪಟ್ಟಿ ಮಾಡಿದ್ದಾರೆ. ದಕ್ಷಿಣ ಭಾರತೀಯ ಭಾಷೆಗಳು ಮೂಲ-ದ್ರಾವಿಡದಿಂದ ಬಂದಿವೆ ಎಂಬ ಸಿದ್ಧಾಂತವನ್ನು ಮಂಡಿಸಿದ ಪ್ರವರ್ತಕ ಪುಸ್ತಕ ಇದಾಗಿದೆ ಎಂದು ಅವರು ಹೇಳುತ್ತಾರೆ.

ಕನ್ನಡ ಮತ್ತು ತಮಿಳು ವ್ಯಾಕರಣ ಮತ್ತು ಶಬ್ದಕೋಶದಲ್ಲಿ ಅನೇಕ ಹೋಲಿಕೆಗಳನ್ನು ಕಾಣಬಹುದು ಎಂಬುದು ನಿಜವಾದರೂ, ಶತಮಾನಗಳಿಂದ ಅವುಗಳ ಆದ್ಯತೆಗಳು ವಿಭಿನ್ನವಾಗಿವೆ ಎಂಬುದು ಅಷ್ಟೇ ಸತ್ಯ. ಇಂದಿನ ಗ್ರಾಂಥಿಕ ಮತ್ತು ಔಪಚಾರಿಕ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ಬಹಳಷ್ಟಿದೆ. ಆದರೆ, ಇಂದಿನ ತಮಿಳು ಹೊಸ ಪದಗಳ ರಚನೆಯಲ್ಲಿ ಮೂಲ ದ್ರಾವಿಡ ಸಂಪತ್ತನ್ನೇ ಹೆಚ್ಚಾಗಿ ಬಳಸಿಕೊಂಡಿದೆ. ಉದಾಹರಣೆಗೆ, ಕನ್ನಡದಲ್ಲಿ 'ರಾಷ್ಟ್ರಪತಿ' ಎಂಬ ಪದವನ್ನು ಬಳಸಲಾಗುತ್ತದೆ. ಈ ಪದವನ್ನು ಸಂಸ್ಕೃತ ಪ್ರಭಾವ ಹೊಂದಿರುವ ಅನೇಕ ಭಾರತೀಯ ಭಾಷೆಗಳು ಅಳವಡಿಸಿಕೊಂಡಿವೆ. ಆದರೆ ತಮಿಳು 'ಕುಡಿಯರಸು ತಲೈವರ್' ಎಂಬ ಮೂಲ ದ್ರಾವಿಡದಿಂದ ಹೆಕ್ಕಿದ ಪದವನ್ನು ಕಟ್ಟಿಕೊಂಡಿದೆ.

ಕಮಲ್ ಮತ್ತು ಮಣಿರತ್ನಂ ಇಬ್ಬರೂ ಕನ್ನಡಕ್ಕೆ ಅಪರಿಚಿತರೇನಲ್ಲ. ರಾಮ ಶಾಮ ಭಾಮ (2005) ಸೇರಿದಂತೆ ಕನ್ನಡದ ಹಲವು ಹಿಟ್ ಚಿತ್ರಗಳಲ್ಲಿ ಕಮಲ್ ನಟಿಸಿದ್ದಾರೆ. ಇದರಲ್ಲಿ ಅವರು ಉತ್ತರ ಕರ್ನಾಟಕದ ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ. ಮಣಿರತ್ನಂ ಅವರು ಕನ್ನಡ ಚಿತ್ರ ‘ಪಲ್ಲವಿ ಅನುಪಲ್ಲವಿ’ (1983) ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿ ನಂತರ ದೊಡ್ಡ ಹೆಸರು ಮಾಡಿದ್ದಾರೆ.

ಕನ್ನಡ ತಮಿಳು ಈ ಎರಡೂ ನುಡಿಗಳ ನಡುವೆ ಸಾಕಷ್ಟು ಬೆಚ್ಚನೆಯ ಕಕ್ಕುಲತೆ ಇದೆ. ಹಾಗೆಯೇ ಅಕ್ಕ ತಂಗಿಯರ ನಡುವೆ ಏಳುವಂತಹ ಮನಸ್ತಾಪಗಳೂ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.