ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ, ‘ನಿನ್ನ ಮನಸ್ಸೇ ನಿನ್ನ ಅತ್ಯಂತ ದೊಡ್ಡ ಬಂಧು, ಅದುವೇ ನಿನ್ನ ಅತಿ ದೊಡ್ಡ ವೈರಿ’ ಎಂದು ಹೇಳುತ್ತಾನೆ. ನಿಮ್ಮ ಮನಸ್ಸೇ ನಿಮ್ಮನ್ನು ಉದ್ಧಾರ ಮಾಡುತ್ತದೆ; ಅದೇ ಮನಸ್ಸು ನಿಮ್ಮನ್ನು ಕೆಳಕ್ಕೆ ತಳ್ಳುತ್ತದೆ, ಹೊರಗೆ ಬೇರೆ ಯಾವ ಶತ್ರುವೂ ಇರುವುದಿಲ್ಲ.

ಮನಸ್ಸಿನ ಮೇಲೆ ಹಿಡಿತವಿಟ್ಟುಕೊಂಡು, ನೀವು ಹೇಳಿದಂತೆ ಕೇಳುವಂತೆ ಅದಕ್ಕೆ ಸರಿಯಾದ ತರಬೇತಿ ನೀಡಿದ್ದರೆ, ಅದು ಶಿಸ್ತಿನಿಂದ ಇದ್ದರೆ ಆಗ ಮನಸ್ಸು ನಿಮ್ಮ ಸ್ನೇಹಿತನಾಗುತ್ತದೆ. ನಿಮ್ಮ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಮನಸ್ಸು ದುರಭ್ಯಾಸಗಳಲ್ಲಿ ಮುಳುಗಿದ್ದಾಗ ಅದು ನಿಮ್ಮನ್ನು ನಾಶ ಮಾಡಲು ಪ್ರಾರಂಭಿಸುತ್ತದೆ.

ನಾವು ಮನಸ್ಸಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳದಿದ್ದರೆ ನಮ್ಮಿಂದ ಯಾವ ಅಪರಾಧವೂ ಘಟಿಸುವುದಿಲ್ಲ. ಲೈಂಗಿಕ ಅಪರಾಧ, ಮನೆಯೊಳಗಣ ಅಥವಾ ಹೊರಗೆ ಸಮಾಜದಲ್ಲಿ ನಡೆಯುವ ಯಾವುದೇ ತರಹದ ಹಿಂಸೆ ಮುಂತಾದ ಎಲ್ಲ ದೊಡ್ಡ ದೊಡ್ಡ ಅಪರಾಧಗಳು ಸಂಯಮ ಅಥವಾ ಮನಸ್ಸಿನ ಹಾಗೂ ಇಂದ್ರಿಯಗಳ ಮೇಲಿನ ಹಿಡಿತವನ್ನು ಕಳೆದುಕೊಳ್ಳುವುದರಿಂದಲೇ ಸಂಭವಿಸುತ್ತವೆ. ಹಿಡಿತವನ್ನು ಕಳೆದುಕೊಂಡ ಮನಸ್ಸು ನಿಮ್ಮನ್ನು ಸೆರೆಮನೆಗೆ ತಳ್ಳಬಹುದು, ಅದೇ ಮನಸ್ಸು ಹಿಡಿತದಲ್ಲಿದ್ದಾಗ ನಿಮ್ಮನ್ನು ಉದ್ದರಿಸಬಹುದು.

ನಿಮ್ಮ ಮನಸ್ಸು ನಿಮಗೆ ವೈರಿಯಾಗಿದ್ದಾಗ ಅದು ನಿಮ್ಮನ್ನು ಹಿಂದಿನ ಅನುಭವಗಳು ಮತ್ತು ಅನಿಸಿಕೆಗಳಲ್ಲಿ ಮುಳುಗಿಸುತ್ತದೆ. ಸಂಗತಿಗಳನ್ನು ಹೊಸ ನಿಚ್ಚಳ ದೃಷ್ಟಿಯಿಂದ ನೋಡದಂತೆ ಅದು ನಿಮ್ಮನ್ನು ಪ್ರತಿಬಂಧಿಸುತ್ತದೆ. ನಾವು ಎಲ್ಲವನ್ನೂ ಮನಸ್ಸಿನ ಮೂಲಕ ಗ್ರಹಿಸುವುದೇ ಅದಕ್ಕೆ ಕಾರಣ. ನಾವು ಜ್ಞಾನವನ್ನು ಗ್ರಹಿಸುವುದೂ ಮನಸ್ಸಿನ ಮೂಲಕವೇ. ಮನಸ್ಸು ನಿಮಗೆ ವೈರಿಯಾದಾಗ ಅದು ಪ್ರತಿಯೊಂದನ್ನೂ ತೂಗಿನೋಡುವಂತೆ ನಿಮ್ಮನ್ನು ಪ್ರೇರಿಸುತ್ತದೆ. ನಿಮ್ಮಲ್ಲಿ ಅಸಹಾಯಕತೆ, ಒರಟುತನ ಮತ್ತು ದುಃಖವನ್ನುಂಟುಮಾಡುತ್ತದೆ. ಅದೇ ಮನಸ್ಸು ನಿಮ್ಮ ಮಿತ್ರನಾಗಿದ್ದಾಗ ನಿಮಗೆ ಸಂತೋಷ, ಸ್ವಾತಂತ್ರ್ಯ ಮತ್ತು ಮುಕ್ತಿಯನ್ನು ತಂದುಕೊಡುತ್ತದೆ.

ಪ್ರತಿಯೊಬ್ಬರಿಗೂ ತಮ್ಮ ತಮ್ಮ ಮನಸ್ಸುಗಳ ಮೇಲೆ ಸ್ವಲ್ಪಮಟ್ಟಿಗಾದರೂ ನಿಯಂತ್ರಣವಿರುತ್ತದೆ. ನಿಮಗೆ ಎಷ್ಟು ನಿಯಂತ್ರಣವಿದೆಯೋ ಅಷ್ಟರಮಟ್ಟಿಗೆ ಅದು ನಿಮ್ಮ ಮಿತ್ರನಾಗಿರುತ್ತದೆ.

ಮನಸ್ಸು ನಿಮ್ಮ ಮೇಲೆ ಕೈಚಳಕಗಳನ್ನು ನಡೆಸುತ್ತದೆ ಎಂಬ ಅರಿವು ನಿಮಗೆ ಇಲ್ಲದಿದ್ದರೆ ಜೀವನ ಶೋಚನೀಯವಾಗುತ್ತದೆ. ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದರ ಆಧಾರದ ಮೇಲೆ ನೀವು ಜೀವನದ ಬಹುಭಾಗವನ್ನು ನಡೆಸುವುದೇ ಇದಕ್ಕೆ ಕಾರಣ. ನಿಮ್ಮ ಬಗ್ಗೆ ಮತ್ತು ಇತರರ ಬಗ್ಗೆ ನೀವು ರೂಢಿಸಿಕೊಂಡಿರುವ ನಿರ್ಣಯಗಳು ಮತ್ತು ಪರಿಕಲ್ಪನೆಗಳಿಗೆ ಅಂಟಿಕೊಳ್ಳುವುದು ನಿಮ್ಮ ಮನಸ್ಸಿನ ಕೆಲಸ ಎಂಬುದನ್ನು ನೀವು ತಿಳಿದಾಗ ಅದು ನಿಮ್ಮ ಬದುಕಿನಲ್ಲಿ ಸೃಷ್ಟಿಸಿದ ಜಟಿಲತೆಗಳನ್ನು ನೀವು ಗುರುತಿಸುತ್ತೀರಿ.

ಎಲ್ಲವೂ ಇದೇ ರೀತಿ ಅಥವಾ ಅದೇ ರೀತಿಯಲ್ಲಿ ನಡೆಯಬೇಕು ಎಂದು ನೀವು ಭಾವಿಸುವಾಗ ಸದಾ ಪರಿವರ್ತನಶೀಲ ಭೌತ ಜಗತ್ತಿನ ಭಾಗವಾದ ಮನಸ್ಸು ತನ್ನ ಆಟ ಪ್ರಾರಂಭಿಸಿದೆ ಎಂದು ತಿಳಿಯಿರಿ. ಇಂತಹ ಸಂದರ್ಭಗಳಲ್ಲಿ ಎಂದಿಗೂ ಬದಲಾಗದ, ಅಮೂರ್ತವಾದ, ಅದೃಶ್ಯ ಶಕ್ತಿಯ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಹಾಗೆ ಮಾಡಿದಾಗ ನೀವು ಮನಸ್ಸಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತೀರಿ.

ಮನಸ್ಸು ಎಷ್ಟು ನಾಟಕಗಳನ್ನು ಮಾಡುತ್ತಿದೆ, ಎಷ್ಟು ನೋವನ್ನುಂಟು ಮಾಡಿದೆ ಎಂಬುದನ್ನು ಗಮನಿಸಿ. ಆಗ ನೀವು ಸಾಕ್ಷೀಭಾವದಲ್ಲಿರುತ್ತೀರಿ. ಆಗ ನೋವುಂಟಾಗುವ ಬದಲು ಮನರಂಜನೆಯಾಗುತ್ತದೆ. ಧಾರಾವಾಹಿಗಳು, ಪ್ರಹಸನಗಳು, ನಿಗೂಢ ರೋಮಾಂಚಕ ಕಥೆಗಳು, ನಾಟಕಗಳನ್ನು ಅನೇಕ ವಾಹಿನಿಗಳ ಮೂಲಕ ತೋರಿಸುವ ಟಿವಿಯಂತೆ ಮನಸ್ಸು ನಿಮ್ಮ ಬದುಕಿನಲ್ಲಿ ವರ್ತಿಸುತ್ತದೆ.

‘ಓ ನನ್ನ ಮನಸ್ಸೇ, ನೀನೆಷ್ಟು ಮೋಹಕ! ನೀನು ಅಂತಹ ಕ್ಷುಲ್ಲಕ ವಿಷಯಗಳಲ್ಲಿ ತೊಡಗಿಕೊಳ್ಳುವುದೇಕೆ? ಬೃಹತ್ತಾಗಿರುವ, ಅತ್ಯಾಕರ್ಷಕವಾಗಿರುವ ವಿಷಯಗಳನ್ನು ನೀನು ಗುರುತಿಸುವುದಿಲ್ಲವೇಕೆ?’ ಎಂದು ಅನೇಕ ಋಷಿಗಳು ಮತ್ತು ಕವಿಗಳು ಮನಸ್ಸಿನ ಬಗ್ಗೆ ಕುತೂಹಲವನ್ನು ತಳೆಯಲು ಇದೇ ಕಾರಣ.

ನೀವು ಮನಸ್ಸನ್ನು ನಿಮ್ಮ ಅತ್ಯಾಪ್ತ ಸಂಗಾತಿಯನ್ನಾಗಿ ಮಾಡಿಕೊಳ್ಳುವುದು ಹೇಗೆ? ಮನಸ್ಸನ್ನು ಅದರಷ್ಟಕ್ಕೆ ಇರಲು ಬಿಡುವುದೇ ಅದನ್ನು ಸಂಬಾಳಿಸುವ ರಹಸ್ಯ. ನೀವು ಮನಸ್ಸನ್ನು ದೂರವಿಡಲು ಪ್ರಯತ್ನಿಸಿದರೆ ಅದು ಹಠಮಾರಿ ರಾಕ್ಷಸನಂತೆ ವರ್ತಿಸುತ್ತದೆ. ಮನಸ್ಸನ್ನು ಅದರಷ್ಟಕ್ಕೆ ಇರಲು ಬಿಟ್ಟರೆ ಅದು ತಾನೇ ಮಾಯವಾಗುತ್ತದೆ. ಮನಸ್ಸಿನ ಮೂಲಕವೇ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮನೋವಿಜ್ಞಾನ ಅಥವಾ ಸಮಾಲೋಚನೆಗಳು ಆರಂಭದಲ್ಲಿ ಸಹಾಯ ಮಾಡುತ್ತಿರುವಂತೆ ಕಂಡುಬಂದರೂ ದೀರ್ಘಾವಧಿಯಲ್ಲಿ ಸಂಪೂರ್ಣ ಉಪಶಮನವನ್ನು ಮಾಡಲು ವಿಫಲವಾಗುವುದಕ್ಕೆ ಇದೇ ಕಾರಣ. ಕೇವಲ ಸಕಾರಾತ್ಮಕ ಚಿಂತನೆಗಳನ್ನು ಮನಸ್ಸಿನಲ್ಲಿ ಬಿತ್ತುವುದರ ಮೂಲಕ ಮನಸ್ಸನ್ನು ಸಂಭಾಳಿಸುವುದು ಸಾಧ್ಯವಿಲ್ಲ. ಏಕೆಂದರೆ ಮನಸ್ಸಿನ ಮಟ್ಟದಲ್ಲಿ ನೀವು ಯಾವುದನ್ನು ತಡೆಯಲು ಪ್ರಯತ್ನಿಸುತ್ತೀರೋ ಅದೇ ಉಳಿದುಕೊಳ್ಳುತ್ತದೆ.

ಉಸಿರಿನ ಬಗ್ಗೆ ತಿಳಿದುಕೊಳ್ಳುವುದರಿಂದ ಮರ್ಕಟನಂತೆ ವರ್ತಿಸುವ ಮನಸ್ಸನ್ನು ನಿಭಾಯಿಸಲು ನಿಮಗೆ ಸಾಧ್ಯವಾಗಬಹುದು. ಸುದರ್ಶನ ಕ್ರಿಯೆ ಮತ್ತು ಪ್ರಾಣಾಯಾಮಗಳಂತಹ ಉಸಿರಾಟದ ತಂತ್ರಗಳು ನಿಮ್ಮ ಪ್ರಾಣಶಕ್ತಿಯನ್ನು ಹೆಚ್ಚಿಸುವುದರ ಮೂಲಕ ಮನಸ್ಸಿಗೆ ಸ್ಥಿರತೆಯನ್ನು ನೀಡುತ್ತವೆ.

ದೇಹದಲ್ಲಿ ಪ್ರಾಣಶಕ್ತಿ ಹೆಚ್ಚುತ್ತಿರುವಂತೆ ಮನಸ್ಸಿನಲ್ಲಿ ಉಂಟಾಗುವ ಪರಿವರ್ತನೆ ನಿಮ್ಮ ಅನುಭವಕ್ಕೆ ಬರುತ್ತದೆ. ಅದು ಮನಸ್ಸಿನ ಮೇಲೆ ನೀವು ಹೇರುವ ಮಾನಸಿಕ ಪ್ರಕ್ರಿಯೆಯಾಗಿರದೆ ನಿಮ್ಮ ನೇರ ಅನುಭವವಾಗಿರುತ್ತದೆ. ಆಗ ನೀವು ಸಂತೋಷ ಹೊಂದುತ್ತೀರಿ, ಸೃಜನಶೀಲರಾಗುತ್ತೀರಿ ಹಾಗೂ ಮನಸ್ಸು ಮತ್ತು ಭಾವನೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದುತ್ತೀರಿ.

ಆದುದರಿಂದ ಮನಸ್ಸು ನಿಮ್ಮ ಅತ್ಯುತ್ತಮ ಗೆಳೆಯನೂ ಆಗಬಹುದು, ಅತ್ಯಂತ ಕೆಟ್ಟ ವೈರಿಯೂ ಆಗಬಹುದು. ನಿಮ್ಮ ಮನಸ್ಸನ್ನು ಹೇಗಿಟ್ಟುಕೊಳ್ಳಬೇಕೆಂಬುದು ನಿಮ್ಮ ಕೈಯಲ್ಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.