ಚೆನ್ನೈನ ಮ್ಯೂಸಿಕ್ ಅಕಾಡೆಮಿಯು ವಿದ್ವಾನ್ ಆರ್.ಕೆ. ಶ್ರೀರಾಮಕುಮಾರ್ ಅವರಿಗೆ 2025ರ ಸಾಲಿನ ಪ್ರತಿಷ್ಠಿತ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಘೋಷಿಸಿದೆ. 59 ವರ್ಷ ವಯಸ್ಸಿನ ಶ್ರೀರಾಮಕುಮಾರ್ ಕೇವಲ ಪಿಟೀಲುವಾದಕರಷ್ಟೆ ಅಲ್ಲ, ಸಂಗೀತ ವಿದ್ವಾಂಸರೂ ಹೌದು; ಜೊತೆಗೆ ಬೇಡಿಕೆಯಲ್ಲಿರುವ ಪಕ್ಕವಾದ್ಯಗಾರ; ಅಪಾರ ಸಂಖ್ಯೆಯ ಶಿಷ್ಯರನ್ನು ಪಡೆದಿರುವ ಗುರುವೂ ಹೌದು.

ಶ್ರೀರಾಮಕುಮಾರ್ ನಮ್ಮ ರಾಜ್ಯದ ರುದ್ರಪಟ್ಟಣದವರು; ಕಾವೇರಿ ತೀರದಲ್ಲಿರುವ ಈ ಸುಂದರ ಹಳ್ಳಿ ಹಲವರು ಶಾಸ್ತ್ರೀಯ ಸಂಗೀತಗಾರರಿಗೆ ಜನ್ಮಕೊಟ್ಟು ಪೋಷಿಸಿರುವ ತೊಟ್ಟಿಲು.

‘ನನ್ನ ಗುರುಗಳೇ ನನಗೆ ಒದಗಿದ ವರ’ ಎಂದು ವಿನಯದಿಂದ ಸ್ಮರಿಸಿಕೊಳ್ಳುತ್ತಾರೆ, ಶ್ರೀರಾಮಕುಮಾರ್. ಸಾವಿತ್ರಿ ಸತ್ಯಮೂರ್ತಿ ಅವರಿಂದ ಆರಂಭಿಕ ಪಿಟೀಲು ಪಾಠಗಳು ನಡೆದವು. ಬಳಿಕ ತಮ್ಮ ಅಜ್ಜ ವೆಂಕಟರಾಮ ಶಾಸ್ತ್ರಿಗಳಿಂದ ಪಿಟೀಲು ವಾದನದ ಜೊತೆಗೆ ಗಾಯನದ ಶಿಕ್ಷಣವನ್ನೂ ಪಡೆದರು. ಸಂಗೀತ ಕಲಾನಿಧಿ ಡಿ.ಕೆ. ಜಯರಾಮನ್ ಮತ್ತು ಪ್ರಸಿದ್ಧ ಪಿಟೀಲು ವಾದಕ ವಿ.ವಿ. ಸುಬ್ರಹ್ಮಣ್ಯಂ ಅವರಿಂದ ಮುಂದಿನ ಪ್ರೌಢಪಾಠಗಳು ನಡೆದವು. ಅನಂತರದಲ್ಲಿ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಎಂ.ಎಸ್. ಸುಬ್ಬುಲಕ್ಷ್ಮಿ, ಡಿ.ಕೆ. ಪಟ್ಟಮ್ಮಾಳ್, ಕೆ.ವಿ. ನಾರಾಯಣಸ್ವಾಮಿ ಮತ್ತು ಟಿ.ಎನ್. ಕೃಷ್ಣನ್ ಅವರಂತಹ ದಿಗ್ಗಜಗಳಿಂದ ಸಂಗೀತ ಕಲೆಯ ಕಲಿಕೆಗೂ ಅನುಸಂಧಾನಕ್ಕೂ ಅವಕಾಶ
ಒದಗಿತು.

ಪರಿಶುದ್ಧ ಜ್ಞಾನ ಮತ್ತು ಪರಂಪರೆಯಲ್ಲಿ ಶ್ರದ್ಧೆ, ಜೊತೆಗೆ ಗಾಢ ಸಂವೇದನೆ ಮತ್ತು ಸಮಗ್ರತೆ – ಇವು ಶ್ರೀರಾಮಕುಮಾರ್ ಸಂಗೀತದ ವೈಶಿಷ್ಟ್ಯಗಳು. ಅವರ ಸಂಗೀತ ಪ್ರಯಾಣದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪ್ರಭಾವ ಹೆಚ್ಚು. ತಾಯಿಯ ಗರ್ಭದಲ್ಲಿರುವಾಗಲೇ ಎಂ.ಎಸ್. ಸಂಗೀತವನ್ನು ಕೇಳಿದವರು ಅವರು; ಎಂದರೆ, ಅವರ ತಾಯಿಯ ಸೀಮಂತದಲ್ಲಿ ಎಂ.ಎಸ್. ಹಾಡಿದ್ದರು. ಶ್ರೀರಾಮಕುಮಾರ್ ಅವರ ಅಜ್ಜ ವೆಂಕಟರಾಮ ಶಾಸ್ತ್ರಿ ಹಲವು ವರ್ಷಗಳ ಕಾಲ ಎಂ.ಎಸ್. ಅವರಿಗೆ ಪಿಟೀಲು ಪಕ್ಕವಾದ್ಯಗಾರರಾಗಿದ್ದರು. ಹೀಗಾಗಿ ಅವರ ಕುಟುಂಬದೊಂದಿಗೆ ಎಂ.ಎಸ್. ಅವರಿಗೆ ಆತ್ಮೀಯ ಸಂಬಂಧವಿತ್ತು. ಎಂ.ಎಸ್. ಅವರ ಕೊನೆಯ ದಿನದವರೆಗೂ ಶ್ರೀರಾಮಕುಮಾರ್ ಕೂಡ ಅವರ ಸಂಪರ್ಕದಲ್ಲಿದ್ದರು. ಅವರಿಂದ ಹಲವಾರು ಕೃತಿಗಳನ್ನು ಕಲಿತರು; ಅವರೊಂದಿಗೆ ಹಲವು ಕಛೇರಿಗಳ ಅಮೂಲ್ಯ ಅವಕಾಶವನ್ನೂ ಪಡೆದರು. ಎಂ.ಎಸ್. ಸಂಗೀತ ಮತ್ತು ವ್ಯಕ್ತಿತ್ವ –ಎರಡೂ ತಮ್ಮ ಸಂಗೀತದ ತಿಳಿವಳಿಕೆಯನ್ನೂ ಸೂಕ್ಷ್ಮತೆಯನ್ನೂ ಆಳವಾಗಿ ಪ್ರಭಾವಿಸಿ, ರೂಪಿಸಿರುವುದನ್ನು ಗೌರವದಿಂದ ಸ್ಮರಿಸಿಕೊಳ್ಳುತ್ತಾರೆ.

ಇನ್ನೂ ಹಲವರು ಶ್ರೇಷ್ಠ ಸಂಗೀತಗಾರರಿಂದಲೂ ಸಂಗೀತ ಕಲೆಯ ಶ್ರೇಷ್ಠ ಮೌಲ್ಯಗಳನ್ನು ಮೈಗೂಡಿಸಿ
ಕೊಂಡ ಶ್ರೀರಾಮಕುಮಾರ್, ತಮ್ಮದೇ ಆದ ಒಂದು
ವಿಶಿಷ್ಟ ಸ್ಥಾನವನ್ನೂ ಸಂಗೀತ ಲೋಕದಲ್ಲಿ ಪಡೆದುಕೊಂಡಿದ್ದಾರೆ.

ಕಳೆದ ವರ್ಷದ ಸಂಗೀತ ಕಲಾನಿಧಿ ಪ್ರಶಸ್ತಿಯಿಂದ ಪುರಸ್ಕೃತರಾದ ಟಿ.ಎಂ. ಕೃಷ್ಣ ಅವರೊಂದಿಗೆ ಶ್ರೀರಾಮಕುಮಾರ್ ಅನೇಕ ಸಂಗೀತ ಸಾಹಸಗಳಲ್ಲಿ ಸಹಕರಿಸಿದ್ದಾರೆ. ಶ್ರೀರಾಮ್ಗಿಂತ ಕೃಷ್ಣ ಹತ್ತು ವರ್ಷಗಳಷ್ಟು ಕಿರಿಯರು. ಕೃಷ್ಣ 12ನೇ ವಯಸ್ಸಿನಲ್ಲಿ ಮ್ಯೂಸಿಕ್ ಅಕಾಡೆಮಿಯಲ್ಲಿ ತಮ್ಮ ಮೊದಲ ಸಂಗೀತ ಕಛೇರಿಯನ್ನು ನೀಡಿದಾಗ, ಶ್ರೀರಾಮ್ಕುಮಾರ್ ಪಿಟೀಲು ಪಕ್ಕವಾದ್ಯದ ಸಹಕಾರವನ್ನು ನೀಡಿದ್ದರು.

ಸಂಪ್ರದಾಯವಾದಿ, ಧಾರ್ಮಿಕ ಶ್ರದ್ಧಾಳು ಮತ್ತು ಪರಂಪರೆಯಲ್ಲಿ ನಿಷ್ಠೆಯಿರುವ ಶ್ರೀರಾಮ್ ಅವರಿಗೂ ಅಸಾಂಪ್ರದಾಯಿಕ ಗಾಯಕ, ಪರಂಪರೆಯ ಭಂಜಕ, ಬಂಡಾಯಗಾರ, ಹೋರಾಟಗಾರ ಮತ್ತು ರಾಜಕೀಯ ವ್ಯಾಖ್ಯಾನಕಾರ ಕೃಷ್ಣ ಅವರಿಗೂ ಹೇಗಾದರೂ ಹೊಂದಾಣಿಕೆ ಸಾಧ್ಯವಾದೀತು ಎಂಬುದೇ ಹಲವರಿಗೆ ಕುತೂಹಲದ ವಿಷಯವಾಗಿದೆ.

ಶ್ರೀರಾಮ್ ಅವರೊಬ್ಬ ಪೂರ್ವಗ್ರಹವಿಲ್ಲದ ವ್ಯಕ್ತಿ. ಸಂಗೀತವನ್ನು ಕುರಿತಾದ ಕೃಷ್ಣ ಅವರ ಆಲೋಚನೆಗಳು ಹಾಗೂ ಕೆಳಜಾತಿಯವರನ್ನು ಗುರುತಿಸುವಲ್ಲಿ ಬ್ರಾಹ್ಮಣ್ಯದ ಪೂರ್ವಗ್ರಹಗಳು, ಮೇಲ್ಜಾತಿಗಳ ಪ್ರಾಬಲ್ಯವಿರುವ ಸಂಗೀತ ಸಭೆಗಳ ರಾಜಕೀಯ ಮತ್ತು ಅವುಗಳ ಗುಂಪುಗಾರಿಕೆ ಮುಂತಾದ ಅವರ ಆರೋಪಗಳ ಬಗ್ಗೆಯೂ ಕೃಷ್ಣ ಅವರೊಂದಿಗೆ ಶ್ರೀರಾಮ್ ಚರ್ಚೆಗಳಲ್ಲಿ ತೊಡಗಿ
ದ್ದಾರೆ ಎಂದು ಅವರೇ ಹೇಳಿದ್ದಾರೆ. ಅವರು ಕೃಷ್ಣ ಅವರ ಹಲವು ಅಭಿಪ್ರಾಯಗಳನ್ನು ತೀವ್ರವಾಗಿಯೇ ವಿರೋಧಿಸಿದ್ದಾರೆ ಸಹ. ಎಲ್ಲ ಅನಿಷ್ಟಗಳಿಗೂ ಬ್ರಾಹ್ಮಣ
ರನ್ನು ದೂಷಿಸುವುದು ಅನ್ಯಾಯವೇ ಹೌದು ಎಂದೂ ಪ್ರತಿಪಾದಿಸುತ್ತಾರೆ. ಹೀಗೆ ಇವರಿಬ್ಬರ ಅಭಿಪ್ರಾಯಗಳು ಸಂಪೂರ್ಣವಾಗಿ ವಿರುದ್ಧವಾಗಿದ್ದರೂ, ಈ ಚರ್ಚೆಗಳೂ ಎಂದಿಗೂ ವೈಯಕ್ತಿಕವಾಗುವುದಿಲ್ಲ; ಮಾತ್ರವಲ್ಲ, ಅವು ಎಂದಿಗೂ ದೀರ್ಘಕಾಲೀನ ಸ್ನೇಹಕ್ಕೆ ಮಾರಕವಾಗುವುದಿಲ್ಲ ಎಂದೂ ಅವರು ಹೇಳುತ್ತಾರೆ.

ಕೃಷ್ಣ ಅವರು ಸಾಂಪ್ರದಾಯಿಕ ಕ್ರಮವಾದ ವರ್ಣದ ಬದಲು ತಾನಂ ಅಥವಾ ವಿಳಂಬ ಕಾಲದ ಕೀರ್ತನೆ ಅಥವಾ ಆಲಾಪನೆಯೊಂದಿಗೆ ಕಛೇರಿಯನ್ನು ಆರಂಭಿಸುವುದು, ಪದ್ಯದೊಂದಿಗೆ ಅಥವಾ
ಕನ್ನಯ್ಯ ಕುರಿತಾದ ಉರ್ದು ಗಜಲ್ನಿಂದ ಕಛೇರಿಯನ್ನು ಕೊನೆಗೊಳಿಸುವುದು ಸಂಪೂರ್ಣವಾಗಿ ಅಸಾಂಪ್ರದಾಯಿಕ ವಿಧಾನವೇ ಎಂದು ಕೇಳಿದಾಗ, ಶ್ರೀರಾಮ್ ಭಿನ್ನಸ್ವರದಲ್ಲಿ ಉತ್ತರಿಸುತ್ತಾರೆ. ಕಛೇರಿಯ ಕ್ರಮ ಅಸಾಂಪ್ರದಾಯಿಕವಾಗಿದ್ದರೂ, ಕೃಷ್ಣ ಅವರ ಗಾಯನ ಅಥವಾ ಮನೋಧರ್ಮಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಸಮಗ್ರತೆಯನ್ನೇ ಎತ್ತಿಹಿಡಿಯುತ್ತವೆ ಎನ್ನುತ್ತಾರೆ. ಸಂಗೀತದಲ್ಲಿ ಕೃಷ್ಣ ತಾವೂ ತಲ್ಲೀನರಾಗುತ್ತಾರೆ, ಪಕ್ಕವಾದ್ಯಗಾರರೂ ಕೇಳುಗರೂ ತಲ್ಲೀನತೆಯನ್ನು ಸಾಧಿಸುತ್ತಾರೆ; ಆ ಸಂಗೀತ ಸಹೃದಯರನ್ನು ಅಲೌಕಿಕ ಸ್ಥಿತಿಗೆ ಒಯ್ದಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಅವರ ಕೆನ್ನೆಗಳ ಮೇಲೆ ಆನಂದಬಾಷ್ಪಗಳು ಇಳಿಯುತ್ತಿರುತ್ತವೆ.

ಸಂಗೀತ, ಸಾಹಿತ್ಯ, ಚಿತ್ರಕಲೆ ಅಥವಾ ಶಿಲ್ಪಕಲೆ – ಯಾವುದೇ ಕಲಾಪ್ರಕಾರ ಮತ್ತು ಕಲಾವಿದ ಎಂತಹ ನಿರ್ಬಂಧಗಳ ನಡುವೆಯೂ ಹೊಸತನವನ್ನು ಕಂಡುಕೊಳ್ಳಲು ತವಕಿಸುವುದು ಸಹಜ. ಹಲವು ಶ್ರೇಷ್ಠ ನಾಗರಿಕತೆಗಳಲ್ಲಿ ಹಲವರು ಮಹಾಕಲಾವಿದರು ಹಲವಾರು ಮೇರುಕೃತಿಗಳನ್ನು ರಚಿಸಿದ್ದಾರೆ. ಮಹಾ
ಕಾವ್ಯಗಳು, ಕಾದಂಬರಿಗಳು, ಸಂಗೀತ, ದೇವಾಲಯಗಳು, ಕೋಟೆಗಳು, ಪಿರಮಿಡ್ಗಳು, ವರ್ಣಚಿತ್ರಗಳು, ಕಂಚಿನ ಮೂರ್ತಿಗಳು, ಪಿಂಗಾಣಿ ವಸ್ತುಗಳು ಮತ್ತು ಮೂರ್ತಿಶಿಲ್ಪಗಳಂಥ ಕಲಾಕೃತಿಗಳಿಂದ ಸಮೃದ್ಧವಾಗಿವೆ. ಈಜಿಪ್ಟ್ನ ಪಿರಮಿಡ್ಗಳು, ರೋಮ್ನ ಕೊಲೋಸಿಯಮ್, ನಮ್ಮ ಚೋಳ, ಹೊಯ್ಸಳ ಮತ್ತು ವಿಜಯನಗರ ದೇವಾಲಯಗಳು ಅಥವಾ ತಾಜ್ಮಹಲ್ –ಇವೆಲ್ಲವೂ ಮಹಾಪ್ರತಿಭೆಗಳ ಫಲಗಳೇ. ಆದರೆ ಅವುಗಳನ್ನು ಗುಲಾಮರ ಬೆವರಿನಿಂದಲೋ ರಕ್ತದಿಂದಲೂ ನಿರ್ಮಿಸಿರಬಹುದು; ಅವರ ಹೆಸರುಗಳೂ ನಮಗೆ ತಿಳಿದಿಲ್ಲ. ಆದರೆ ಬಿಥೋವನ್ ಮತ್ತು ತ್ಯಾಗರಾಜರ ಸಂಗೀತ,ಮೈಕೆಲ್ಯಾಂಜೆಲೊ ಅವರ ಶಿಲ್ಪಗಳು, ಲಿಯೊನಾರ್ಡೊ ಡ ವಿಂಚಿಯ ವರ್ಣಚಿತ್ರಗಳು, ಷೇಕ್ಸ್ಪಿಯರ್ ಮತ್ತು ಕಾಳಿದಾಸರ ನಾಟಕಗಳು ಆಯಾ ಕರ್ತೃಗಳ ಹೆಸರಿನಿಂದಲೇ ಪ್ರಸಿದ್ಧಿಯನ್ನು ಪಡೆದಿವೆ. ಎಲ್ಲಿಯವರೆಗೂ ತಮ್ಮ ಕಾಲದ ರಾಜರು ಮತ್ತು
ನಿರಂಕುಶಾಧಿಕಾರಿಗಳ ವಿರುದ್ಧ ದಂಗೆ ಏಳುತ್ತಿರಲಿಲ್ಲವೋ ಅಲ್ಲಿಯವರೆಗೂ ಪ್ರಾಚೀನ ಕಾಲದ ಕಲಾವಿದರಿಗೆ ಅಭಿವ್ಯಕ್ತಿಯ ಸ್ವಾತಂತ್ರ್ಯ ಇರುತ್ತಿತ್ತು.

‘ಬಲ’ ಮತ್ತು ‘ಎಡ’ ಎಂಬ ಸರ್ವಾಧಿಕಾರಿ ಆಡಳಿತಗಳ ನೂತನ ಯುಗದಲ್ಲಿ ಪ್ರಪಂಚದಾದ್ಯಂತ ನಿರಂಕುಶಾಧಿಕಾರಿಗಳು ಜನರನ್ನು ಕಬ್ಬಿಣದ ಮುಷ್ಟಿಯಿಂದ ಆಳುತ್ತಿದ್ದಾರೆ. ಮೆಷಿನ್ ಗನ್ಗಳನ್ನು ಹಿಡಿದು ಸಮವಸ್ತ್ರವನ್ನು ಧರಿಸಿರುವವರು ಇವರ ಆದೇಶ ಪಾಲನೆಗಾಗಿ ಕಾಯುತ್ತಿರುತ್ತಾರೆ. ಇವರ ಸೇವೆಗಾಗಿ ಕೋಟ್ಯಧಿಪತಿಗಳು, ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಬಲ್ಲ ತಂತ್ರಜ್ಞಾನಿಗಳು ಕೂಡ ಸಿದ್ಧರಿರುತ್ತಾರೆ. ‘ಗುಲಾಮಗಿರಿಯೇ ಶ್ರೀರಕ್ಷೆ’ ಎಂಬ ನಂಬಿಕೆಯನ್ನು ಜನರಲ್ಲಿ ಬಿತ್ತುವಲ್ಲಿ ಈ ಪುಢಾರಿಗಳು ಯಶಸ್ವಿಯಾಗಿದ್ದಾರೆ.

ಆದರೆ, ಅನ್ನದ ಬಳಿಕ ಮನುಷ್ಯನ ಎರಡನೆಯ ಆಯ್ಕೆಯೇ ಸ್ವಾತಂತ್ರ್ಯ. ಹೀಗಾಗಿ ಸ್ವಾತಂತ್ರ್ಯದ ಜ್ವಾಲೆ ಹಲವರನ್ನು, ಬೆಂಕಿಯು ಪತಂಗಗಳನ್ನು ಆಕರ್ಷಿಸುವಂತೆ ಸೆಳೆಯುತ್ತಲೇ ಇರುತ್ತದೆ. ಕಲೆ ಫಲವತ್ತಾಗಬೇಕಾದರೆ ಅದು ಜನಸಾಮಾನ್ಯರ ಸಂತೋಷ ಮತ್ತು ದುಃಖಗಳಿಂದ ತನ್ನ ಪೋಷಣೆ ಮತ್ತು ಸ್ಫೂರ್ತಿಯನ್ನು ಪಡೆಯಬೇಕು. ಕಲಾವಿದನೂ ಮಾನವೀಯತೆಯ ಶಾಶ್ವತ ಸಂವೇದನೆಗಳ ಬಗ್ಗೆ ಅಗಾಧವಾದ ನಿಷ್ಠೆಯನ್ನು ಹೊಂದಿರಬೇಕು.

ಶೋಷಣೆ, ಅನ್ಯಾಯ, ತಾರತಮ್ಯ, ದುರ್ಬಲರ ಮತ್ತು ನಿರ್ಗತಿಕರ ವಿರುದ್ಧದ ಕ್ರೌರ್ಯಗಳ ಜಗತ್ತಿನ ಕಡೆಗೆ ಮುಖ ಮಾಡಿರುವ ಕಲಾವಿದ ತಾನು ಮೌನವಾಗಿರಬೇಕೆ ಅಥವಾ ಇವುಗಳ ಬಗ್ಗೆ ದನಿ ಎತ್ತಬೇಕೆ ಎಂಬುದರ ಆಯ್ಕೆಯನ್ನು ಅವನೇ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಅವನು ದನಿಯಿಲ್ಲದವರ ಪರವಾಗಿ ಮಾತನಾಡಲು ನಿರ್ಧರಿಸಿ, ವ್ಯವಸ್ಥೆಯ ಅವ್ಯವಹಾರಗಳ ಸುಳಿಗೆ ಸಿಲುಕಿದರೆ, ಆಗ ಸೃಜನಶೀಲತೆಗೆ ಆವಶ್ಯಕವಾಗಿರುವ ಏಕಾಂತದಿಂದ ಅವನು ವಂಚಿತನಾಗಬೇಕಾಗುತ್ತದೆ.

ಕೆಲವರು ಆಟವನ್ನು ಹೊರಗಿನಿಂದ ನೋಡುವವರಂತೆ ಇಂಥ ವಿದ್ಯಮಾನಗಳಿಗೆ ಕೇವಲ ಪ್ರೇಕ್ಷಕರಾಗಿರುತ್ತಾರಷ್ಟೆ. ಕಲಾವಿದರಾಗಿ ದಂತಗೋಪುರದಲ್ಲಿ ಆಶ್ರಯ ಪಡೆಯುವುದನ್ನೇ ತಮ್ಮ ಹಕ್ಕು ಎಂದೂ ಅವರು ಭಾವಿಸಿಕೊಂಡಿರುತ್ತಾರೆ. ಕೇವಲ ಪರಿಶುದ್ಧ ಕಲ್ಪನೆಯಿಂದ ಮಾತ್ರವೇ
ಹುಟ್ಟಿದ ಅಂತಹ ಕಲೆ ಜಡವೂ ಬರಡೂ ಆಗಿರಬಹುದಷ್ಟೆ.

ಕಲಾಸೇವೆ ಎಂದರೆ ಸೌಂದರ್ಯಕ್ಕೂ ದುಃಖಕ್ಕೂ ಸೇವೆ ಸಲ್ಲಿಸುವುದು ಎಂದು ಆಲ್ಬರ್ಟ್ ಕಮೂ ಹೇಳಿದಂತೆ, ಕೃಷ್ಣ ಅವರಂತಹ ಕೆಲವು ಕಲಾವಿದರು ಅನ್ಯಾಯಕ್ಕೆ ಒಳಗಾದವರ ಮತ್ತು ಶೋಷಿತರ ಪರವಾಗಿ ನಿಲ್ಲಬೇಕು ಎಂದು ಸಹಜವಾಗಿಯೇ ಭಾವಿಸುತ್ತಾರೆ.

ಕಲಾವಿದನೊಬ್ಬ ಹೋರಾಟಗಾರನಾಗಿಯೂ ಗುರುತಿಸಿಕೊಳ್ಳುವುದರ ಬಗ್ಗೆ ಶ್ರೀರಾಮಕುಮಾರ್ ಅವರ ಅಭಿಪ್ರಾಯಗಳ ಬಗ್ಗೆ ಕೇಳಿದಾಗ, ಅವರ ನಿಲುವಿನ ಬಗ್ಗೆ ಅವರಿಗೆ ಸ್ವಲ್ಪವೂ ಅಸ್ಪಷ್ಟತೆಯಿರಲಿಲ್ಲ. ಯಾರಿಗೆ ಹೋರಾಟದತ್ತ ಸೆಳೆತ ಇದೆಯೋ ಅವರು ಹಾಗೆ ಮಾಡಬಹುದು ಎನ್ನುತ್ತಾರೆ. ತಮ್ಮ ತಮ್ಮ ಇಚ್ಛೆಯ ಪ್ರಕಾರ ನಡೆಯುವ ಮೂಲಕ ಪ್ರತಿಯೊಬ್ಬರೂ ಸಮಾಜಕ್ಕೆ ಸೇವೆಯನ್ನು ಸಲ್ಲಿಸಬಹುದು ಎಂಬ ದೃಢ ನಂಬಿಕೆಯೂ ಅವರಲ್ಲಿತ್ತು. ಉತ್ಸಾಹ, ಶ್ರದ್ಧೆ ಮತ್ತು ಸಮರ್ಪಣೆಗಳಿಂದ ಕೂಡಿದ ಕಲೆ ಜಗತ್ತಿಗೆ ಸಂತೋಷವನ್ನೂ ಶಾಂತಿಯನ್ನೂ ತರುತ್ತದೆ ಎಂಬ ವಿಶ್ವಾಸ ಅವರದ್ದು: ‘ದೇವರು ನನಗೆ ನಿರ್ದೇಶಿಸಿದ ದಾರಿಯಲ್ಲಿ ಸಾಗಬೇಕು; ಅವನ ಆಜ್ಞೆಯನ್ನು ಪಾಲಿಸಬೇಕು.’

‘ಸರತಿಯಲ್ಲಿ ಸಾವಧಾನವಾಗಿ ನಿಂತವರಿಗೂ ಅವಕಾಶ ನಿಶ್ಚಿತ’ ಎಂಬ ಜಾನ್ ಮಿಲ್ಟನ್ನ ಮಾತಿಗೆ ಪ್ರಚಾರದಿಂದ ವಿಮುಖರೂ ನಿಸ್ಪೃಹರೂ ಆಗಿರುವ ಸಂಗೀತ ಕಲಾನಿಧಿ ಶ್ರೀರಾಮಕುಮಾರ್ ಸಾಕ್ಷಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.