ಪ್ರತಿಯೊಂದು ಪ್ರಶ್ನೆಗೂ ಉತ್ತರ ಕಂಡುಕೊಳ್ಳಲು ನಾವು ಕೃತಕ ಬುದ್ಧಿಮತ್ತೆಯನ್ನು (ಎ.ಐ.) ಅವಲಂಬಿಸುತ್ತೇವೆ ಎಂದಾದರೆ, ಸರಿಯಾದ ಪ್ರಶ್ನೆಗಳನ್ನು ಕೇಳಲು ನಮಗೆ ಎ.ಐ. ನೆರವು ಸಿಗುವುದಿಲ್ಲವೇ? ಸಂಜೀವ್ ಬಿಖ್ಚಂದಾನಿ ಅವರು ಅಶೋಕ ವಿಶ್ವವಿದ್ಯಾಲಯಕ್ಕೆ ಬರೆದ ಮತ್ತು ಈಗ ಬಹಿರಂಗವಾಗಿರುವ ಪತ್ರವನ್ನು ಓದಿದಾಗ ನನ್ನ ಮನಸ್ಸಿಗೆ ಬಂದ ಮೊದಲ ಯೋಚನೆ ಇದು. ಅವರು ಸಾರ್ವಜನಿಕವಾಗಿ ಆಡಿದ ಮಾತುಗಳ ಕುರಿತು ನನಗೆ ತೀವ್ರವಾದ ಭಿನ್ನಾಭಿಪ್ರಾಯ ಇದ್ದರೂ ಪತ್ರವನ್ನು ಸಹಾನುಭೂತಿಯಿಂದಲೇ ಓದಿದೆ.

ಪ್ರಥಮದರ್ಜೆಯ ಲಿಬರಲ್ ವಿಶ್ವವಿದ್ಯಾಲಯವೊಂದನ್ನು ಕಟ್ಟುವುದಕ್ಕಾಗಿ ‘ಅಶೋಕ’ ಸ್ಥಾಪಕರು ತಮ್ಮ ಸಮಯ, ಶಕ್ತಿ ಮತ್ತು ಹಣವನ್ನು ವ್ಯಯ ಮಾಡಿರುವುದು ಅಭಿನಂದನೆಗೆ ಅರ್ಹವಾದುದು. ಉದಾರವಾದಕ್ಕೆ ಮನ್ನಣೆ ಇರುವ ಕಾಲದಲ್ಲಿ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿಕೊಂಡು ಹೋಗುವುದೇ ತ್ರಾಸದಾಯಕ ಮತ್ತು ಕೃತಜ್ಞತೆ ಇಲ್ಲದ ಕೆಲಸ. ಅಂತಹುದರಲ್ಲಿ ಈಗಿನ ಸರ್ಕಾರದ ಅಡಿಯಲ್ಲಿ ಅದಿನ್ನೂ ಕಷ್ಟಕರ.

ಬಿಖ್ಚಂದಾನಿ ಅವರದು ಕಳಪೆ ಅಭಿರುಚಿಯ ತೆಳುವಾದ ಪ್ರಶ್ನೆ. ‘ಎಲ್ಲ ಲಿಬರಲ್ ವಿಶ್ವವಿದ್ಯಾಲಯಗಳು ತಮ್ಮ ಸ್ವರೂಪದಲ್ಲಿಯೇ ಹೋರಾಟದ ಮನಃ ಸ್ಥಿತಿಯನ್ನು ಹೊಂದಿವೆಯೇ’ ಎಂಬುದು ಅವರ ಪ್ರಶ್ನೆ. ಇದಕ್ಕೆ ಇರಬಹುದಾದ ಒಂದೇ ಉತ್ತರ, ‘ಇಲ್ಲ’ ಎನ್ನುವುದಾಗಿದೆ. ಎಲ್ಲ ವಿಶ್ವವಿದ್ಯಾಲಯಗಳು ಒಂದೇ ರೀತಿಯಲ್ಲಿರಲು ಹೇಗೆ ಸಾಧ್ಯ? ಅಶೋಕ ವಿಶ್ವವಿದ್ಯಾಲಯಕ್ಕೆ ಇತರ ವಿಶ್ವವಿದ್ಯಾಲಯಗಳು ಮಾನದಂಡ ಏಕಾಗಬೇಕು? ಯಾವುದೇ ರೀತಿಯಲ್ಲಿ ನೋಡಿದರೂ ‘ಆ್ಯಕ್ಟಿವಿಸ್ಟ್ ಸ್ವರೂಪದ
ವಿಶ್ವವಿದ್ಯಾಲಯಗಳು’ ಅಂದರೆ ಏನರ್ಥ?

ಒಂದು ಸಂಸ್ಥೆಯಾಗಿ ವಿಶ್ವವಿದ್ಯಾಲಯವು ಆ್ಯಕ್ಟಿವಿಸ್ಟ್ ಆಗಿ ಪರಿವರ್ತನೆಯಾಗಬೇಕು ಎಂದು ಬಯಸುವುದೇ ಹಾಸ್ಯಾಸ್ಪದ. ಬಿಖ್ಚಂದಾನಿ ಅವರೇ ಟ್ರಸ್ಟಿಯಾಗಿರುವ ವಿಶ್ವವಿದ್ಯಾಲಯದಲ್ಲಿ ದೇಶದಲ್ಲಿಯೇ ಅತ್ಯುತ್ತಮವಾದ ನೂರಾರು ಶಿಕ್ಷಕರಿದ್ದಾರೆ. ಅವರನ್ನು ಕೇಳುವ ಬದಲು ಚಾಟ್ಬಾಟ್ಗೆ ಈ ಪ್ರಶ್ನೆ ಕೇಳಿದ್ದರು ಎನ್ನುವುದೇ ನನ್ನನ್ನು ಮುಜುಗರಕ್ಕೆ ಈಡುಮಾಡಿದೆ.

ಬಿಖ್ಚಂದಾನಿ ಕೇಳಬೇಕಿರುವ ಪ್ರಶ್ನೆಗಳು ಬೇರೆ ಇವೆ: ಲಿಬರಲ್ ಕಲಾಶಿಕ್ಷಣವು ತನ್ನ ಸ್ವರೂಪದಲ್ಲಿಯೇ ಒಂದು ರೀತಿಯ ಆ್ಯಕ್ಟಿವಿಸಂ ಒಳಗೊಂಡಿದೆಯೇ? ಹೌದಾಗಿದ್ದರೆ, ಲಿಬರಲ್ ಕಲಾಶಿಕ್ಷಣ ನೀಡುವ ವಿಶ್ವವಿದ್ಯಾಲಯವು ಅದನ್ನು ಹೇಗೆ ನಿಭಾಯಿಸಬೇಕು? ನಮ್ಮ ಕಾಲದ ವಿಚಾರಗಳ ಜೊತೆಗಿನ ಸಕ್ರಿಯ ಮುಖಾಮುಖಿಗೆ ವಿಶ್ವವಿದ್ಯಾಲಯದ ಪಠ್ಯಕ್ರಮ ಮತ್ತು ಶಿಕ್ಷಣ ಶಾಸ್ತ್ರದಲ್ಲಿ ಒತ್ತು ನೀಡಬೇಕೆ? ವಿಶ್ವವಿದ್ಯಾಲಯದಲ್ಲಿ ಇಂತಹುದಕ್ಕೆ ಉತ್ತೇಜನ ನೀಡಬೇಕೆ? ವಿಶ್ವವಿದ್ಯಾಲಯದ ಒಳಗೆ ಮತ್ತು ಹೊರಗೆ ಬೋಧಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಇಂತಹ ಮುಖಾಮುಖಿಯನ್ನು ಗೌರವಿಸದೇ ಇದ್ದರೂ ಅದಕ್ಕೆ ಅವಕಾಶ ಕೊಡಬೇಕೆ?

ಇವುಗಳಲ್ಲಿ ಹಲವು, ಖಂಡಿತವಾಗಿಯೂ ಯಾವುದೇ ಶಿಕ್ಷಣ ಸಂಸ್ಥೆಗೆ ಸಾಮಾನ್ಯ ಪ್ರಶ್ನೆಗಳು. ಕಲೆ, ವಿಜ್ಞಾನ ಸೇರಿದಂತೆ ಯಾವುದೇ ಉತ್ತಮ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವಿಕೆಯ ಸ್ಫೂರ್ತಿಯನ್ನು ತುಂಬಲೇಬೇಕು. ಪಡೆದುಕೊಂಡ ವಿವೇಕವನ್ನು ವಿಶ್ಲೇಷಣೆಗೆ ಒಳಪಡಿಸಲು ಮತ್ತು ವ್ಯವಸ್ಥೆಯನ್ನು ಪ್ರಶ್ನಿಸಲು ತರಬೇತಿ ನೀಡುವ ಮೂಲಕ ವಿದ್ಯಾರ್ಥಿ ಗಳಲ್ಲಿ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಬೇಕು. ಪಾವ್ಲೊ ಫ್ರೈರೆ ಹೇಳಿದಂತೆ, ಶಿಕ್ಷಣವು ಬುಡಮೇಲು
ಗೊಳಿಸುವಿಕೆಯನ್ನು ತನ್ನ ಅಂತರಂಗದಲ್ಲಿಯೇ ಹುದುಗಿಸಿಕೊಂಡಿದೆ.

ಲಿಬರಲ್ ಕಲೆಯು ಇದನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಒಯ್ಯುತ್ತದೆ. ವಿಮರ್ಶಾತ್ಮಕ ಚಿಂತನೆಯನ್ನು ಸಮಾಜ ಮತ್ತು ಜೀವನಗಳ ಮೇಲೆ ಅನ್ವಯಿಸಲು ಅದು ಉತ್ತೇಜಿಸುತ್ತದೆ. ಅಲ್ಲಿನ ಪೂರ್ವಗ್ರಹಗಳು ಮತ್ತು ವಿಶೇಷಾಧಿಕಾರಗಳನ್ನು ಪ್ರಶ್ನಿಸಲು ದಾರಿ ಮಾಡಿಕೊಡುತ್ತದೆ. ರಾಜಕೀಯ ಶಾಸ್ತ್ರದ ಬೋಧಕರು ಮತ್ತು ವಿದ್ಯಾರ್ಥಿಗಳಂತೂ (ಪ್ರೊ.ಅಲಿ ಖಾನ್ ಮಹಮೂದಾಬಾದ್ ಅವರಂತೆ) ಸದಾ ಕಾಲವೂ ರಾಜಕೀಯ ಅಧಿಕಾರಸ್ಥರ ಹೇಳಿಕೆಗಳನ್ನು ಪ್ರಶ್ನಿಸಲೇಬೇಕು.

ಅಶೋಕ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಕಾರ್ತಿಕೇಯ ಭಟೋಟಿಯಾ ಅವರು, ಇತ್ತೀಚಿನ ಪ್ರಕರಣದಲ್ಲಿ ವಿಶ್ವವಿದ್ಯಾಲಯದ ಪಾತ್ರವನ್ನು ತೀವ್ರ ವಿಮರ್ಶೆಗೆ ಒಳಪಡಿಸಿದ್ದಾರೆ: ‘ಲಿಬರಲ್ ಕಲಾಶಿಕ್ಷಣವು ಅದರ ಸಂರಚನೆಯಲ್ಲಿಯೇ ವಿಮರ್ಶಾತ್ಮಕ ಚಿಂತನೆ, ಭಿನ್ನಮತ ಮತ್ತು ನೈತಿಕ ವಿಮರ್ಶೆಯನ್ನು ಪೋಷಿಸಬೇಕು. ಹಾಗಾಗಿ, ಆ್ಯಕ್ಟಿವಿಸಂ ಕಡ್ಡಾಯವೇನೂ ಅಲ್ಲ. ಆದರೆ, ಈ ಪರಂಪರೆ ಅನ್ಯವಾದದ್ದೂ ಅಲ್ಲ’.

ಒಂದು ರೀತಿಯಲ್ಲಿ ಲಿಬರಲ್ ಕಲಾ ವಿಶ್ವವಿದ್ಯಾಲಯದ ಪ್ರಶ್ನೆಯು ಇಲ್ಲಿಗೆ ಬಂದು ನಿಲ್ಲುತ್ತದೆ: ವಿಶ್ವವಿದ್ಯಾಲಯವು ಬೋಧನೆಗೆ ಇರುವ ಪೂರ್ವ ಷರತ್ತುಗಳು ಮತ್ತು ಅದರ ಪರಿಣಾಮಗಳನ್ನು ಹೇಗೆ ನಿಭಾಯಿಸಬೇಕು? ಗುಣಮಟ್ಟದ ಲಿಬರಲ್ ಶಿಕ್ಷಣವನ್ನು ನೀಡುವವರು ವಿಮರ್ಶಾತ್ಮಕವಾಗಿ ಚಿಂತಿಸಲು ಶಕ್ತರಾಗಿರಬೇಕು ಮತ್ತು ಸಂಸ್ಥೆಯು ಅಭಿಪ್ರಾಯಗಳ ಮುಕ್ತ ವಿನಿಮಯಕ್ಕೆ ವೇದಿಕೆ ಒದಗಿಸಬೇಕು. ಸ್ವತಂತ್ರ ನಿರ್ಧಾರ ಕೈಗೊಳ್ಳುವಿಕೆ ಮತ್ತು ವಾಸ್ತವ ಜೀವನದಲ್ಲಿ ತಮ್ಮ ಅಭಿಮತಕ್ಕೆ ಅನುಸಾರ ನಡೆದುಕೊಳ್ಳಲು ಸಾಧ್ಯವಾಗುವ ಮನುಷ್ಯರ ತಯಾರಿಯೇ ಉತ್ತಮ ‘ಮಾನವಿಕ’ ಶಿಕ್ಷಣದ ಫಲಿತಾಂಶವಾಗಿದೆ.

ಲಿಬರಲ್ ಕಲಾ ವಿಶ್ವವಿದ್ಯಾಲಯಗಳನ್ನು ಬದಿಗಿಡಿ, ಯಾವುದೇ ವಿಶ್ವವಿದ್ಯಾಲಯ ಈ ಕಾಲದ ವಾಸ್ತವದ ಪ್ರಶ್ನೆಗಳ ಜೊತೆಗೆ ಸಕ್ರಿಯ ಮುಖಾಮುಖಿಯನ್ನು ಗೌರವಿಸಿ ಪೋಷಿಸದೆ ತನ್ನ ಶೈಕ್ಷಣಿಕ ಧ್ಯೇಯವನ್ನು ಪೂರೈಸುವುದು ಸಾಧ್ಯವೇ? ಇಂತಹ ಸಕ್ರಿಯ ಮುಖಾಮುಖಿಯನ್ನು ನಾಗರಿಕ ಮೌಲ್ಯವಾಗಿ ಸಂಭ್ರಮಿಸಬೇಕು. ಇದು ಆ್ಯಕ್ಟಿವಿಸಂ ಎಂದಾದರೆ, ಲಿಬರಲ್ ಕಲಾಶಿಕ್ಷಣ ಮತ್ತು ಆ್ಯಕ್ಟಿವಿಸಂ ನಡುವೆ ಹೊಕ್ಕುಳಬಳ್ಳಿಯ ಸಂಬಂಧವಿದೆ.

ವಿಶ್ವವಿದ್ಯಾಲಯವೊಂದು ಯಾವುದೇ ರೀತಿಯ ಪಕ್ಷಪಾತವನ್ನು ಉತ್ತೇಜಿಸಬೇಕು ಎಂಬುದು ಇದರ ಅರ್ಥವಲ್ಲ. ಎಲ್ಲ ರೀತಿಯ ಚಿಂತನೆಗಳು ಮತ್ತು ಸಿದ್ಧಾಂತಗಳಿಗೆ ನ್ಯಾಯಯುತ ಅವಕಾಶ ಸಿಗುವುದನ್ನು ಖಾತರಿಪಡಿಸಬೇಕು. ಅಲಿ ಖಾನ್ ಅವರಂತಹ ಬೋಧಕರ ರಾಜಕೀಯ ನಿಲುವು ಚರ್ಚೆಗೆ ಮುಕ್ತ ಎಂಬಂತೆ ಇರುವವರೆಗೆ ಶಿಕ್ಷಣಕ್ಕೆ ಅದು ಅಡ್ಡಿಯಾಗದು. ಅಂಗೀಕಾರವಿಲ್ಲದ ಅಥವಾ ಸಾಮಾನ್ಯ ಜ್ಞಾನದ ಮೂಲಕವೇ ಪಸರಿಸುವ ಪಕ್ಷಪಾತವೇ ಸಿದ್ಧಾಂತ ಹೇರಿಕೆಯು ನಿಜವಾದ ಅಪಾಯ.

ಅಲಿ ಖಾನ್ ಪ್ರಕರಣದಲ್ಲಿ ಇರುವ ಸಂಕುಚಿತ ಪ್ರಶ್ನೆಯ ಕಾರಣಕ್ಕೆ ಈ ಮೂಲಭೂತ ಚರ್ಚೆಯು ದಾರಿ ತಪ್ಪಬಾರದು. ಬೋಧಕರು ಅಥವಾ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಪ್ರತಿಯೊಂದು ಪೋಸ್ಟ್ ಅಥವಾ ಪ್ರಬಂಧವನ್ನು ನ್ಯಾಯಾಲಯದಲ್ಲಿ ವಿಶ್ವವಿದ್ಯಾಲಯವು ಸಮರ್ಥಿಸಿಕೊಳ್ಳಬೇಕು ಎಂದು ಯಾರೂ ಹೇಳುವುದಿಲ್ಲ. ನಿಜವಾದ ಪ್ರಶ್ನೆಗಳು ಇವು: ವಿಶ್ವವಿದ್ಯಾಲಯ ಅಥವಾ ಇತರ ಸಂಸ್ಥೆಗಳು ರಾಜಕೀಯ ದುರುದ್ದೇಶದ ದ್ವೇಷ ಸಾಧನೆಯ ಸಂದರ್ಭದಲ್ಲಿ ಅವರ ಪರವಾಗಿ ನಿಲ್ಲಬೇಕೇ ಬೇಡವೇ? ಅಥವಾ ವಿವಾದ ಸೃಷ್ಟಿಯಾದ ಕೂಡಲೇ ಅವರನ್ನು ಕೈಬಿಡಬೇಕೆ ಮತ್ತು ಅವರು ತಮ್ಮವರಲ್ಲ ಎಂದು ಹೇಳಿಬಿಡಬೇಕೆ? ಕಾನೂನು ಬೆಂಬಲ ನೀಡುವುದು ಸಂಸ್ಥೆಗೆ ಸಾಧ್ಯವಿಲ್ಲದೇ ಇದ್ದರೂ ನೈತಿಕ ಬೆಂಬಲವನ್ನು ನೀಡಲು ಸಾಧ್ಯವಿಲ್ಲವೇ? ಅದೂ ಆಗದಿದ್ದರೆ ಕನಿಷ್ಠ ಪಕ್ಷ ಸುಮ್ಮನಾದರೂ ಇರಬಹುದಲ್ಲವೇ?

ಅಶೋಕ ವಿಶ್ವವಿದ್ಯಾಲಯದ ಪ್ರತಿಕ್ರಿಯೆಯು ಬೇಸರದಾಯಕ ಮತ್ತು ಸಂಸ್ಥೆ ಮಾಡಬೇಕಾದು ದನ್ನು ಮಾಡಿಲ್ಲ ಎಂಬ ಭಾವವನ್ನು ಮೂಡಿಸಿದೆ. ಮೊದಲನೆಯದಾಗಿ, ಅಲಿ ಖಾನ್ ಅವರ ಬಂಧನಕ್ಕೂ ಮುನ್ನವೇ ಅವರ ಪೋಸ್ಟ್ ಸಶಸ್ತ್ರ ಪಡೆಗಳ ವಿರುದ್ಧವಾಗಿದೆ ಎಂಬ ಆರೋಪವನ್ನು ಒಪ್ಪಿಕೊಂಡಿತು. ಬಂಧನದ ಬಳಿಕ, ಮಾಧ್ಯಮ ಮತ್ತು ಸರ್ಕಾರದ ರೀತಿಯಲ್ಲಿಯೇ ವಿಶ್ವವಿದ್ಯಾಲಯ ಕೂಡ ಅವರು ತಪ್ಪಿತಸ್ಥ ಎಂಬ ಭಾವನೆಯನ್ನು ಹೊಂದಿತು. ಈಗ, ಬಿಖ್ಚಂದಾನಿ ಅವರ ಪತ್ರವು ಎಲ್ಲವನ್ನೂ ಬಿಡಿಸಿಟ್ಟಿದೆ. ಅಲಿ ಖಾನ್ ಅವರ ಮೇಲೆ, ಸಂಸ್ಥೆಯನ್ನು ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಂಡ ಹಾಗೂ ರಾಜಕೀಯ ಕಾರ್ಯಸೂಚಿಗಾಗಿ ಅಶೋಕ ವಿಶ್ವವಿದ್ಯಾಲಯದ ವೇದಿಕೆಯನ್ನು ದುರುಪಯೋಗ ಮಾಡಿಕೊಂಡಿರುವ ಆರೋಪ ಹೊರಿಸಿ, ಇಂತಹ ‘ರಾಜಕೀಯ ಉದ್ದೇಶದ ವ್ಯಕ್ತಿ’ಗಳಿಂದ ವಿಶ್ವ ವಿದ್ಯಾಲಯವನ್ನು ರಕ್ಷಿಸಲು ನೀತಿಯೊಂದನ್ನು ರೂಪಿಸಬೇಕಾಗಿದೆ ಎಂದು ಹೇಳಲಾಗಿದೆ.

ಬಿಖ್ಚಂದಾನಿ ಅವರ ಪತ್ರವನ್ನು ಸ್ಥಾಪಕರ ಸಂದೇಶ ಎಂದು ಭಾವಿಸಿದರೆ, ಅಲ್ಲಿ ಇರುವ ಸುಳಿವುಗಳು ಬಹಳ ಸ್ಪಷ್ಟ ಮತ್ತು ಕಳವಳಕಾರಿ.

ವಿಶ್ವವಿದ್ಯಾಲಯದ ಆಡಳಿತವು ಯಾವ ಎಡರು ತೊಡರುಗಳ ನಡುವೆ ಕೆಲಸ ಮಾಡುತ್ತಿದೆ ಎಂಬುದು ನಮಗೆ ತಿಳಿದಿಲ್ಲ. ಲಿಬರಲ್ ವಿಶ್ವವಿದ್ಯಾಲಯವೊಂದನ್ನು ಲಿಬರಲ್ ಅಲ್ಲದ ಆಡಳಿತದ ಅಡಿಯಲ್ಲಿ ನಡೆಸಿಕೊಂಡು ಹೋಗುವುದೇ ಒಂದು ವೈರುಧ್ಯ. ಇನ್ನೂ ಹೆಚ್ಚಿನದಕ್ಕೆ ತಲೆ ಕೊಡಲು ಸಾಧ್ಯವಿಲ್ಲ ಎಂದು ಸ್ಥಾಪಕರು ಭಾವಿಸಿರಬಹುದು. ಸಂಸ್ಥೆಯ ಅಸ್ತಿತ್ವವನ್ನೇ ಅಪಾಯಕ್ಕೆ ಒಡ್ಡಿ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಭಾವಿಸಿರಬಹುದು ಅಥವಾ ಅವರ ವ್ಯಾಪಾರ ಹಿತಾಸಕ್ತಿಗಳೂ ಅಡ್ಡ ಬಂದಿರಬಹುದು. ಇವುಗಳ ನ್ನೆಲ್ಲ ಅರ್ಥ ಮಾಡಿಕೊಳ್ಳಬಹುದು. ಆದರೆ, ವಿಶ್ವ ವಿದ್ಯಾಲಯವು ನೈತಿಕ ಮೇಲ್ಮೆಯನ್ನು ಮೆರೆಯುವ ಅಗತ್ಯ ಇರಲಿಲ್ಲ. ಸಂತ್ರಸ್ತರನ್ನು ಸಮರ್ಥಿಸಿಕೊಳ್ಳಲು ಆಗುತ್ತಿಲ್ಲ ಎಂದಮೇಲೆ ಅವರ ಮೇಲೆ ಮತ್ತೊಂದು ಕಲ್ಲು ಹಾಕುವ ಕೆಲಸ ಮಾಡಬಾರದು.

ಕೊನೆಯದಾಗಿ ಒಂದು ಚಿಂತನೆ. ಈ ಚರ್ಚೆಯು ಅಶೋಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಅದರ ಸ್ಥಾಪಕರನ್ನು ಮೀರಿ ಬೋಧಕರು, ವಿದ್ಯಾರ್ಥಿಗಳು, ಹೆತ್ತವರು ಮತ್ತು ಹಳೆ ವಿದ್ಯಾರ್ಥಿ ಗಳನ್ನು ಒಳಗೊಂಡ ಅಶೋಕ ಸಮುದಾಯಕ್ಕೂ ಪಸರಿಸಬಾರದೇ? ಏಕೆಂದರೆ, ಈ ಶಿಕ್ಷಣ ಸಂಸ್ಥೆಯಲ್ಲಿ ಲಿಬರಲ್ ಶಿಕ್ಷಣವನ್ನು ಸಂರಕ್ಷಿಸುವುದರಲ್ಲಿ ಇವರೆಲ್ಲರೂ ಭಾಗಿಯಾಗಬೇಕು.

ಈ ಚರ್ಚೆಯು ಅಶೋಕ ವಿಶ್ವವಿದ್ಯಾಲಯದಂತಹ ಪ್ರಸಿದ್ಧ ಮತ್ತು ಪ್ರಮುಖ ಇತರ ಸಂಸ್ಥೆಗಳನ್ನೂ ಒಳಗೊಳ್ಳಬೇಡವೇ? ದೇಶದಲ್ಲಿ ಲಿಬರಲ್ ಶಿಕ್ಷಣದ ನಿಜವಾದ ದುರಂತವು ಅಶೋಕ ವಿಶ್ವವಿದ್ಯಾಲಯದಲ್ಲಿ ಏನು ನಡೆಯಿತು ಎಂಬುದಷ್ಟೇ ಅಲ್ಲ. ಲಿಬರಲ್ ಶಿಕ್ಷಣಕ್ಕೆ ಹೆಸರಾದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ನಂತಹ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಲಿಬರಲ್ ಶಿಕ್ಷಣವನ್ನು ಹೇಗೆ ಬುಡಮೇಲು ಮಾಡಲಾಗಿದೆ ಎಂಬುದಾಗಿದೆ. ಪ್ರತಿಷ್ಠಿತ ಸಂಸ್ಥೆಗಳು ಮತ್ತು ಅವುಗಳಿಗೆ ದೇಣಿಗೆ ನೀಡುವ ಶ್ರೀಮಂತರು ಆ್ಯಕ್ಟಿವಿಸಂ ಅನ್ನು ಬೆಂಬಲಿಸುವುದಿಲ್ಲ. ಆ್ಯಕ್ಟಿವಿಸಂ ಅನ್ನು ಜನರೇ ಬೆಂಬಲಿಸಬೇಕಾಗಿದೆ. ಅದನ್ನು ಹೇಳಲು ನಮಗೆ ಚಾಟ್ಬಾಟ್ನ ಅವಶ್ಯಕತೆ ಇಲ್ಲವೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.