ಗುರುವಾರ , ಫೆಬ್ರವರಿ 9, 2023
30 °C

ಚುರುಮುರಿ: ₹ 39 ಕೋಟಿ ಪೆನ್!

ಆನಂದ Updated:

ಅಕ್ಷರ ಗಾತ್ರ : | |

Prajavani

‘ಒಂದು ಪೆನ್ನಿನ ಬೆಲೆ ಎಷ್ಟಾಗುತ್ತೇರಿ?’ ಮಡದಿ ಕೇಳಿದಳು.

ಇದು ಕೀ ಬೋರ್ಡ್‌ ಯುಗ. ‘ಐ ಲವ್ ಯೂ’ ಎಂದು ನಮ್ಮ ಕಾಲದಲ್ಲಿ ಪೆನ್ನಿನಲ್ಲಿ ಬರೆದು ಕಳಿಸೋರು. ಈಗ ಎಸ್‍ಎಂಎಸ್ ಮತ್ತಿನ್ನೇನೋ ಕಳಿಸ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮೇಡಂ ಪೆನ್ನಿನ ಬೆಲೆ ಕೇಳ್ತಿದಾರೆ!

ಗೂಗಲ್ ಸರ್ಚ್ ಮಾಡಿದೆ. ಗರಿಷ್ಠ ಬೆಲೆ ನೋಡಿದಾಗ ತಲೆ ಸುತ್ತಿದಂತಾಯಿತು.

‘ಯಾಕ್ರೀ ಏನಾಯಿತು?’

‘ರೇಟ್ ನೋಡಿ ಗಾಬರಿಯಾಯಿತು’ ಎಂದೆ. ಏಕೆಂದರೆ ಪಾರ್ಕರ್ ಡಿಲಕ್ಸ್ ಪೆನ್ ಬೆಲೆ ₹ 23,405 ಆಗಿದ್ದರೆ ಸೈಲರ್ ಫೌಂಟನ್ ಎಂಬ ಪೆನ್ನಿನ ಬೆಲೆ ಕೇವಲ ₹ 2.15 ಲಕ್ಷ!

‘ಅದು ಹೋಲ್‍ಸೇಲ್ ರೇಟ್ 12 ಡಝನ್‍ಗೊ ಅಥವಾ ಸಾವಿರಕ್ಕೋ ಇರಬೇಕು. ಕನ್ನಡಕ ಹಾಕಿಕೊಂಡು ನೋಡಿ’ ಎಂದಳು. ನೋಡಿದೆ. ‘ಇಲ್ಲಮ್ಮ, ಒಂದೊಂದು ಪೆನ್ನಿನ ಬೆಲೆ ಕೇವಲ ಅಷ್ಟೇ, ಪ್ಲಸ್ ಜಿಎಸ್‍ಟಿ’ ಎಂದು ಖಾತರಿ ಮಾಡಿದೆ.

‘ಅದಿರಲಿ, ಪೆನ್ನಿನ ಬೆಲೆ ಯಾಕೆ ಬೇಕು? ನಿನಗೆ ರಂಗೋಲಿ ಹಾಕೋದಿಕ್ಕೆ ಚಾಕ್‍ಪೀಸ್ ಇದ್ದರೆ ಸಾಕು...’

‘ನಾನು ಹೇಳೋ ಪೆನ್ನಿನ ಬೆಲೆ ಕೇಳಿದರೆ ನಿಮಗೆ ಅಟ್ಯಾಕ್ಕೇ ಆಗಬಹುದು’ ಎಂದಳು. ಸಂಕೋಚದಿಂದ ಹಾರ್ಟ್ ಪದ ಎಡಿಟ್ ಮಾಡಿದ್ದಳು.

‘ಅದ್ಯಾವುದಮ್ಮ?’

‘ನಮ್ಮ ಸ್ಟಾಲಿನ್ ಸಾಹೇಬ್ರು 42 ಮೀಟರ್ ಎತ್ತರದ ಪೆನ್ ಖರೀದಿಸುತ್ತಿದ್ದಾರೆ. ಬೆಲೆ ಬರೀ 39 ಕೋಟಿ ರೂಪಾಯಿ’.

‘ಸ್ಟಾಲಿನ್ನರಿಗೇಕೆ ಪೆನ್ನು? ಅವರಪ್ಪ ಕರುಣಾನಿಧಿ ಪೆನ್ ಉಪಯೋಗಿಸುತ್ತಿದ್ದರು. ಇವರು ಕೀ ಬೋರ್ಡ್, ಡ್ಯಾಶ್ ಬೋರ್ಡ್ ಸಿಎಮ್ಮು’.

‘ಅದು ಅವರಿಗಲ್ಲ. ಅಪ್ಪನಿಗೆ ಸ್ಮಾರಕವಾಗಲಿದೆ ಆ ಪೆನ್ನು. ಚೆನ್ನೈ ಸಮುದ್ರ ತೀರದಲ್ಲಿ ಎರಡು ಎಕರೆ ಜಾಗದಲ್ಲಿ ಅದನ್ನು ಸ್ಥಾಪಿಸಲಿದ್ದಾರೆ’.

‘ಹಾಗಿದ್ದರೆ ಇದು ಹೊಸ ಐಡಿಯಾ. ನಮ್ಮ ದೇವರಾಜ ಅರಸರಿಗೆ ಅವರು ಉಪಯೋಗಿ
ಸುತ್ತಿದ್ದ ಪೈಪ್ ತರಹ ಮೆಮೋರಿಯಲ್
ಕಟ್ಟಬಹುದಿತ್ತು. ಯಾರಿಗೂ ಹೊಳೆಯಲೇ ಇಲ್ಲ’.

ಈ ಪೆನ್ನು ಖಡ್ಗಕ್ಕಿಂತ ಮೊನಚೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.