ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯ್ಕಾಟ್‌ ಟು ಬ್ಲ್ಯಾಕ್‌ಮೇಲ್!

Last Updated 26 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ರಾಜಕೀಯಕ್ಕೆ ಬರೋ ಇಂಟರೆಸ್ಟ್‌ ಇರುವ ಯುವಸಮೂಹಕ್ಕೆ ಟ್ರೈನಿಂಗ್ ಕೊಡೋದಕ್ಕಾಗಿ ‘ಪೊಲಿಟಿಕಲ್‌ ಪಾಠಶಾಲೆ’ ಆರಂಭಿಸಿದ್ದ ಮುದ್ದಣ್ಣ, ‘ಸಂಪತ್ತಿಗೆ ಸವಾಲ್’ ಮಂಜುಳಾ ಅವರ ಜೆಂಟ್ಸ್‌ ವರ್ಷನ್‌ನಲ್ಲಿ‘ಬಿಕನಾಸಿ ಹಳೆ ಬಿಕನಾಸಿ’ ಅಂತ ಬಯ್ಯೋದನ್ನು ಹೇಳಿಕೊಡ್ತಿದ್ದ.

‘ಇದೇನ್ ಮುದ್ದಣ್ಣ, ಎಷ್ಟ್‌ ಒಳ್ಳೊಳ್ಳೆ ಬೈಗುಳಗಳಿವೆ. ಅವನ್ನೆಲ್ಲ ಬಿಟ್ಟು ಇಷ್ಟು ಸಾಫ್ಟ್‌ ಬೈಗುಳ ಹೇಳಿಕೊಡ್ತಿದ್ದೀಯಲ್ಲ...’ ಅಸಮಾಧಾನದಿಂದಲೇ ಕೇಳಿದ ಹಿತೈಷಿ ವಿಜಿ.

‘ಇದರಲ್ಲಿ ನಿನಗೆ ನನ್ನಷ್ಟು ಅನುಭವ ಇಲ್ಲ ಸುಮ್ನಿರು. ಈಗೇನಿದ್ದರೂ ಇಂಗ್ಲಿಷ್‌ನ ‘ಬಿ’ಯಿಂದ ಸ್ಟಾರ್ಟ್‌ ಆಗೋ ಪದಗಳೇ ಟ್ರೆಂಡಿಂಗ್‌ನಲ್ಲಿ ಇರೋದು...’

‘ಹೌದಾ... ಅದ್ಹೇಗೆ...?’

‘ಮೊದಲನೇ ಉದಾಹರಣೆ ಬಾಯ್ಕಾಟ್. ಬಟ್ಟೆ, ಮಾಂಸ, ಮಾವು ನಂತರ ಚಿನ್ನ... ಹೀಗೆ ಬಾಯ್ಕಾಟ್ ಅನ್ನೋರಿಗೆಲ್ಲ ಎಷ್ಟ್ ಪಬ್ಲಿಸಿಟಿ ಸಿಗ್ತಿದೆ ನೋಡು’.

‘ಅದೂ ಹೌದು. ಬಾಯ್ಕಾಟ್ ಅನ್ನೋರೇ ಬಾಸ್ ಅನ್ನೋ ಹಾಗಾಗಿದೆ. ಮುಂದೆ...’

‘ಎರಡನೇದು ಬುಲ್ಡೋಜರ್. ಈಗ ಅದು ನಮ್ಮ ರಾಷ್ಟ್ರೀಯ ವಾಹನ. ಅದರ ಬಗ್ಗೆ ಯೂಥ್‌ಗೆ ಹೇಳದಿದ್ರೆ ಹೇಗೆ ಹೇಳು? ‘ಬುಲ್ಡೋಜರ್‌– ಉಸಿರೆತ್ತಿದರೆ ನೆಲಸಮ’ ಅಂತ ಸಪರೇಟ್‌ ಚಾಪ್ಟರ್‍ರೇ ಇದೆ ಅದರ ಬಗ್ಗೆ...’

‘ಮೂರನೆಯದು ಬ್ಲ್ಯಾಕ್‌ಮೇಲ್‌. ಮೇಲಿನಿಂದ ಹಿಡಿದು ಕೆಳಗೆ ಇರೋರನ್ನೆಲ್ಲ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಬೇಕು ಅಂದ್ರೆ ಈ ಅಸ್ತ್ರ ಬೇಕೇ ಬೇಕು. ಯಾರನ್ನು, ಯಾವಾಗ, ಯಾವ ಯಾವ ರೀತಿ ಬ್ಲ್ಯಾಕ್‌ಮೇಲ್ ಮಾಡ ಬೇಕು ಅನ್ನೋದನ್ನ ಇದರಲ್ಲಿ ಹೇಳಿಕೊಡ್ತೇವೆ...’

‘ಹೇಗೆ ಮಾತಾಡಬೇಕು ಅನ್ನೋದನ್ನ ಮಾತ್ರ ಹೇಳಿಕೊಡ್ತೀರೋ, ಹೊಸ ಪಾರ್ಟಿ ಕಟ್ಟೋರಿಗೆ ಪಕ್ಷದ ಹೆಸರು ಕೂಡ ಸೂಚಿಸ್ತೀರೋ? ಮತ್ತೆಇದರಲ್ಲೂ ಕಂಡೀಷನ್‌ಗಳೇನಾದರೂ ಇದಾವಾ...?’

‘ಇದೆ, ಪಾರ್ಟಿ ಹೆಸರು ಕೂಡ ‘ಬಿ’ಯಿಂದ ಸ್ಟಾರ್ಟ್‌ ಆಗಬೇಕು...!’‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT